siraj 2

 

 

ನಿನ್ನೆ ಕೊಲಂಬೋದಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ತನ್ನ ಆಕರ್ಷಕ ಬೌಲಿಂಗ್  ಪ್ರದರ್ಶನದಿಂದ ಶ್ರೀಲಂಕಾ ತಂಡವನ್ನು ಐವತ್ತು ರನ್ ಗಳಿಗೆ ಹೆಡೆಮುರಿಕಟ್ಟಿ ಭಾರತಕ್ಕೆ ಸುಲಭ ಜಯ ತಂದಿತ್ತಿದ್ದ ಭಾರತದ ವೇಗದ ಬೌಲರ್ ಮಹಮ್ಮದ್ ಸಿರಾಜ್ ತನಗೆ ದೊರೆತ ಪಂದ್ಯಶ್ರೇಷ್ಠ ಪ್ರಶಸ್ತಿ ಮೊತ್ತವನ್ನು ಕ್ರೀಡಾಂಗಣದ ಸಿಬ್ಬಂದಿಗೆ ದೇಣಿಗೆ ಆಗಿ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

ನಿನ್ನಿನ ಪಂದ್ಯದಲ್ಲಿ 7 ಓವರ್ ಗಳಲ್ಲಿ ಕೇವಲ 21 ರನ್ ನೀಡಿ ಲಂಕಾ ತಂಡದ ಅಗ್ರ 6 ವಿಕೆಟ್ ಗಳನ್ನು ಉರುಳಿಸಿದ್ದ ಸಿರಾಜ್ ಲಂಕಾ ತಂಡ ಕೇವಲ 50 ರನ್ ಗಳಿಗೆ ಆಲೌಟ್ ಆಗುವಂತೆ ಮಾಡಿದ್ದರು. ಸಿರಾಜ್ ಅವರಿಗೆ ಉತ್ತಮ ಸಾಥ್ ನೀಡಿದ್ದ ಹಾರ್ದಿಕ್ ಪಾಂಡ್ಯ 3 ವಿಕೆಟ್  ಮತ್ತು ಬುಮ್ರಾ 1 ವಿಕೆಟ್ ಪಡೆದು ಲಂಕಾ ಇನ್ನಿಂಗ್ಸ್ ಗೆ ಇತಿಶ್ರೀ ಹಾಡಿದ್ದರು.

ಶ್ರೀಲಂಕಾ ನೀಡಿದ್ದ 50 ರನ್ ಗಳನ್ನು ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದೇ ಕೇವಲ 6.1 ಓವರ್ ಗಳಲ್ಲಿ ಗುರಿಬೆನ್ನಟ್ಟಿ ಅನಾಯಾಸವಾಗಿ ಪಂದ್ಯವನ್ನು ಗೆದ್ದಿತ್ತ. ಇದರೊಂದಿಗೆ ಭಾರತ ಎಂಟನೇ ಬಾರಿ ಏಷ್ಯಾ ಕಪ್ ಜಯಿಸಿ ಬೀಗಿತ್ತು. ಆರಂಭಿಕರಾದ ಶುಬ್ಮನ್ ಗಿಲ್ ಮತ್ತು ಇಸಾನ್ ಕಿಸನ್ ಅಜೇಯರಾಗಿ ಗುರಿಮುಟ್ಟಿ ಗೆಲುವಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದ್ದರು.

 

ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ಗಳಿಸಿದ 5000 ಯು.ಎಸ್. ಡಾಲರ್ ಮೊತ್ತವನ್ನು (ಅಂದಾಜು 4.25 ಲಕ್ಷ ರೂ.) ಸಿರಾಜ್ ಕೊಲಂಬೋದ ಪ್ರೇಮದಾಸ ಸ್ಟೇಡಿಯಂ ಮೈದಾನದ ಸಿಬ್ಬಂದಿಗೆ ಕೊಡುಗೆಯಾಗಿ ನೀಡಿದರು.

ಏಷ್ಯಾಕಪ್ ವೇಳೆ ಬಹುತೇಕ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿತ್ತು. ಈ ಸಂದರ್ಭದಲ್ಲಿ ಮೈದಾನದ ಸಿಬ್ಬಂದಿ ಹರಸಾಹಸದಿಂದ ಮೈದಾನವನ್ನು ಆಟಕ್ಕೆ ಮುಕ್ತಗೊಳಿಸಿ ಸಹಕರಿಸುತ್ತಿದ್ದರು. ಮೈದಾನದ ಸಿಬ್ಬಂದಿಗಳ ಈ ಕಾರ್ಯತತ್ಪರತೆಯನ್ನು ಗಮನಿಸಿ ಸಿರಾಜ್ ತಮಗೆ ಬಂದಿದ್ದ ಬಹುಮಾನದ ಮೊತ್ತವನ್ನು ಅವರಿಗೆ ಕೊಡುಗೆಯಾಗಿ ನೀಡಿ ತಮ್ಮ  ಹೃದಯವೈಶಾಲ್ಯತೆ ಮೆರೆದಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ