ನಿನ್ನೆ ನಡೆದ ಏಕದಿನ ವಿಶ್ವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವಿನ ಹಣಾಹಣಿಯಲ್ಲಿ ನ್ಯೂಜಿಲ್ಯಾಂಡ್ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿತು.
ಈ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದ ರಾಚಿನ್ ರವೀಂದ್ರ ಈಗ ಕ್ರಿಕೆಟ್ ವಿಶ್ವದ ಗಮನ ಸೆಳೆದಿದ್ದಾರೆ.
ನ್ಯೂಜಿಲೆಂಡ್ ತಂಡದ ಆಲ್ರೌಂಡರ್ ಆಟಗಾರರಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಬಲದ ಮೂಲಕ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಚಿನ್ ಬೌಲಿಂಗ್ ನಲ್ಲಿ ಕೊಂಚ ದುಬಾರಿ ಎನಿಸಿದರು ಒಂದು ಪ್ರಮುಖ ವಿಕೆಟ್ ಗಳಿಸಿದರು ಬ್ಯಾಟಿಂಗ್ನಲ್ಲಿ ಅಜೇಯ 123 ರನ್ನು ಗಳಿಸಿದರು.
ರಾಚಿನ್ ರವೀಂದ್ರ ನಮ್ಮ ಭಾರತ ಮೂಲದವರು ಅದರಲ್ಲೂ ನಮ್ಮ ಕರ್ನಾಟಕದ ಬೆಂಗಳೂರು ಮೂಲದವರು ಎಂಬುದು ಹೆಮ್ಮೆ.
ಇವರ ತಂದೆ ಬೆಂಗಳೂರು ಮೂಲದ ರವಿ ಕೃಷ್ಣಮೂರ್ತಿ ಕ್ರಿಕೆಟ್ ಪ್ರೇಮಿ ಹಾಗೂ ಕ್ಲಬ್ ಮಟ್ಟದ ಆಟಗಾರ, ಸಾಫ್ಟ್ರ್ ಕಂಪನಿಯ ಉದ್ಯೋಗಿಯಾದ ಅವರು 1990 ರಿಂದ ನ್ಯೂಝಿಲೆಂಡ್ ದೇಶದಲ್ಲಿ ನೆಲೆಸುತ್ತಾರೆ.
18 ನವಂಬರ 1999ರಲ್ಲಿ ಜನಿಸಿದ ತಮ್ಮ ಮಗನಿಗೆ, ರಾಹುಲ್ ದ್ರಾವಿಡರ “ರಾ” ಹಾಗೂ ಸಚಿನ್ ತೆಂಡೂಲ್ಕರರ “ಚಿನ್” ಸೇರಿಸಿ “ರಾಚಿನ್” ರವೀಂದ್ರ ಎಂದು ನಾಮಕರಣ ಮಾಡುತ್ತಾರೆ.

ತಮ್ಮ ಮಗನಿಗೆ ಐದನೇ ವರ್ಷದಿಂದಲೇ ಕ್ರಿಕೆಟ್ ತರಬೇತಿಯನ್ನು ನೀಡಲು ಪ್ರಾರಂಭಿಸುತ್ತಾರೆ.
ರಾಚಿನ್ ರವೀಂದ್ರ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲಿ ತನ್ನ ಛಾಪು ಮೂಡಿಸಿ ನ್ಯೂಜಿಲೆಂಡ್ ಅಂಡರ್ 19 ತಂಡಕ್ಕೆ ಆಯ್ಕೆಯಾದರು. ಎಡಗೈ ಬ್ಯಾಟಿಂಗ್ ಮತ್ತು ಎಡಗೈ ಮಧ್ಯಮ ವೇಗದ ಬೌಲರ್ ಆಗಿರುವ ರವೀಂದ್ರ 2021 ರಲ್ಲಿ ಭಾರತದ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ.
ವಿಶ್ವಕಪ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನದ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ನಿನ್ನೆ ಅಹ್ಮದಾಬಾದಿನಲ್ಲಿ ನಡೆದ, 2023 ವಿಶ್ವ ಕಪ್‌ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 123 ರನ್ ಬಾರಿಸಿ ಅಬಾಧಿತರಾಗಿ ಉಳಿಯುತ್ತಾರೆ.
ರಾಚಿನ್ ರವೀಂದ್ರ ಪೋಷಕರು ಕಂಡ ಕನಸನ್ನು ತಮ್ಮ ಪರಿಶ್ರಮದ ಮೂಲದ ನನಸಾಗಿಸಿದ್ದಾರೆ.




