govu

 

 

ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಚಿನ್ನದ ಸರವನ್ನು ನುಂಗಿದ ಹಸುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಸರವನ್ನು ಹೊರತೆಗೆದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮತ್ತಿಮನೆಯಲ್ಲಿ ಭಾನುವಾರ ನಡೆದಿದೆ.

ಗೋಪೂಜೆಗೆ ನಂತರ ಇಟ್ಟಿದ್ದ ಸರ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಇಡೀ ಮನೆ ತುಂಬಾ ಹುಡುಕಾಡಿದ್ದರು. ಆದರೆ ಸರ ಪತ್ತೆಯಾಗಿರಲಿಲ್ಲ.

ಪ್ರಸಾದದ ಜೊತೆ ಬಂಗಾರದ ಸರವನ್ನು ಹಸು ನುಂಗಿದೆ ಎಂದು ಕುಟುಂಬಸ್ಥರು ಅಂದಾಜಿಸಿದ್ದರು. ಸರ ಹೋದರೆ ಹೋಗಲಿ ಒಂದು ವೇಳೆ ಹಸು ನುಂಗಿದ್ದರೆ ಸಗಣಿಯ ಮೂಲಕ ಹೊರಬರಬಹುದು  ಎಂದು ಮನೆಮಂದಿ ಸುಮ್ಮನಾಗಿದ್ದರು.

ಆದರೆ ಬಂಗಾರ ನುಂಗಿದ ದಿನದಿಂದ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿತ್ತು ಮತ್ತು ಮಂಕಾಗಿತ್ತು. ಇದು ಹಸುವಿನ ಪ್ರಾಣಕ್ಕೆ ಅಪಾಯ ಉಂಟುಮಾಡಬಹುದು ಎಂದು ಭಯಪಟ್ಟ ಮನೆಯವರು ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದರು.

ಪಶುವೈದ್ಯರು ಸ್ಥಳಕ್ಕೆಆಗಮಿಸಿ ಸೋಮವಾರ ಯಶಸ್ವಿ ಶಸ್ತಚಿಕಿತ್ಸೆ ಮಾಡುವ ಮೂಲಕ ಬಂಗಾರದ ಸರವನ್ನು ಹೊರ ತೆಗೆದಿದ್ದಾರೆ. ಸದ್ಯ ಹಸು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ