ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ವಲಯದ ಗೋಣಿಬೀಡು ಸೂಪರ್ ಕನ್ವೆನ್ಷನ್ ಹಾಲಿನಲ್ಲಿ ಆಯೋಜಿಸಿದ ಮಧ್ಯವರ್ಧನ ಶಿಬಿರದ ಸಮರೋಪ ಸಮಾರಂಭ ನೆರವೇರಿತು. ಕಾರ್ಯಕ್ರಮವನ್ನು ಯೋಜನೆಯ ಚಿಕ್ಕಮಂಗಳೂರು ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಮತ್ತು 1764ನೇ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಗಿರೀಶ್ ಮಣ್ಣೀಕೆರೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೆ.ಎಸ್. ರಘು, ತಾಲ್ಲೂಕು ಬಿ.ಜೆ.ಪಿ.ಆಧ್ಯಕ್ಷರು, ಪ್ರಶಾಂತ್ ಚಿಪ್ರಗುತ್ತಿ ಸ್ಥಾಪಕ ಅಧ್ಯಕ್ಷರು, ಜಿಲ್ಲಾ ಜನ ಜಾಗೃತಿ ವೇದಿಕೆ ಚಿಕ್ಕಮಗಳೂರು, ಪ್ರಾದೇಶಿಕ ಯೋಜನಾಧಿಕಾರಿ ನಾಗರಾಜ್ ಕುಲಾಲ್, ಶಿಬಿರಾಧಿಕಾರಿ ದಿವಾಕರ್ ಪೂಜಾರಿ, ಮೂಡಿಗೆರೆ ತಾಲೂಕು ಯೋಜನಾಧಿಕಾರಿಗಳಾದ ಶಿವಾನಂದ್ ಪಿ., ಬಿ.ಜೆ.ಪಿ. ಮುಖಂಡರಾದ ಮೋಹನ್ ಜಾಣಿಗೆ, ಜೆಸಿಐ ಅಧ್ಯಕ್ಷರಾದ ಚಂದ್ರಶೇಖರ್ ಆರ್, ರೋಟರಿ ಅಧ್ಯಕ್ಷರಾದ ಸಂದೀಪ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಮಹೇಶ್ ಸಾಲುಮರ, ರಘು ವಿನಾಯಕ ಗೆಳೆಯರ ಬಳಗದ ಅಧ್ಯಕ್ಷರು, ಮೂಡಿಗೆರೆ ತಾಲೂಕಿನ ವಿಪತ್ತು ನಿರ್ವಹಣಾ ಮಾಸ್ಟರ್ ಪ್ರವೀಣ್ ಪೂಜಾರಿ ಭಾಗವಹಿಸಿದ್ದರು.
ಮೇಲ್ವಿಚಾರಕರಾದ ದೀಪಕ್ ಮತ್ತು ಎಲ್ಲಾ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು ಹಾಗೂ ಎಲ್ಲಾ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಶೌರ್ಯ ವಿಪತ್ತು ತಂಡದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿರುವ 1764ನೇ ಮಧ್ಯವರ್ಜನ ಶಿಬಿರವಾಗಿದೆ. ಈ ಶಿಬಿರದಲ್ಲಿ ಮೂಡಿಗೆರೆ ತಾಲ್ಲೂಕು ಮತ್ತು ಸುತ್ತಮುತ್ತಲಿನ ಅನೇಕ ಮಂದಿ ಮದ್ಯವ್ಯಸನಿಗಳು ಶಿಬಿರದಲ್ಲಿ ಭಾಗವಹಿಸಿ ಮದ್ಯವ್ಯಸನದಿಂದ ಮುಕ್ತರಾಗುವುದಾಗಿ ಮನಪರಿವರ್ತನೆಗೊಂಡು, ಮದ್ಯವ್ಯಸನದಿಂದ ದೂರವುಳಿಯುವ ಸಂಕಲ್ಪ ಮಾಡಿದರು.



