September 13, 2026
;
IMG_20231220_124958

 

 

7ನೇ ತರಗತಿ ವಿದ್ಯಾರ್ಥಿನಿ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೂಡಿಗೆರೆ ತಾಲೂಕಿನ ದಾರದಹಳ್ಳಿ ಸರ್ಕಾರಿ ಶಾಲೆಯ ಏಳನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಸೃಷ್ಟಿ(13ವರ್ಷ) ಮೃತಪಟ್ಟಿರುವ ವಿದ್ಯಾರ್ಥಿನಿ.

ಸೃಷ್ಟಿ ದಾರದಹಳ್ಳಿ ಸಮೀಪದ ಕೆಸವಳಲು ಗ್ರಾಮದ
ಅರ್ಜುನ ಮತ್ತು ಸುಮ ದಂಪತಿಗಳ ಮಗಳು.

ಸೃಷ್ಟಿ ಅವರ ತಂದೆ ಅರ್ಜುನ್ ದಾರದಹಳ್ಳಿ ಹೈಸ್ಕೂಲ್ ಎಸ್.ಡಿ.ಎಂ.ಸಿ.ಅಧ್ಯಕ್ಷರಾಗಿದ್ದಾರೆ.

ಇಂದು ಬುಧವಾರ ಬೆಳಿಗ್ಗೆ 9.30.ರ ಸಮಯದಲ್ಲಿ ಸಹಪಾಠಿಗಳೊಂದಿಗೆ ಶಾಲೆಗೆ ನಡೆದುಕೊಂಡು ಹೊಗುತಿದ್ದಾಗ ದಾರದಹಳ್ಳಿ ಸರ್ಕಲ್ ಬಳಿ ಇದ್ದಕ್ಕಿದಂತೆ ಕುಸಿದು ಬಿದ್ದಿದ್ದಾಳೆ. ಕೂಡಲೆ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ರವಾನಿಸಲಾಗಿತ್ತು.

ಆಸ್ಪತ್ರೆಗೆ ತಲುಪುವ ಹೊತ್ತಿಗಾಗಲೇ ಸೃಷ್ಟಿ ಕೊನೆಯುಸಿರೆಳೆದಿದ್ದಳು. ತೀವ್ರ ಹೃದಯಾಘಾತದಿಂದ ನಿಧನ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೃತ ಪಾರ್ಥಿವ ಶರೀರವನ್ನು ಕೆಸವಳಲಿಗೆ ತೆಗೆದುಕೊಂಡು ಹೊಗಲಾಗಿದೆ. ಇಂದು ಸಂಜೆ ಅಂತಿಮ ಸಂಸ್ಕಾರ ನಡೆಯುವ ಸಾದ್ಯತೆ ಇದೆ.

ಮೃತ ಸೃಷ್ಟಿ ತಾಯಿ, ತಂದೆ, ಇಬ್ಬರು ಸಹೊದರಿಯರು, ಒಬ್ಬ ಸಹೊದರರನ್ನು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.

ಮಗಳನ್ನು ಕಳೆದುಕೊಂಡ ಪೋಷಕರು ಮತ್ತು ಕುಟುಂಬದವರ ರೋಧನ ಮುಗಿಲು ಮುಟ್ಟಿದೆ.

ಆಸ್ಪತ್ರೆಗೆ ಮೂಡಿಗೆರೆ ಬಿ.ಇ.ಓ.ಹೇಮಂತ್ ರಾಜ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

7ನೇ ತರಗತಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ತೀವ್ರ ಆಘಾತ ಉಂಟುಮಾಡಿದೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;