ತುಮಕೂರು ಬಳಿ ಪಾಳುಬಿದ್ದ ಕೆರೆಯೊಂದರಲ್ಲಿ ಕಾರಿನಲ್ಲಿ ಮೂರು ಮೃತದೇಹಗಳು ಸುಟ್ಟುಕರಕಲಾಗಿದ್ದ ಸ್ಥಿತಿಯಲ್ಲಿ ದೊರೆತ ಪ್ರಕರಣಕ್ಕೀಗ ತಿರುವು ಸಿಕ್ಕಿದೆ. ನಕಲಿ ಚಿನ್ನದ ದಂಧೆಕೋರರು ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಾರಿನಲ್ಲಿ ಸಿಕ್ಕ ಶವಗಳು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56), ಶಿರ್ಲಾಲು ಗ್ರಾಮದ ಸಿದ್ದಿಕ್(34) ಇವರುಗಳದ್ದು ಎಂದು ಪತ್ತೆಯಾಗಿತ್ತು. ಈ ತಮ್ಮ ಸ್ನೇಹಿತನಿಂದ ಕಾರನ್ನು ಪಡೆದುಕೊಂಡು ಬೆಂಗಳೂರಿಗೆ ಹೋಗಿ ಬರುತ್ತೇವೆ ಎಂದು ಹೇಳಿ ಹೋಗಿದ್ದರು. ಆದರೆ ಅವರ ಮೃತದೇಹ ತುಮಕೂರು ಬಳಿ ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು.
ಮೃತ ಮೂವರು “ನಕಲಿ ಚಿನ್ನದ ದಂಧೆ”ಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ಈ ಪ್ರಕರಣ ಪ್ರಮುಖ ಆರೋಪಿ ತುಮಕೂರಿನ ಸ್ವಾಮಿ ಸೇರಿ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ನಂಬಿಸಿದ್ದರು.
ಆರೋಪಿಗಳು, ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ, ಕೋಟ್ಯಾಂತರ ರುಪಾಯಿ ಬೆಲೆಬಾಳುವ ಚಿನ್ನವನ್ನು ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ನಂಬಿಸಿದ್ದರು ಎನ್ನಲಾಗಿದೆ. 50 ಲಕ್ಷ ಹಣಕ್ಕೆ ವ್ಯವಹಾರ ಖುದುರಿಸಿ ಮೂವರನ್ನು ಕರೆಸಿ ಅವರಲ್ಲಿದ್ದ ಹಣವನ್ನು ಕಿತ್ತುಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಆರು ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಳ್ತಂಗಡಿ ಮೂಲದ ಇಸಾಕ್ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರೆ, ಸಾಹುಲ್ ಹಮೀದ್ ಆಟೋ ಚಾಲಕ ಹಾಗೂ ಸಿದ್ದಿಕ್ ಫೂಟ್ ವೇರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ.
ವಂಚಕರು ಒಮ್ಮೆ ಖುದ್ದು ಬೆಳ್ತಂಗಡಿಗೆ ಬಂದು ಸ್ವಲ್ಪ ನಿಜವಾದ ಚಿನ್ನವನ್ನು ತೋರಿಸಿ ನಂಬಿಕೆ ಬರುವಂತೆ ಮಾಡಿದ್ದರು. ಇವರ ಸಂಚಿನ ಬಗ್ಗೆ ತಿಳಿಯದೆ ಇಸಾಕ್ ತನ್ನ ಸ್ನೇಹಿತ ರಫೀಕನ ಎಸ್ ಪ್ರೆಸ್ಸೋ ಕಾರನ್ನು ಪಡೆದಿದ್ದ. ಅಲ್ಲದೆ, ಸ್ನೇಹಿತರಾದ ಹಮೀದ್ ಹಾಗೂ ಸಿದ್ದಿಕ್‌ಗೆ ಒಂದು ಡೀಲ್ ಇದೆ ಬನ್ನಿ ಎಂದು ಹೇಳಿ ಸುಮಾರು 50 ಲಕ್ಷ ಹಣವನ್ನು ಒಟ್ಟು ಮಾಡಿ ತುಮಕೂರಿಗೆ ಹೋಗಿದ್ದ.
ಹಂತಕರು ನಕಲಿ ಚಿನ್ನ ತೋರಿಸಿ, ಹಣ ದೋಚಲು ಮುಂದಾಗಿದ್ದರು. ಈ ಮೂವರನ್ನು ಜನರಿಲ್ಲದ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಕೈ ಕಾಲು ಕಟ್ಟಿ ಕೊಲೆ ಮಾಡಿದ್ದರು. ನಂತರ ಅದೇ ಕಾರಿನ ಡಿಕ್ಕಿಯಲ್ಲಿ ಇಬ್ಬರ ಮೃತದೇಹ ಹಾಗೂ ಕಾರಿನ ಮಧ್ಯಭಾಗದ ಸೀಟಿನಲ್ಲಿ ಮತ್ತೊಬ್ಬನ ಮೃತದೇಹ ಇಟ್ಟು ಕುಚ್ಚಂಗಿ ಕೆರೆಯ ಬಳಿ ತಂದಿರಿಸಿ ಕಾರಿಗೆ ಬೆಂಕಿ ಹಚ್ಚಿದ್ದರು. ಶವ ಸಹಿತ ಸುಟ್ಟು ಹೋದರೆ ಗುರುತು ಪತ್ತೆ ಸಾಧ್ಯವಾಗದು ಎಂಬ ಲೆಕ್ಕ ಹಾಕಿದ್ದರು.
ಆದರೆ ಕಾರಿನ ನಂಬರ್ ಆಧರಿಸಿ ಮಾಲೀಕನನ್ನು ಸಂಪರ್ಕಸಿದಾಗ, 15 ದಿನಗಳ ಹಿಂದೆ ಕಾರು ಕೊಟ್ಟಿದ್ದಾಗಿ ತಿಳಿಸಿದ್ದ. ಇಸಾಕ್ ವಿಷಯ ತಿಳಿಯುತ್ತಲೇ ಮೂವರ ಗುರುತು ಪತ್ತೆಯಾಗಿತ್ತು.

ಸದ್ಯ ಪ್ರಕರಣ ಸಂಬಂಧಿಸಿ ಪ್ರಮುಖ ಆರೋಪಿ ತುಮಕೂರು ಮೂಲದ ಸ್ವಾಮಿ ಸೇರಿ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಮಕೂರು ತಾಲೂಕಿನ ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ.

ಈ ರೀತಿ ನಕಲಿ ಚಿನ್ನದ ಆಸೆಗೆ ಬಿದ್ದು ಅನೇಕ ಮಂದಿ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಆದರೆ ಇದೀಗ ಅತಿರೇಕಕ್ಕೆ ಹೋಗಿದ್ದು ಮೂವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಂತಹ ಜಾಲ ರಾಜ್ಯದ ಅನೇಕ ಕಡೆ ಸಕ್ರಿಯವಾಗಿದ್ದು, ಪೊಲೀಸರು ಕಠಿಣ



