ಸತತವಾದ ಕಾಡಾನೆ ಹಾವಳಿಯಿಂದ ಮನನೊಂದು ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ, ಚಿಕ್ಕಸಾಲಾವರ ಗ್ರಾಮದ ರೈತ ಮಹೇಶ ಎಸ್.ಕೆ. ಎಂಬುವವರು ಆತ್ಮಹತ್ಯೆಗೆ ಶರಣಾಗಿರುವ ರೈತ.
ಗ್ರಾಮದಲ್ಲಿ ಸತತವಾಗಿ 5 ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳು ರೈತರು ಬೆಳೆದಿದ್ದ ಶುಂಠಿ, ಬಾಳೆ, ಜೋಳ, ಕಾಫಿ ಬೆಳೆಗಳಿಗೆ ಹಾನಿಮಾಡಿದ್ದೂ, ಕೃಷಿ ಉಪಕರಣಗಳಾದ ಸ್ಪ್ರಿಂಕ್ಲರ್ ಪೈಪ್ ಗಳು, ಜೈಟ್ ಗಳನ್ನು ಮುರಿದು ಹಾಕಿದ್ದು ಅಪಾರ ಹಾನಿ ಉಂಟು ಮಾಡಿದ್ದು ಇದರಿಂದ ಮನನೊಂದ ರೈತ ಮಹೇಶ ವಿಷ ಸೇವಿಸಿ ಆತ್ಮ ಹತ್ಯೆಗೆ ಶರಣಾಗಿದ್ದಾರೆ.
ಮಹೇಶ್ ಅವರು ಬೆಳೆದಿದ್ದ ಬೆಳೆಗಳನ್ನು ಆನೆಗಳು ಹಾನಿ ಮಾಡಿದ್ದು, ಶುಂಠಿ ಮತ್ತು ಜೋಳದ ಬೆಳೆಗೆ ಅಳವಡಿಸಿದ್ದ ಪೈಪ್ ಗಳನ್ನು ಸಂಪೂರ್ಣ ನಾಶ ಮಾಡಿವೆ. ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ನಾಶವಾಗಿದ್ದರಿಂದ ಮತ್ತು ನೀರಾವರಿಗೆ ಅಳವಡಿಸಿದ್ದ ಉಪಕರಣಗಳು ನಾಶವಾಗಿದ್ದು, ರೈತ ಮಹೇಶ್ ಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಸಾಲ ಮಾಡಿ ಕೃಷಿಗೆ ಬಂಡವಾಳ ಹಾಕಿದ್ದು, ಅದು ಕಾಡಾನೆ ಹಾವಳಿಯಿಂದ ನಾಶವಾಗಿದ್ದು, ಇದರಿಂದ ತೀವ್ರವಾಗಿ ಮನನೊಂದ ಮಹೇಶ್ ಸಾವಿಗೆ ಶರಣಾಗಿದ್ದಾರೆ.

ಈ ಘಟನೆ ನಡೆದಿದ್ದರೂ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಕೊಂಡಿಲ್ಲ ಇದೆ ರೀತಿ ಮುಂದುವರೆದರೆ ಇನ್ನೆಷ್ಟು ಬಡ ರೈತರು ಇದೆ ರೀತಿ ಆತ್ಮ ಹತ್ಯೆಗೆ ಶರಣಾಗುತ್ತಾರೋ ಗೊತ್ತಿಲ್ಲ, ಇನ್ನು ಸಹ ಕಾಡಾನೆಗಳು ಗ್ರಾಮದಲ್ಲೇ ಬೀಡುಬಿಟ್ಟಿದ್ದು ಅರಣ್ಯ ಇಲಾಖೆಯವರು ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಕೊಂಡಿಲ್ಲ.
ಕಾಡಾನೆ ಹಾವಳಿಯಿಂದ ಸುತ್ತಮುತ್ತಲ್ಲ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಜಮೀನಿನಲ್ಲಿ ಯಾವುದೇ ಕೆಲಸ ಮಾಡಲು ರೈತರು ಹಿಂದೇಟು ಹಾಕುತ್ತಿದರೆ. ಅರಣ್ಯ ಇಲಾಖೆ ಆತ್ಮಹತ್ಯೆಗೆ ಶರಣಾದ ಬಡ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಕಾಡಾನೆಗಳನ್ನು ಸ್ಥಳಾಂತರಿಸಬೇಕು, ಮುಂದಿನ ದಿನಗಳಲ್ಲಿ ಇದೆ ರೀತಿ ಮುಂದುವರೆದರೆ ರೈತರು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸಲು ಮುಂದಾಗುತ್ತಾರೆ ಎಂದು ಸ್ಥಳೀಯರು ಎಚ್ಚರಿಗೆ ನೀಡಿದ್ದಾರೆ



