aane 5

 

 

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಕಂಚಿನ ಕಲ್ಲು ದುರ್ಗದ ಖಾಸಗಿ ಕಾಫಿ ತೋಟದಲ್ಲಿ ಒಂಟಿ ಸಲಗವೊಂದು ಅನುಮಾನಾಸ್ಪದವಾಗಿ ಸಾವನಪ್ಪಿದೆ. ಇಂದು ಮುಂಜಾನೆ ಆನೆಯ ಕಳೆಬರಹ ಕಂಚಿನಕಲ್ಲು ದುರ್ಗದ ಸಮೀಪ ಗುಡ್ಡದೂರು ಕುಟುಂಬಕ್ಕೆ ಸೇರಿದ ಕೆರೆಹಕ್ಲು ಎಸ್ಟೇಟ್ ನಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಆನೆಯು ವಿದ್ಯುತ್ ಪ್ರವಹದಿಂದ ಮೃತಪಟ್ಟಿರುವಂತೆ ತೋರುತ್ತಿದೆ. ಆನೆ ಸಾವನ್ನಪ್ಪಿರುವ ಜಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ವಿದ್ಯುತ್ ಲೈನ್ ಪಕ್ಕದಲ್ಲಿರುವ ಹಲಸಿನ ಮರವು ಇದೆ. ಆನೆ ಹಲಸಿನ ಮರದಿಂದ ಹಲಸಿನ ಹಣ್ಣು ಕೊಯ್ಯುವ ಪ್ರಯತ್ನದಲ್ಲಿ ವಿದ್ಯುತ್ ತಂತಿಗೆ ದೇಹ ತಾಗಿ ಮೃತಪಟ್ಟಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಪಕ್ಕದಲ್ಲಿರುವ ಹಲಸಿನ ಮರದ ಕೊಂಬೆ ಮುರಿದು  ಬಿದ್ದಿರುವಂತೆ ತೋರುತ್ತಿದೆ.

ಇತ್ತೀಚೆಗೆ ಈ ಭಾಗದಲ್ಲಿ ಆನಂದ ಪೂಜಾರಿ ಎಂಬುವವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಕೆಲ ತಿಂಗಳ ಹಿಂದೆಯೂ ಇದೇ ಭಾಗದಲ್ಲಿ ಕಾರ್ಮಿಕರೊಬ್ಬರನ್ನು ಈ ಭಾಗದಲ್ಲಿ ಕಾಡಾನೆ ತುಳಿದು ಸಾಯಿಸಿತ್ತು. ಹಾಗೆಯೇ ಆಲ್ದೂರು ಸಮೀಪ ಕಾರ್ಮಿಕ ಮಹಿಳೆಯೋರ್ವರನ್ನು ಆನೆ ತುಳಿದು ಸಾಯಿಸಿತ್ತು. ಮನುಷ್ಯರ ಮೇಲೆ ದಾಳಿ ಮಾಡಿ ಸಾಯಿಸಿದ್ದು ಈಗ ಮೃತಪಟ್ಟಿರುವ ಆನೆಯೇ ಇರಬಹುದು ಎಂದು ಶಂಕಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಮತ್ತು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ಸ್ಥಳಕ್ಕೆ ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಮೇಶ್ ಬಾಬು ಅವರು ಪ್ರತಿಕ್ರಿಯಿಸಿ ಕಾಡಾನೆ ವಿದ್ಯುತ್ ತಂತಿ ತಾಗಿ ಸಾವನ್ನಪ್ಪಿದೆ. ಸ್ಥಳದಲ್ಲಿ 11 ಕೆ.ವಿ. ವಿದ್ಯುತ್ ಲೈನ್ ಹಾದುಹೋಗಿದ್ದು, ಆನೆ ಪಕ್ಕದಲ್ಲಿರುವ ಹಲಸಿನ ಮರದಿಂದ ಹಲಸಿನ ಕಾಯಿ ಕೀಳುವ ಪ್ರಯತ್ನದಲ್ಲಿ  ಸೊಂಡಿಲು ಕೆಳಹಂತದಲ್ಲಿ ಜೋತುಬಿದ್ದಿ ವಿದ್ಯುತ್ ಲೈನ್ ಗೆ ತಗುಲಿ ಸಾವನ್ನಪ್ಪಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ವಹಿಸಲಾಗುವುದು. ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದಿದ್ದಾರೆ.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ