ಮೂಡಿಗೆರೆ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ನೆರವೇರಿತು.
ಪಟ್ಟಣದ ಜೇಸಿ ಭವನದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಂ.ವಿ. ಜಯಕುಮಾರ್ ಮಗ್ಗಲಮಕ್ಕಿ, ಕಾರ್ಯದರ್ಶಿಯಾಗಿ ಬಿ.ಎಲ್. ದಿನೇಶ್ ಬೆಟ್ಟಗೆರೆ, ಕೋಶಾಧ್ಯಕ್ಷರಾಗಿ ಹೆಚ್.ಕೆ. ಶಿವಕುಮಾರ್ ಹಳಿಕೆ ಅಧಿಕಾರ ವಹಿಸಿಕೊಂಡರು.

ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದ ಲಯನ್ಸ್ ಜಿಲ್ಲಾ ಉಪರಾಜ್ಯಪಾಲ ಹೆಚ್.ಎಂ. ತಾರಾನಾಥ್ ಮಾತನಾಡಿ ; ಲಯನ್ಸ್ ಸಂಸ್ಥೆಯು ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡುವವರಿಗೆ ಉತ್ತಮ ವೇದಿಕೆಯಾಗಿದೆ. ಜಗತ್ತಿನ ಅತಿದೊಡ್ಡ ಸಮಾಜ ಸೇವಾ ಸಂಘಟನೆಯಾಗಿದೆ. ಸಂಸ್ಥೆಯ ಮೂಲಕ ಪ್ರತಿವರ್ಷ ಅನೇಕ ಸೇವಾ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಸಮಾಜದಲ್ಲಿ ನೊಂದವರು, ಶೋಷಿತರ, ಬಡವರ ಸೇವೆಯನ್ನು ಸಂಸ್ಥೆ ನಿರಂತರ ಮಾಡಿಕೊಂಡು ಬರುತ್ತಿದೆ. ಯುವಕರು ಹೆಚ್ಚು ಹೆಚ್ಚು ಲಯನ್ಸ್ ಸಂಸ್ಥೆಯ ಸದಸ್ಯರಾಗಿ ಅದರ ಸೇವಾ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ನಿರ್ಗಮಿತ ಅಧ್ಯಕ್ಷ ಕೆ.ಟಿ. ದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎನ್.ಎಲ್. ಸುಂದರೇಶ್ವರ, ಕಳೆದ ಸಾಲಿನ ಕಾರ್ಯದರ್ಶಿ ಹೆಚ್.ಬಿ. ಸತ್ಯನಾರಾಯಣ, ಕೋಶಾಧ್ಯಕ್ಷ ಜಿ.ಎಸ್. ತಮ್ಮಣ್ಣಗೌಡ ಮುಂತಾದವರು ವೇದಿಕೆಯಲ್ಲಿದ್ದರು.




