ಸಾಮಾನ್ಯ ಕುಟುಂಬ ದಲ್ಲಿ ಜನಿಸಿದರು ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜದ ಕಾರ್ಯಕ್ಕೆವಿನಿಯೋಗಿಸುತ್ತಿರುವ ನಾರಾಯಣ ಅವರ ಕಾರ್ಯ ಶ್ಲಾಘನೀಯ ವಾದುದ್ದು ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಗೌರವಧ್ಯಕ್ಷೆ ನಿರ್ಮಲ ಮಂಚೇಗೌಡ ತಿಳಿಸಿದರು
ಅವರು ಸೋಮವಾರ ಮೂಡಿಗೆರೆ ಪಂಡಿತ್ ದಿನ್ ದಯಾಳ್ ಉಪಾದ್ಯಾಯ ಸಭಾಂಗಣದಲ್ಲಿ ವಿ ಎಂ ಪಿ ಎಂ ಟ್ರಸ್ಟ್ ನ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ; ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲವೂ ಸ್ವಂತಕ್ಕೆ ಎಂದು ಬದುಕುವ ಜನಗಳ ನಡುವೆ ಕಳೆದ ಹತ್ತು ವರ್ಷದಿಂದ ಹೆತ್ತವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಟ್ರಸ್ಟ್ ವತಿಯಿಂದ ಸಹಕಾರ ನೀಡುತ ಬಂದಿರುವುದು ಸಮಾಜ ಮೆಚ್ಚುವಂತಹದು ಇವರ ಸಂಸ್ಥೆಯಿಂದ ಇನ್ನಷ್ಟು ಒಳ್ಳೆ ಕೆಲಸಗಳು ಆಗಲಿ ಎಂದರು.
ಸಾಹಿತಿ ಅವರೇಕಾಡು ವಿಜಯ್ ಮಾತನಾಡಿ ಜನನ ಮರಣಗಳ ನಡುವೆ ಸಾಗುವುದೇ ಜೀವನ ಹಾಗಾಗಿ ನಮ್ಮ ಮರಣದ ನಂತರನು ನಮನ್ನು ನೆನಪು ಮಾಡಿಕೊಳೋ ಹಾಗೆ ಜೀವಿಸಬೇಕು ತಂದೆ ತಾಯಿಯ ತ್ಯಾಗದ ಪಲವಾಗಿ ನಾವು ಸಮಾಜದಲ್ಲಿ ತಲೆ ಎತ್ತಿ ನಿಂತಿದ್ದೇವೆ ಹಾಗಾಗಿ ನಮಗೆ ಹೆತ್ತವರು ಯಾವಾಗಲು ಹೀರೊ ಆಗಬೇಕು ವ್ಯಕ್ತಿ ಎಷ್ಟೇ ಶ್ರೀಮಂತ ಆದರೂ ಹಣ ಅಸ್ತಿ ಬಂದು ಹೋಗುತ್ತೆ ಅದೇ ವಿದ್ಯೇ ವ್ಯಕ್ತಿಗೆ ಅಸ್ತಿ ಹಾಗಿ ಉಳಿಯುತ್ತೆ ಡಾ. ಬಿ.ಆರ್. ಅಂಬೇಡ್ಕರ್ ಸಹ ಬಾಲ್ಯದಿಂದಲೇ ಕಷ್ಟದ ದಿನವನು ಎದರಿಸಿದ ಕಾರಣ ಇವತ್ತು ಜಗತ್ತಿಗೆ ನಾಯಕರಾಗಿದರೆ ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಹತ್ತು ವರ್ಷದಲ್ಲಿ ನಡೆದು ಬಂದ ಬಗ್ಗೆ ಸಾಹಿತಿ ಎಂ ಎಸ್ ನಾಗರಾಜ್ ಸಂಪಾದಕತ್ವದ ‘ವಸುದಾರೆ’ ಎಂಬ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು . ಹಾಗೆ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ಬ್ಯಾಗ್ ವಿತರಿಸಲಾಯಿತು ಹಾಗೆ ಹತ್ತನೇ ತರಗತಿ ಮತ್ತು ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ವಿ ಪಿ ನಾರಾಯಣ, ಕಾರ್ಯದರ್ಶಿ ಭಾಗ್ಯ ನಾರಾಯಣ್, ಡಾ. ಲಕ್ಷ್ಮಿ, ಹಿರಿಯ ಮುಖಂಡ ಬಿ ಎಸ್ ಜೈರಾಮ್, ಕಾಂಗ್ರೆಸ್ ನ ಜಿಲ್ಲಾ ವಕ್ತಾರ ಎಂ ಎಸ್ ಅನಂತ್, ಕ್ಷೆತ್ರ ಶಿಕ್ಷಣ ಅಧಿಕಾರಿ ಹೇಮಂತ್ ಚಂದ್ರ, ಎಂ ಎಸ್ ನಾಗರಾಜ್, ಪ್ರಕಾಶ್ ಮತ್ತಿತರರು ಇದ್ದರು



