ಚಿಕ್ಕಮಗಳೂರು ಜಿಲ್ಲೆ, ಆಲ್ದೂರು ಹೋಬಳಿ, ದೊಡ್ಡಮಾಗರಹಳ್ಳಿ ಗ್ರಾಮದ ಭಜರಂಗದಳ ಮುಖಂಡ ಡಿ.ಎನ್. ಮಧು(42 ವರ್ಷ) ಅವರು ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ.
ದೊಡ್ಡಮಾಗರವಳ್ಳಿ ಗ್ರಾಮದ ದಿವಂಗತ ನಂಜೆಗೌಡರ ಎರಡನೆ ಮಗ ಮಧು ಮಂಗಳವಾರ ಮಧ್ಯಾಹ್ನ ಗದ್ದೆಯಲ್ಲಿ ಕೃಷಿ ಚಟುವಟಿಕೆವಲ್ಲಿ ತೊಡಗಿದ್ದಾಗಲೇ ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುತ್ತಾರೆ.
ಮಧು ಅವರು ಆಲ್ದೂರು ಭಾಗದಲ್ಲಿ ಚಿರಪರಿಚಿತರಾಗಿದ್ದರು, ಭಜರಂಗದಳ, ಬಿ.ಜೆ.ಪಿ. ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ತಾಯಿ, ಸಹೋದರ ಮತ್ತು ಆಪಾರ ಬಂದು ಬಳಗ ಹಿತೈಷಿಗಳನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಇಡೀ ಗ್ರಾಮವೆ ಶೋಕಸಾಗರದಲ್ಲಿ ಮುಳುಗಿದೆ. ಸ್ನೇಹಜೀವಿಯಾಗಿದ್ದ ಮಧು ಅವರ ನಿಧನಕ್ಕೆ ಸ್ನೇಹಿತರು ಹಿತೈಷಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಬುಧವಾರ ಹುಟ್ಟೂರು ದೊಡ್ಡ ಮಾಗರಹಳ್ಳಿಯಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಲಿದೆ.



