ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಹಾಲಿ ಶಾಸಕ ಟಿ ಡಿ ರಾಜೇಗೌಡರಿಗೆ ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಮತಪತ್ರಗಳನ್ನು ತಿದ್ದಿರುವ ಶಂಕೆ ವ್ಯಕ್ತಪಡಿಸಿ ಬಿಜೆಪಿ ಅಭ್ಯರ್ಥಿ ಡಿ ಎನ್ ಜೀವರಾಜ್ ಸೇರಿ ಮೂವರ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.
ಕಾಂಗ್ರೆಸ್ ಚುನಾವಣಾ ಏಜೆಂಟ್ ಆಗಿದ್ದ ವಕೀಲ ಸುಧೀರ್ ಕುಮಾರ್ ಮುರೋಳ್ಳಿಯವರು ಈ ಸಂಬಂಧ ಚಿಕ್ಕಮಗಳೂರು ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ ಅವರು ತಮ್ಮ ದೂರಿನಲ್ಲಿ
ಮಾನ್ಯರೆ,
ನಾನು ಮೇಲ್ಕಂಡ ವಿಳಾಸದ ಖಾಯಂ ವಾಸಿಯಾಗಿದ್ದು, 2023ನೇ ಸಾಲಿನಲ್ಲಿ ಜರುಗಿದ (123) ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಐ ಎನ್ ಸಿ ಅಭ್ಯಥಿಯಾಗಿದ್ದ ಶ್ರೀ ಟಿ.ಡಿ ರಾಜೇಗೌಡರ ಪರವಾಗಿ ಏಣಿಕೆಯ ಸಂದರ್ಭದಲ್ಲಿ ಅಂಚೆ ಮತದ ಎಣಿಕೆ ಟೇಬಲ್‌ನ ಏಜೆಂಟನಾಗಿದ್ದೆನು.
ಸದರಿ ಏಣಿಕೆ ಸಂದರ್ಭದಲ್ಲಿ ಇಡೀ ಮತ ಏಣಿಕೆ ಕಾರ್ಯದಲ್ಲಿ ಸಕ್ರೀಯವಾಗಿ ನಾನು ಪಾಲ್ಗೊಂಡಿದ್ದು, ETPBS ಒಟ್ಟು 11 ಮತಗಳಲ್ಲಿ ಟಿ.ಡಿ ರಾಜೇಗೌಡ ರವರಿಗೆ-07 ಮತಗಳು, ಡಿ.ಎನ್. ಜೀವರಾಜ್ ರವರಿಗೆ-03 ಮತಗಳು, ಕೆ.ಎಂ ಗೋಪಾಲ ರವರಿಗೆ-01 ಮತಗಳು ಬಂದಿರುತ್ತದೆ. ಅಂಚೆ ಮತದ ಮೊದಲನೇ ಸುತ್ತಿನಲ್ಲಿ ಕೆ.ಎಂ ಗೋಪಾಲ ರವರಿಗೆ-06 ಮತಗಳು, ಡಿ.ಎನ್. ಜೀವರಾಜ ರವರಿಗೆ-204 ಮತಗಳು, ರಾಜನ್ ಗೌಡ ರವರಿಗೆ-4 ಮತಗಳು, ಟಿ.ಡಿ ರಾಜೇಗೌಡ ರವರಿಗೆ-157 ಮತಗಳು, ಸುಧಾಕರ್ ಎಸ್ ಶೆಟ್ಟಿ ರವರಿಗೆ-74 ಮತಗಳು, ನೋಟಾ ಮತಗಳು-01 ಹಾಗೂ Rejected-54 ಮತಗಳು ಸಂದಾಯವಾಗಿದ್ದು, ಎರಡನೇ ಸುತ್ತಿನಲ್ಲಿ ಕೆ.ಎಂ ಗೋಪಾಲ ರವರಿಗೆ-05 ಮತಗಳು, ಡಿ.ಎನ್. ಜೀವರಾಜ ರವರಿಗೆ-164 ಮತಗಳು, ರಾಜನ್ ಗೌಡ ರವರಿಗೆ-1 ಮತಗಳು, ಟಿ.ಡಿ ರಾಜೇಗೌಡ ರವರಿಗೆ-156 ಮತಗಳು, ಸುಧಾಕರ್ ಎಸ್ ಶೆಟ್ಟಿರವರಿಗೆ-67 ಮತಗಳು, ಜಿ ಭಾರತಿಯವರಿಗೆ-01 ಮತಗಳು,
ನೋಟಾ ಮತಗಳು-01. Rejected-102 ಮತಗಳಾಗಿದ್ದು, ಮೂರನೇ ಸುತ್ತಿನಲ್ಲಿ ಕೆ.ಎಂ ಡಿ.ಎನ್ ಜೀವರಾಜ ರವರಿಗೆ-190 ಮತಗಳು, ರಾಜನ್ ಗೌಡ ರವರಿಗೆ-1 ಮತಗಳು, ಟಿ.ಡಿ. ರಾಜೇಗೌಡ ರವರಿಗೆ-170 ಮತಗಳು, ಸುಧಾಕರ್ ಎಸ್ ಶೆಟ್ಟಿರವರಿಗೆ-71 ಮತಗಳು, ಕೆ.ಆರ್ ಕುಸುಮ ರವರಿಗೆ-01 ಹಾಗೂ ನೋಟಾ ಮತಗಳು-01, Rejected-66 ಮತಗಳು ಸಂದಾಯವಾಗಿದ್ದು, 4ನೇ ಸುತ್ತಿನಲ್ಲಿ ಕೆ.ಎಂ ಗೋಪಾಲ ರವರಿಗೆ-01 ಡಿ.ಎನ್ ಜೀವರಾಜ ರವರಿಗೆ-131 ಮತಗಳು, ರಾಜನ್ ಗೌಡ ರವರಿಗೆ-1 ಮತಗಳು, ಟಿ.ಡಿ ರಾಜೇಗೌಡ ರವರಿಗೆ-79 ಮತಗಳು, ಸುಧಾಕರ್ ಎಸ್ ಶೆಟ್ಟಿ ರವರಿಗೆ-44 ಮತಗಳು, ಕೆ.ಆರ್ ಕುಸುಮ ರವರಿಗೆ-01 ಹಾಗೂ Rejected-57 ಮತಗಳು ಸಂದಾಯವಾಗಿರುತ್ತದೆ.
ಸದರಿ ಚುನಾವಣೆಯಲ್ಲಿ ಇವಿಎಂ, ETPBS ಹಾಗೂ ಅಂಚೆ ಮತಗಳ ಒಟ್ಟು ಮತ ಗಳಿಕೆಯಿಂದ ಶ್ರೀ ಟಿ.ಡಿ ರಾಜೇಗೌಡ ರವರಿಗೆ 201 ಮತಗಳ ಅಂತರದಿಂದ ಗೆಲುವಾಗಿರುತ್ತದೆ. ತದ ನಂತರ ಪರಾಜಿತ ಅಭ್ಯರ್ಥಿಯಾದ ಶ್ರೀ ಡಿ.ಎನ್ ಜೀವರಾಜ ರವರು ಕರ್ನಾಟಕ ಉಚ್ಚನ್ಯಾಯಾಲಯಕ್ಕೆ EP 20/2023 ರಂತೆ ಅರ್ಜಿ ಸಲ್ಲಿಸಿ ಸದರಿ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಾಲಯ Rejected ಮತಗಳ ಪನರ್ ಪರಿಶೀಲನೆ ಹಾಗೂ ನಂತರದಲ್ಲಿ ಎಲ್ಲಾ ಅಂಚೆ ಮತ ಪತ್ರಗಳ ಏಣಿಕೆಗೆ ಆದೇಶವಾಗಿದ್ದು, ಯಾವುದೇ ಅಕ್ರಮ ಎಸಗದೆ ಇದ್ದುದರಿಂದ ಸದರಿ ಆದೇಶಕ್ಕೆ ಮೇಲ್ಮನವಿ ಸಲ್ಲಿಸದೇ ದಿನಾಂಕ:02-05-2026 ರಂದು ಮರು ಮತ ಏಣಿಕೆಗೆ ಶ್ರೀ ಟಿ.ಡಿ ರಾಜೇಗೌಡ ರವರ ಪರವಾಗಿ ಏಜೆಂಟನಾಗಿ ಹಾಜರಾಗಿದ್ದೆ.
ದಿನಾಂಕ:13-05-2023 ರಂದು ಅಮಾನ್ಯವಾಗಿದ್ದ ಮತಗಳ ಪೈಕಿ ಲಭ್ಯ 269 ಮತಗಳ ಪನರ್ ಪರಿಶೀಲನೆಯಾಗಿ ಅದರಲ್ಲಿ ಕೇವಲ 08 ಮತಗಳನ್ನು ಪನರ್ ಏಣಿಕೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಶ್ರೀ ಡಿ.ಎನ್ ಜೀವರಾಜ್ ರವರಿಗೆ-02 ಶ್ರೀ ಟಿ.ಡಿರಾಜೇಗೌಡ ರವರಿಗೆ-03 ಮತಗಳು ಲಭ್ಯವಾಗಿರುತ್ತದೆ.
ತದನಂತರ ಅಂಚೆ ಮತಗಳ ಪುನರ್ ಏಣಿಕೆಗೆ ಒಳಪಡಿಸಿದಾಗ ನಾಲ್ಕು ಸುತ್ತುಗಳಲ್ಲಿ ಸೀಲು ಆಗಿರದ ಕಟ್ಟುಗಳಲ್ಲಿ ಶ್ರೀ ಟಿ.ಡಿ ರಾಜೇಗೌಡ ರವರಿಗೆ ಸಂದಾಯವಾಗಿದ್ದ ಮತಗಳ ಪೈಕಿ-257 ಮತಗಳನ್ನು Double/Multipal Entry ಗೋಚರಿಸಿದ್ದರಿಂದ ಹಾಲಿ ಚುನಾವಣಾಧಿಕಾರಿಯಾಗಿದ್ದ ಶ್ರೀ ಗೌರವಶೆಟ್ಟಿ ರವರು ಅಮಾನ್ಯಗೊಳಿಸಿರುತ್ತಾರೆ. ದಿನಾಂಕ:13-05-2023 ರಂದು ಮತ ಏಣಿಕೆ ಸಂದರ್ಭದಲ್ಲಿ ಶ್ರೀ ಟಿ.ಡಿ ರಾಜೇಗೌಡರವರಿಗೆ ಸಂದಾಯವಾಗಿದ್ದ ಮತಗಳನ್ನು ಮಾತ್ರ ಅದರಲ್ಲೂ 01 ಕಟ್ಟಿನ -170 ಮತಗಳನ್ನು ತಿದ್ದುಪಡಿ ಮಾಡಿರುತ್ತಾರೆ. ಸದರಿ ಮತಗಳನ್ನು ದಿನಾಂಕ:13-05-2023 ಮತ ಏಣಿಕೆಯ ನಂತರ ಆಗಿನ ಚುನಾವಣಾಧಿಕಾರಿಯಾಗಿದ್ದ ಶ್ರೀ ವೇದಮೂರ್ತಿ, ಅಭ್ಯರ್ಥಿ ಶ್ರೀ ಡಿ.ಎನ್ ಜೀವರಾಜ್, ಆಗಿನ ಜಿಲ್ಲಾಧಿಕಾರಿ ಶ್ರೀ ರಮೇಶ ಹಾಗೂ ಇತರರು ಸೇರಿ ಸಂಚು ರೂಪಿಸಿ ಪೆಟ್ಟಿಗೆಗಳ ಸೀಲುಗಳನ್ನು ತೆಗೆದು ಅಕ್ರಮ ಎಸಗಿರುತ್ತಾರೆ.
ಈ ರೀತಿ ಅಕ್ರಮ ಎಸಗಿರುವ ಸಂಚಿನ ಬಗ್ಗೆ ಸ್ಟ್ರಾಂಗ್ ರೂಂ ಬಳಿಯಲ್ಲಿಯೇ ದಿನಾಂಕ:-02-05-2026 ರ ಬೆಳಿಗ್ಗೆ 07-00 ಗಂಟೆಗೆ ಹಾಗೂ ಮತ ಎಣಿಕೆ ಪ್ರಕೀಯೆ ಸಂದರ್ಭದಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿರುತ್ತೇವೆ.
ಈಗ Double/Multipal Entry ಆಗಿರುವ-257 ಬ್ಯಾಲೆಟ್ ಗಳನ್ನು ದಿನಾಂಕ:13-05-2023 ರ ಮತ ಎಣಿಕೆ ನಂತರವೇ ತಿದ್ದಿರುವುದು ಮೇಲ್ನೋಟಕ್ಕೆ ಗೋಚರಿಸಿರುತ್ತದೆ.
ದಿನಾಂಕ:13-05-2023ರ ಚುನಾವಣಾ ಪ್ರಕ್ರಿಯ ನಿರ್ಣಯ ಪುಸಕ್ತದಲ್ಲಿ ಬರೆದು ಎಲ್ಲರೂ ಒಪ್ಪಿ ಸಹಿ ಮಾಡಿರುವ ಸಂಗತಿಗಳ ಈಗ ವ್ಯತ್ಯಯವಾಗಿರುವುದನ್ನು ನೋಡಿದಲ್ಲಿ ಅಕ್ರಮ ಕೂಟ ಕಟ್ಟಿಕೊಂಡು ಒಳಸಂಚು ರೂಪಿಸಿ, ಚುನಾವಣಾ ಅಕ್ರಮಗಳ ಮೂಲಕ ಬ್ಯಾಲೆಟ್ ಗಳನ್ನು ವೈಯಕ್ತಿಕ ಲಾಭಕ್ಕಾಗಿ ತಿದ್ದಿರುವುದು ಗೊತ್ತಾಗುತ್ತಿದ್ದು, ಆಗಿನ ಚುನಾವಣಾಧಿಕಾರಿ ಶ್ರೀ ವೇದಮೂರ್ತಿ (ಮೊಬೈಲ್ ಸಂಖ್ಯೆ-9620414225) ಹಾಗೂ ಅಕ್ರಮಕ್ಕೆ ಜೊತೆಯಾಗಿರುವ ಶ್ರೀ ಡಿ.ಎನ್ ಜೀವರಾಜ್ , ರಮೇಶ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿ ತನಿಖೆಗೆ ಕೈಗೊಳ್ಳಬೇಕಾಗಿ ಕೋರಿದ್ದಾರೆ.



