September 13, 2026
;
Rudraiah

 

 

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮೂಡಿಗೆರೆ ಶಾಖೆ ಸಮಿತಿಯ 2024-29ರ ಅವದಿಯ ಚುನಾವಣೆ ಪ್ರಕಿಯೆ ಚಾಲ್ತಿಯಲ್ಲಿದ್ದು, ಇಲ್ಲಿನ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಕೆಲ ನಿರ್ದೇಶಕರು ಸೇರಿಕೊಂಡು ವಾಮಾ ಮಾರ್ಗದ ಮೂಲಕ ಚುನಾವಣೆಗೆ ಸಜ್ಜಾಗಲು ಸಂಚು ರೂಪಿಸಿದ್ದಾರೆಂದು ಪ್ರಗತಿಪರ ಹೋರಾಟಗಾರ ಬಿ.ರುದ್ರಯ್ಯ ಆರೋಪಿಸಿದರು.

ಅವರು ಶನಿವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಸರಕಾರಿ ನೌಕರರ ಸಂಘದ ಚುನಾವಣೆ ನಡೆಸುವ ಸಲುವಾಗಿ ಈ ಹಿಂದೆಯೇ ಮೂಡಿಗೆರೆ ತಾಲೂಕು ಶಾಖೆಯಿಂದ ವಿವಿಧ ಇಲಾಖೆಯಿಂದ ನಿರ್ದೇಶಕರು ಹಾಗೂ ಮತಕ್ಷೇತ್ರಗಳ ಪಟ್ಟಿಯ ವರದಿಯನ್ನು ರಾಜ್ಯ ಸಂಘಕ್ಕೆ ಸಲ್ಲಿಸಲಾಗುತ್ತದೆ. ಆ ಆಧಾರದ ಮೇಲೆ ಈಗ ತಾಲೂಕಿನಲ್ಲಿ 34 ನಿರ್ದೇಶಕರಿಗೆ 24 ಮತ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಇಲ್ಲಿ ನಿರ್ದೇಶಕರು ಹಾಗೂ ಮತಕ್ಷೇತ್ರಗಳ ಪಟ್ಟಿ ತಯಾರು ಮಾಡುವಾಗ ಯಾವ ನಿರ್ದೇಶಕರ ಗಮನ್ಕಕೆ ತಾರದೇ ಸಭಾ ನಡವಳಿ ನಡೆಸದೇ ಕೆಲ ಇಲಾಖೆಗಳನ್ನು ಹೊರಗಿಟ್ಟು ಪಕ್ಷಪಾತ, ತಾರತಮ್ಯ ಧೋರಣೆ ನಡೆಸಿ ಅಕ್ರಮವಾಗಿ ಚುನಾವಣೆ ನಡೆಸಲು ತಂತ್ರ ರೂಪಿಸಲಾಗಿದೆ ಎಂದು ದೂರಿದರು.

ಇಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸಾಂಖ್ಯಿಕ ಇಲಾಖೆ ಈ 3 ಇಲಾಖೆಯ ಒಬ್ಬೊಬ್ಬರೇ ನೌಕರನ್ನು ಒಟ್ಟುಗೂಡಿಸಿ 1 ಕ್ಷೇತ್ರ ಮಾಡಲಾಗಿದೆ. ಆದರೆ ಮೀನುಗಾರಿಕೆ ಇಲಾಖೆಯಲ್ಲಿರುವ ಒಬ್ಬರೇ ನೌಕರರನ್ನು ಕೈಗಾರಿಕೆ ಮತ್ತು ಉದ್ಯೋಗ ಇಲಾಖೆಯಲ್ಲಿರುವ 5 ಮಂದಿ ನೌಕರರೊಂದಿಗೆ ಉದ್ದೇಶಪೂರ್ವಕವಾಗಿ ಸೇರ್ಪಡೆಗೊಳಿಸಿ ಮೀನುಗಾರಿಕೆ ಇಲಾಖೆಗೆ ಪ್ರಾತಿನಿಧ್ಯ ಸಿಗದಂತೆ ಮಾಡಲಾಗಿದೆ. ಅಲ್ಲದೇ ತಾಲೂಕಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ಇಲಾಖೆಯಲ್ಲಿ ನಾಲ್ಕೈದು ಖಾಯಂ ನೌಕರರಿದ್ದಾರೆ. ಸಹಕಾರ ಇಲಾಖೆಯಲ್ಲಿ ಓರ್ವ ನೌಕರರಿದ್ದಾರೆ. ಈ ಎರಡೂ ಇಲಾಖೆ ನೌಕರರನ್ನು ಚುನಾವಣೆ ಪ್ರಕ್ರಿಯೆಯಿಂದ ಉದ್ದೇಶ ಪೂರ್ವಕವಾಗಿ ಹೊರಗಿಡಲಾಗಿದೆ.

ಈ ಅಕ್ರಮದ ಬಗ್ಗೆ ಜಿಲ್ಲಾ ಮತ್ತು ರಾಜ್ಯ ಸಮಿತಿ ಪುನರ್ ಪರಿಶೀಲಿಸಿ ಎಲ್ಲಾ ಇಲಾಖೆಗಳಿಗೆ ಪ್ರಾತಿನಿಧ್ಯ ಸಿಗುವಂತೆ ಪಾರದರ್ಶ ಚುನಾವಣೆ ನಡೆಸಲು ಕ್ರಮ ವಹಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;