ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಿದರು.
ಠಾಣೆಯ ಬಂದೂಕು ಮತ್ತಿತರ ಸಲಕರಣೆ ಇಟ್ಟು ಪೂಜೆ ಸಲ್ಲೀಸಲಾಯಿತು. ಈ ಬಾರಿ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಅವರ ನೇತೃತ್ವದಲ್ಲಿ ಎಲ್ಲಾ ಪೊಲೀಸರು ನಾಡಿನ ಪರಂಪರೆ ಸಾರುವ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.
ಬಣಕಲ್, ಕೊಟ್ಟಿಗೆಹಾರದ ವರ್ತಕರು ಪ್ರತಿವರ್ಷವೂ ದೀಪಾವಳಿಯಂದು ಅಂಗಡಿ ಪೂಜೆ ನೆರವೇರಿಸುವುದರಿಂದ ಬರೀ ವಾಹನಗಳು ಮಾತ್ರ ಹೂವಿನಿಂದ ಕಂಗೊಳಿಸಿದವು. ಸರ್ಕಾರಿ ರಾಜ್ಯ ಸಾರಿಗೆ ಬಸ್ ಗಳು ಕೂಡ ವಿವಿಧ ಹೂಗಳಿಂದ ಕಂಗೊಳಿಸಿದವು.ರೈತರು ಕೂಡ ಮನೆಯಲ್ಲಿ ನೇಗಿಲು,ನೊಗ,ಕತ್ತಿ, ಕೃಷಿಗೆ ಬಳಸುವ ಸಲಕರಣೆ ಇಟ್ಟು ಪೂಜೆ ನಡೆಸಲಾಯಿತು.


