MDMA Crystal ಮತ್ತು ಹಶಿಶ್ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಚಿಕ್ಕಮಗಳೂರು ನಗರದ ಉಪ್ಪಳ್ಳಿಯಲ್ಲಿ ಬಂಧಿಸಲಾಗಿದೆ.
MDMA Crystal ಮತ್ತು ಹಶಿಶ್ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದ 3 ಜನ ಆರೋಪಿಗಳನ್ನು PSI CEN ಅಪರಾಧ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ವಶಕ್ಕೆ ಪಡೆದಿದೆ.
ಚಿಕ್ಕಮಗಳೂರು ಮೂಲದ ನವಾಜ್, ಅಮೀದ್, ಯಾಕೂಬ್ ಬಂಧಿತ ಆರೋಪಿಗಳು. ಉಪ್ಪಳ್ಳಿ ಸಮೀಪದ ತಾವರೆಕೆರೆ ಬಳಿ ಮಾರಾಟ ಮಾಡುವ ವೇಳೆ ದಾಳಿ ನಡೆಸಲಾಗಿದೆ. ಮಾದಕ MDMA ಬೆಂಗಳೂರಿನಿಂದ ತಂದು ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
1,10,000 ಮೌಲ್ಯದ 11 ಗ್ರಾಂ MDMA Crystal ಮತ್ತು 86 ಗ್ರಾಂ ಹಶಿಶ್ ಎಣ್ಣೆಯನ್ನು ವಶಪಡಿಸಿಕೊಂಡಿದ್ದು, ಜಿಲ್ಲಾ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ PSI CEN ಅಪರಾಧ ಪೊಲೀಸ್ ಠಾಣೆ ರಘುನಾಥ್ ಎಸ್. ವಿ ಮತ್ತು ಪೊಲೀಸ್ ಸಿಬ್ಬಂದಿ ಇಮ್ರಾನ್ ಖಾನ್, ಹರಿಪ್ರಸಾದ್, ಮಹೇಂದ್ರ, ಅನ್ವರ್ ಪಾಷ, ಹರೀಶ, ಮಂಜುನಾಥ್ ಮತ್ತು ರಮೇಶ್ ಇದ್ದರು.



