ಚಿಕ್ಕಮಗಳೂರು ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಮತಿ ರೀನಾ ಸುಜೇಂದ್ರ ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನೂತನ ಅಧ್ಯಕ್ಷರು ರೀನಾ ಸುಜೇಂದ್ರ, ಉಪಾಧ್ಯಕ್ಷೆ ಕಾವ್ಯಸುಕುಮಾರ್, ಕಾರ್ಯದರ್ಶಿ ಅಮಿತವಿಜೇಂದ್ರ, ಸಹ ಕಾರ್ಯದರ್ಶಿ ಕೋಮಲರವಿ, ನಿರ್ದೇಶಕರುಗಳಾಗಿ ಶಕುಂತಲ, ಮಂಜುಳಹರೀಶ್, ವೇದಚಂದ್ರಶೇಖರ್, ಚಂಪಾಜಗದೀಶ್, ಅನುಪಮಾರಮೇಶ್, ವಿನುತಪ್ರಸಾದ್, ರಾಜೇಶ್ವರಿ ಅಭಿಷೇಕ್, ಕೀರ್ತಿಕೌಶಿಕ್, ತನುಜಸುರೇಶ್, ಸುನೀತಾನವೀನ್, ಸಂಧ್ಯಾನಾಗೇಶ್ ಅಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ರೀನಾ ಸುಜೇಂದ್ರ ಅವರು ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಸುಜೇಂದ್ರ ಅವರ ಪತ್ನಿ. ರೀನಾ ಅವರು ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಾ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.
ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಸದಸ್ಯರಾಗಿ, ನಿರ್ದೇಶಕರಾಗಿ, ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಚಿಕ್ಕಮಗಳೂರು ಕಸ್ತೂರಿಬಾ ಸದನ ಸಮಿತಿಯ ಸಹ ಕಾರ್ಯದರ್ಶಿಯಾಗಿ, ಕೌಟುಂಬಿಕ ಸಲಹಾ ಕೇಂದ್ರದ ಸದಸ್ಯೆಯಾಗಿ, ಟೌನ್ ಮಹಿಳಾ ಸಮಾಜದ ಸದಸ್ಯೆಯಾಗಿದ್ದಾರೆ. ಜಿಲ್ಲಾ ಭ್ರೂಣ ಹತ್ಯೆ ನಿಷೇದ ಕಾರ್ಯಪಡೆ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ದೇವಿರಮ್ಮ ಸ್ಪಂದನ ಬಳಗದ ಸಂಚಾಲಕರಾಗಿದ್ದಾರೆ.
ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸಂದರ್ಭದಲ್ಲಿ ರೀನಾ ಸುಜೇಂದ್ರ ಅವರು ಮಾತನಾಡಿ, ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವ ಎಲ್ಲಾ ನಿರ್ದೇಶಕರುಗಳಿಗೆ ಮತ್ತು ಮಾತೃ ಸಂಘದ ಪದಾಧಿಕಾರಿಗಳಿಗೆ ಗೌರವ ಪೂರ್ವಕ ನಮನ ಸಲ್ಲಿಸುವುದಾಗಿ ಹೇಳಿದರು. ಮಹಿಳಾ ಸಂಘಕ್ಕೆ ಯಾವುದೇ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಲು ಬದ್ಧನಾಗಿದ್ದೇನೆ. ಜಿಲ್ಲಾ ಒಕ್ಕಲಿಗರ ಸಂಘದ ಸಹಕಾರದೊಂದಿಗೆ ಮಹಿಳಾ ಸಂಘವನ್ನು ನಡೆಸುವ ಭರವಸೆಯನ್ನು ನೀಡಿದರು. ಸಂಘದ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಿ ತಮ್ಮ ಅಧಿಕಾರವಧಿಯಲ್ಲಿ ವಿಭಿನ್ನವಾಗಿ ಕಾರ್ಯ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್‌ರವರು ಅಧ್ಯಕ್ಷರಾದವರು ತಾಳ್ಮೆ, ಸಮಾಧಾನ, ನಗುಮುಖ ಇವುಗಳ ಜೊತೆಗೆ ಸದಸ್ಯರು ಸಮಸ್ಯೆಗಳನ್ನು ಹೇಳಿದಾಗ ಸ್ಥಳದಲ್ಲೇ ಪರಿಹರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ನೂತನ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ಚಿಕ್ಕಮಗಳೂರಿಗೆ ಒಂದು ಹೆಮ್ಮೆ ಪಡುವಂತ ಸಂಘಟನೆಯಾಗಿದೆ. ಮಾತೃ ಸಂಘಕ್ಕೆ ಮಹಿಳಾ ಸಂಘ ಬೆನ್ನೆಲುಬಾದರೆ ಮಹಿಳಾ ಸಂಘ ಮಾತೃ ಸಂಘಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಹೀಗೆ ಒಟ್ಟಿಗೆ ಸೇರಿ ಸಮುದಾಯದ, ಸಮಾಜದ ಸೇವೆ ಜೊತೆಗೆ ಅಭಿವೃದ್ಧಿ ಮಾಡಬೇಕೆಂಬುದು ಎರಡು ಸಂಘಗಳ ಧ್ಯೇಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ರವಿ, ಮಹಿಳಾ ಸಂಘದ ಪ್ರಭಾರಿ ಅಧ್ಯಕ್ಷೆ ಕಾವ್ಯ ಸುಕುಮಾರ್, ಪ್ರಧಾನ ಕಾರ್ಯದರ್ಶಿ ಅಮಿತ ವಿಜಯೇಂದ್ರ, ಸಹಕಾರ್ಯದರ್ಶಿ ಕೋಮಲ ರವಿ, ನಿರ್ದೇಶಕರುಗಳಾದ ಡಿ.ಬಿ. ಶಕುಂತಲ, ಮಂಜುಳ ಹರೀಶ್, ವೇದ ಚಂದ್ರಶೇಖರ್, ಚಂಪಾ ಜಗದೀಶ್, ಅನುಪಮ ಜಗದೀಶ್, ವಿನುತ ಪ್ರಸಾದ್, ರಾಜೇಶ್ವರಿ ಅಭಿಷೇಕ್, ಕೀರ್ತಿ ಕೌಶಿಕ್, ತನುಜ ಸುರೇಸ್, ಸುನೀತಾ ನವೀನ್, ಸಂಧ್ಯಾ ನಾಗೇಶ್ ಉಪಸ್ಥಿತರಿದ್ದರು.
ಸ್ಥಾಪಕಾಧ್ಯಕ್ಷರಾದ ಗಾಯಿತ್ರಿ ಗೋವಿಂದಸ್ವಾಮಿ, ನಿಕಟಪೂರ್ವ ಅಧ್ಯಕ್ಷೆ ಸವಿತ ರಮೇಶ್, ಕಾರ್ಯದರ್ಶಿ ಜಾನ್ಹವಿ ಜಯರಾಂ, ಹರಿಣಾಕ್ಷಿ ನಾಗರಾಜ್, ಆರತಿ ನಾರಾಯಣ್, ಪೂರ್ಣಿಮ ಉಮೇಶ್ ಇವರುಗಳು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.



