ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಪೇದೆ ಬಿ ಎಸ್ ಚಂದ್ರೇಗೌಡ ರವರ ಪುತ್ರಿ ಕು. ಅನುಶ್ರೇಯಾ ಬಿ ಸಿ ರವರು ದಿನಾಂಕ 22.06.2024 ರಿಂದ 26.09.2024 ರವರೆಗೆ ಎರ್ನಾಕುಲಂನಲ್ಲಿ ನಡೆದ 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 100 M Hurdles ನಲ್ಲಿ ಚಿನ್ನದ ಪದಕ ಮತ್ತು 4X400 M Relay ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.
ಕು. ಅನುಶ್ರೇಯಾ ಬಿ ಸಿ ರವರು ಚಿಕ್ಕಮಗಳೂರು ಕೇಂದ್ರೀಯ ವಿದ್ಯಾಲಯದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿವಿಧ ಕ್ರೀಡಾಕೂಟಕೂಟಗಳಲ್ಲಿ ಪದಕಗಳನ್ನು ಪಡೆದು ರಾಜ್ಯ, ಜಿಲ್ಲೆ ಮತ್ತು ಶಾಲೆಗೆ ಕೀರ್ತಿ ತಂದಿರುತ್ತಾರೆ.
ಇವರ ಸಾಧನೆಯನ್ನು ಗುರುತಿಸಿ ಚಿಕ್ಕಮಗಳೂರು ಎಸ್ಪಿ ಡಾ. ವಿಕ್ರಮ ಅಮಟೆ ಯವರು ತಮ್ಮ ಕಛೇರಿಯಲ್ಲಿ ಅನುಶ್ರೇಯಾ ಅವರನ್ನು ಗೌರವಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.




