ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕೆ ಉಪಚುನಾವಣೆ ಪ್ರಕ್ರಿಯೆ ನಡೆದಿದ್ದು, ಕಮಲಮ್ಮ ಎಂಬ ಮಹಿಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರು ಕೂಲಿ ಕಾರ್ಮಿಕರಾಗಿದ್ಧು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 14 ವರ್ಷ ಸೂಲಗಿತ್ತಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಗ್ರಾಮ ಪಂಚಾಯಿತಿಯ ಒಂದು ಸ್ಥಾನವು ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು ಎಲ್ಲಾ ಪಕ್ಷದ ಮುಖಂಡರು ಸಭೆ ಸೇರಿ ಕಮಲಮ್ಮ ಅವರ ಸೇವೆಯನ್ನು ಗುರುತಿಸಿ ಯಾವುದೇ ಅಭ್ಯರ್ಥಿಗಳನ್ನು ಹಾಕದಿರಲು ನಿರ್ಧರಿಸಿದ್ದರು. ಇದರಿಂದ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿ ಕಮಲಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಶಿವರಾಂ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನಿಡುವಾಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಸದಸ್ಯರಾದ ನವೀನ್ ಹಾವಳಿ, ಸಚಿನ್ ಮರ್ಕಲ್, ಬಾಳೂರ ಹೋಬಳಿ ಬಿಜೆಪಿ ಅಧ್ಯಕ್ಷ ಮಂಜುನಾಥ್, ಕಾಂಗ್ರೆಸ್ ಅಧ್ಯಕ್ಷ ಶ್ರೀನಾಥ್, ಸಿಪಿಐ ಕಾರ್ಯದರ್ಶಿ ರಮೇಶ್ ಕೆಳಗೂರು, ಪರೀಕ್ಷಿತ್ ಜಾವಳಿ, ಮಹೇಶ್ ಬಾಳೂರು, ಮರ್ಕಲ್ ವಿಜೇಂದ್ರ, ಉಪೇಂದ್ರ, ಸುಧಾಕರ್, ರವಿ ವಾಟೇಖಾನ್, ಲಾರೇನ್ಸ್ ಬಾಳೂರು, ಸ್ವಾಮಿ, ಸಾಗರ್ ಮರ್ಕಲ್, ಪಿಡಿಒ ಮಹೇಶ್ ಇತರರು ಇದ್ದರು.



