ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅವರನ್ನು ಹಟ್ಟೂರಿನ ಗ್ರಾಮಸ್ಥರು ಅಭಿನಂದಿಸಿದರು.
ಮೂಡಿಗೆರೆ ತಾಲ್ಲೂಕಿನ ಮಡ್ಡಿಕೆರೆ ಗ್ರಾಮದವರಾದ ಗೋಪಾಲ್ ಅವರನ್ನು ಮಡ್ಡಿಕೆರೆ ಮತ್ತು ಹಳೇಕೆರೆ ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು. ಮಕ್ಕಳ ಹುಣ್ಣಿಮೆಯ ದಿನ ಹಳೇಕೆರೆ ದೇವಸ್ಥಾನದಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಗೋಪಾಲ್ ಅವರನ್ನು ಗ್ರಾಮಸ್ಥರು ಆದರಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಡ್ಡಿಕೆರೆ ಗೋಪಾಲ್ ಅವರು ; ನನಗೆ ಎಲ್ಲಾ ಗೌರವಕ್ಕಿಂತ ಹುಟ್ಟೂರಿನ ಜನರು ನೀಡಿದ ಗೌರವ ಅತ್ಯಂತ ಸಂತೋಷವನ್ನು ತಂದಿದೆ. ಮೈಸೂರಿನ ಸಾಂಸ್ಕøತಿಕ ವಲಯದಲ್ಲಿ ಗುರುತಿಸಿಕೊಳ್ಳಲು ನನಗೆ ನನ್ನ ಹುಟ್ಟೂರಿನ ಮತ್ತು ಕುಟುಂಬದ ಹಿನ್ನಲೆ ಪ್ರಮುಖ ಪಾತ್ರ ವಹಿಸಿದೆ. ಮೈಸೂರಿನಂತಹ ಸಾಂಸ್ಕøತಿಕ ವೈಭವದ ಪ್ರದೇಶದಲ್ಲಿ ಕನ್ನಡ ಸೇವೆ ಮಾಡಲು ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಎಂದರು.
ಯುವಕರು ಸಾಮಾಜಿಕ ಚುಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಯುವಕರ ಪಾತ್ರ ಬಹುಮುಖ್ಯವಾಗಿದೆ. ಸೌಹಾರ್ದಯುತವಾದ ಭಾವನೆಯಿಂದ ಪ್ರರಸ್ಪರ ಸ್ನೇಹಭಾವದಿಂದ ಒಗ್ಗೂಡಿ ಕಾರ್ಯನಿರ್ವಹಿಸಿದರೆ ಎಂತಹ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಊರುಬಗೆ ಗ್ರಾಮ ಪಂಚಾಯಿತಿ ಸದಸ್ಯೆ ಕೆ.ಪಿ. ಭಾರತಿ, ಮಾಜಿ ಅಧ್ಯಕ್ಷರಾದ ಬಿ.ಕೆ. ಲಕ್ಷ್ಮಣಕುಮಾರ್, ಗ್ರಾಮದ ಮುಖಂಡರು, ಹಿರಿಯರು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದು ಗೋಪಾಲ್ ಅವರಿಗೆ ಶುಭ ಹಾರೈಸಿದರು.



