September 14, 2026
;
noukara1

 

 

ಸರಕಾರಿ ನೌಕರರ ಸಂಘದ ಮೂಡಿಗೆರೆ ಘಟಕದ ಅಧ್ಯಕ್ಷ, ರಾಜ್ಯ ಪರಿಷತ್ ಸದಸ್ಯ ಹಾಗೂ ಖಜಾಂಚಿ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಶಿಕ್ಷಕ ಬಿ.ಆರ್.ನವೀನ್, ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ದಿನೇಶ್, ಖಜಾಂಚಿಯಾಗಿ ಖಜಾನೆ ಇಲಾಖೆಯ ಪ್ರವೀಣ್ ಆಯ್ಕೆಯಾದರು.

34 ನಿರ್ದೇಶಕರು ಹೊಂದಿರುವ ಸಂಘದಲ್ಲಿ, ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಕಣದಲ್ಲಿದ್ದ ಶಿಕ್ಷಕ ನವೀನ್ ಹಾಗೂ ಪಿಡಿಒ ಪದ್ಮರಾಜ್ ನೇರ ಪೈಪೋಟಿ ನಡೆದಿದ್ದು, ನವೀನ್ ಅವರಿಗೆ17 ಮತ, ಪದ್ಮರಾಜ್ ಅವರಿಗೆ 16 ಮತ ಚಲಾವಣೆಯಾಗಿ, 1 ಮತ ತಿರಸ್ಕೃತವಾಗಿದ್ದರಿಂದ ನವೀನ್ ಅವರು 1 ಮತದಿಂದ ಗೆಲುವು ಸಾಧಿಸಿದರು.

ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಆರೋಗ್ಯ ಇಲಾಖೆಯ ದಿನೇಶ್ 18 ಮತ ಪಡೆದು 1 ಮತದಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರಾಜೇಶ್ ಅವರನ್ನು ಪರಾಭವಗೊಳಿಸಿದ್ದಾರೆ.

ಖಜಾಂಚಿ ಚುನಾವಣೆಯಲ್ಲಿ ಖಜಾನೆ ಇಲಾಖೆಯ ಪ್ರವೀಣ್ 19 ಮತ ಪಡೆದು, ಎದುರಾಳಿ ಅಭ್ಯರ್ಥಿ ಅರಣ್ಯ ಇಲಾಖೆಯ ಸುಹಾಸ್ ಅವರ ವಿರುದ್ಧ 2 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

ಅಧ್ಯಕ್ಷರಾಗಿ ಅಯ್ಕೆಯಾಗಿರುವ ಬಿ.ಅರ್. ನವೀನ್ ಅವರು ಮೂಡಿಗೆರೆ ಲೋಕವಳ್ಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಸತತ ಎರಡನೇ ಅವಧಿಗೆ ತಾಲ್ಲೂಕು ನೌಕರರ ಸಂಘದ ನಿರ್ದೇಶಕರಾಗಿದ್ದಾರೆ. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ 2009ರಿಂದ ಸತತವಾಗಿ ನಿರ್ದೇಶಕರಾಗಿದ್ದಾರೆ. ಎನ್.ಪಿ.ಎಸ್. ನೌಕರರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ನವೀನ್ ಅವರು ಪತ್ರಿಕೆಯೊಂದಿಗೆ ಮಾತನಾಡಿ ; ತಾಲ್ಲೂಕು ನೌಕರರ ಸಂಘವನ್ನು ಬಲಪಡಿಸಲು ಮತ್ತು ಸಕ್ರಿಯವಾಗಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲಾ ನಿರ್ದೇಶಕರ ಸಹಕಾರದಿಂದ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ. ತಾಲ್ಲೂಕು ನೌಕರರ ಭವನ ಶಿಥಿಲವಾಗಿದ್ದು, ಅದನ್ನು ದುರಸ್ತಿಪಡಿಸುವುದು ಸೇರಿದಂತೆ ನೌಕರರ ಸಂಘದಿಂದ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಘವನ್ನು ಮುನ್ನಡಸುವುದಾಗಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;