ಪ್ರಮೋದ್ ಕೆಂಜಿಗೆ ಅವರ ಕ್ರಿಯೇಷನ್ ಆರ್ಕಿಟೆಕ್ಟ್ಸ್ ಅಂಡ್ ಡಿಸೈನರ್ ಸಂಸ್ಥೆಯು 2024ನೇ ಸಾಲಿನ ನ್ಯಾಷನಲ್ ಅರ್ಕಿಟೆಕ್ಚರ್ ಅಂಡ್ ಇಂಟಿರಿಯರ್ ಡಿಸೈನ್ ಎಕ್ಸಲೆನ್ಸ್ ಅವಾರ್ಡ್ ಅನ್ನು ಪಡೆದಿದೆ.
ಇತ್ತೀಚೆಗೆ ಮುಂಬೈನ ದಿ ತಾಜ್ ವೆಸ್ಟ್ ಎಂಡ್ ನಲ್ಲಿ ನಡೆದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಗಿದೆ.
Outstanding and Innovative Architecture & Design Firm of the year 2024, under Residential Projects and excellent consultancy for the year 2024 (Global Edition), Trusted & Creative Architect & Designer of the year 2024, Karnataka ಎಂಬ ಹೆಗ್ಗಳಿಕೆಯನ್ನು ಪ್ರಮೋದ್ ಕೆಂಜಿಗೆ ಅವರ ಸಂಸ್ಥೆ ಪಡೆದಿದೆ.

ಪ್ರಮೋದ್ ಅವರು ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ ಗ್ರಾಮದವರಾಗಿದ್ದು, ಕಾಫಿ ಎಸ್ಟೇಟ್ ಜೊತೆಗೆ ಆರ್ಕಿಟೆಕ್ಟ್ ಮತ್ತು ಡಿಸೈನರ್ ಆಗಿ ಹೆಸರು ಮಾಡಿದ್ದಾರೆ. ನೂರಾರು ಅಪರೂಪದ ಕಟ್ಟಡಗಳನ್ನು ವಿನ್ಯಾಸ ಮತ್ತು ನಿರ್ಮಾಣ ಮಾಡಿ ಪ್ರಶಂಸೆ ಪಡೆದಿರುತ್ತಾರೆ. ಇದೀಗ ಅವರ ಸಾಧನೆಗೆ ರಾಷ್ಟ್ರಮಟ್ಟದ ಪ್ರಶಸ್ತಿಯು ಅರಸಿ ಬಂದಿದೆ.




