September 12, 2026
;
balige

 

 

ದೆಹಲಿಯಲ್ಲಿ Alee Club ವತಿಯಿಂದ ಆಯೋಜಿದ್ದ Miss & Mr TEEN INDIA 2026 ಸ್ಪರ್ಧೆಯಲ್ಲಿ ನಮ್ಮ ಮಲೆನಾಡಿನ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಬಲಿಗೆ ಗ್ರಾಮದ ಕುಮಾರಿ ಸಾಚಿಸ್ಮಯಾ ಬಿ.ಪಿ. ಅವರು ಫೈನಲಿಸ್ಟ್ ಆಗಿ ಆಯ್ಕೆಯಾಗಿ, ಸೆಪ್ಟೆಂಬರ್ 2ರಂದು ದೆಹಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ  ಪ್ರಥಮ ರನ್ನರ್ ಅಪ್ (Second Runner Up) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಸಾಚಿಸ್ಮಯಾ ಅವರು ಬಲಿಗೆ ಗ್ರಾಮದ ಕಾಫಿ ಬೆಳೆಗಾರರಾದ ಪ್ರಶಾಂತ್ ಬಲಿಗೆ ಮತ್ತು ಶ್ರೀಮತಿ ಚೈತ್ರ ಅವರ ಪುತ್ರಿ. (ಬಲಿಗೆ ದಿ.ರಾಮೇಗೌಡ ಶ್ರೀಮತಿ ಲಲಿತಮ್ಮ ಹಾಗೂ ಗುತ್ತಿಹಳ್ಳಿ ದಿ.ಗೋಪಾಲಗೌಡ, ಶ್ರೀಮತಿ ಯಶೋದಮ್ಮ ಅವರ ಮೊಮ್ಮಗಳು)

ಸಾಚಿಸ್ಮಯಾ ಬೆಂಗಳೂರು ಹೆಚ್.ಎಸ್.ಆರ್. ಲೇಯೌಟ್ ಜೆಎಸ್ ಎಸ್ ಪಬ್ಲಿಕ್ ಸ್ಕೂಲ್ ನಲ್ಲಿ 10 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಿದ್ದು. ಉತ್ತಮ ಭರತನಾಟ್ಯ ಕಲಾವಿದೆಯಾಗಿದ್ದು, ಎನ್.ಸಿ.ಸಿ ಮತ್ತು ಸ್ಕೌಟ್ ಅಂಡ್ ಗೈಡ್ಸ್ ನಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಯಾರ ತರಬೇತಿಯಿಲ್ಲದೇ ಸ್ವಂತ ಶ್ರಮದಿಂದ ಟೀನ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಆರಂಭಿಕ ಹಂತಗಳನ್ನು ಯಶಸ್ವಿಯಾಗಿ ಪೂರೈಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಇದೀಗ ಹತ್ತಾರು ಸ್ಪರ್ಧಿಗಳ ಕಠಿಣ ಸ್ಪರ್ಧೆಯ ನಡುವೆ ಪ್ರಥಮ ರನ್ನರ್ ಅಪ್ ಆಗಿ ಛಾಪು ಮೂಡಿಸಿದ್ದಾರೆ.

ಸಾಚಿಸ್ಮಯಾ ಅವರ ಸಾಧನೆಗೆ ಅವರ ಪೋಷಕರು, ಕುಟುಂಬದವರು, ಬಂಧುಗಳು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;