gurupura1

 

 

ಆಧ್ಯಾತ್ಮಿಕ ಪೂಜಾ ಕಾರ್ಯಕ್ರಮಗಳಿಂದ ನಮ್ಮ ಸಂಸ್ಕೃತಿ  ಗಟ್ಟಿ ಆಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿ ನಶಿಸಿ ಹೋದಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಪ್ರತಿ ಮನೆಯಲ್ಲಿ ಕೂಡ ಮಕ್ಕಳಿಗೆ  ಆಧ್ಯಾತ್ಮಿಕ ಚಿಂತನೆಯ ಮುಖಾಂತರ ನೀತಿ ಪಾಠಗಳನ್ನು ಹೇಳಿ ಅವರನ್ನು ಮುಂದಿನ ದೇಶದ ಒಳ್ಳೆಯ ಪ್ರಜೆಗಳಾಗಿ ಮಾಡಬೇಕೆಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರನಂದಾ ಸ್ವಾಮೀಜಿ ಹೇಳಿದರು. ಕರೆ ನೀಡಿದರು.

ಅವರು ಶುಕ್ರವಾರ ಮೂಡಿಗೆರೆ ತಾಲೂಕಿನ ಜನ್ನಾಪುರ ಗಣಪತಿ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ವಿವಿಧ ಸಂಘ ಸಂಸ್ಥೆಯಿಂದ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಅಶೀರ್ವಚನ ನೀಡಿ ಮಾತನಾಡಿದರು.

ಭಾರತದ ಮಣ್ಣಿಗೆ ವಿಶ್ವ ಶ್ರೇಯದ ಗುಣವಿದೆ. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದೆಂಬಂತೆ ದಾನಕ್ಕೆ ನಮ್ಮಲ್ಲಿ ಮಹತ್ವವಿದೆ. ನಮ್ಮ ಹಿಂದಿನವರು ಜ್ಞಾನವಂತರಾಗಿದ್ದರು. ಅದರೆ ಇಂದು ಯುವ ಜನಾಂಗ ಮೊಬೈಲ್ ಹಾಗೂ ದುಶ್ಚಟಗಳಿಗೆ ದಾಸರಾಗಿ ಅಜ್ಞಾನಿಗಳಾಗುತ್ತಿರುವುದನ್ನು ತಡೆಯಬೇಕಿದೆ ಎಂದು ಹೇಳಿದರು.

ಶ್ರೀ ಧರ್ಮಸ್ಥಳ  ಶ್ರೀ ಮಂಜುನಾಥೇಶ್ವರ  ಧರ್ಮೋಸ್ಥಾನ ಟ್ರಸ್ಟಿನ  ಟ್ರಸ್ಟಿಯಾದ ಪ್ರಶಾಂತ್ ಚಿಪ್ರಗುತ್ತಿರವರು ಉದ್ಘಾಟನೆ ಮಾಡಿ  ಮಾತನಾಡುತ್ತಾ,  ಆಧ್ಯಾತ್ಮಿಕತೆಯ ಪ್ರಕಾರ ಶ್ರೀ ನಾರಾಯಣದೇವರ ವ್ರತದ  ಪೂಜೆಯನ್ನು ಶ್ರೀ  ಸತ್ಯನಾರಾಯಣ ಪೂಜೆ ಎಂದು ಕರೆಯುವ ಉದ್ದೇಶ ಏನೆಂದರೆ ಈ ವ್ರತವನ್ನ ಕೈಗೊಂಡು ಪೂಜೆ ಮಾಡುವವರು ಮುಂದಿನ ದಿನಗಳಲ್ಲಿ ಸತ್ಯದ ಪಥದಲ್ಲಿ ಜೀವನವನ್ನು ಸಾಗಿಸುತ್ತೇವೆ, ಮೋಸ ವಂಚನೆ ಭ್ರಷ್ಟಾಚಾರ  ಮಾದಕ ವಸ್ತುಗಳ ಸೇವನೆ ಹೀಗೆ ಅಸತ್ಯದ ಮಾರ್ಗವನ್ನು ದೂರ ಮಾಡಿ ಸತ್ಯದ ಮಾರ್ಗದಲ್ಲಿ ಸಾಗುತ್ತೇವೆ  ಎಂದು ಸಂಕಲ್ಪ ಮಾಡುವುದೇ ಈ ಪೂಜೆಯ ಮೂಲ ಉದ್ದೇಶ. ಡಾ ಡಿ ವೀರೇಂದ್ರ ಹೆಗ್ಗಡೆಯವರು ಈ ಸತ್ಯನಾರಾಯಣ ಪೂಜೆಯನ್ನು ಮಾಡಿರುವ ಉದ್ದೇಶ  ಸತ್ಯದ  ಅರಿವಿನ ಜೀವನ ಮಾಡಿ ಒಂದು ಒಳ್ಳೆಯ  ಸ್ವಾಸ್ಥ್ಯ ಸಮಾಜವನ್ನು   ನಿರ್ಮಾಣ ಮಾಡಬೇಕೆಂಬುದು ಅವರ ಬಯಕೆ ಎಂದು ಹೇಳಿದರು.

ವಿಧಾನ ಪರಿಷತ್ತಿನ ಉಪ ಸಭಾಪತಿಗಳಾ ಎಂ ಕೆ ಪ್ರಾಣೇಶ್ ರವರು ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಮಾಡಲು ಸುಲಭವಾಗುತ್ತದೆ. ಇಂಥ ಕಾರ್ಯಕ್ರಮಗಳು ಆಗಾಗ  ನಡೆಯುತ್ತಿರಬೇಕು ಎಂದು ಸಲಹೆಯನ್ನು ನೀಡಿದರು. ನಂಬಿಕೆಯೆ ಶಕ್ತಿ. ಶಕ್ತಿಯ ರೂಪದಲ್ಲಿರುವ ಭಗವಂತನ್ನು ಆರಾಧಿಸುವ ಮೂಲಕ ಎಲ್ಲರೂ ಸಹಬಾಳ್ವಿಯಿಂದ ಒಟ್ಟಾಗಿ ಸಾಗಿಸುವ ಕೆಲಸ ಮಾಡೋಣವೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆ. ಎಸ್. ರಘು ಮಾತನಾಡಿ  ಹಿಂದುತ್ವವನ್ನು ಉಳಿಸಿ ಬೆಳೆಸಬೇಕು ಇಲ್ಲವಾದರೆ ದೇಶಕ್ಕೆ ದೊಡ್ಡ ಅಪಾಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶಿವಾನಂದ್, ದೀಪಕ್ ದೊಡ್ಡಯ್ಯ, ಜನಜಾಗೃತಿ ವೇದಿಕೆ ಸದಸ್ಯ ನಯನ ತಳವಾರ, ದೀಪಕ್ ದೊಡ್ಡಯ್ಯ, ಸುನಿಲ್ ನಿಡಗೋಡು, ಗೀರಿಶ್ ಮಣ್ಣಿಕೆರೆ, ಅದರ್ಶ್ ಕನ್ನಳ್ಳಿ, ಭರತ್, ರಾಮಚಂದ್ರ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ