ಡಿಸೆಂಬರ್ 1ರಂದು ಶಿವಮೊಗ್ಗ ನಗರದ ಚಾಣಕ್ಯ ಚೆಸ್ ಶಾಲೆಯ ವತಿಯಿಂದ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಮೂಡಿಗೆರೆ ನಳಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಶಕ್ತಿ ದೇವರತ್ ಪ್ರಕಾಶ್ 18ವರ್ಷದ ವಯೋಮಿತಿಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನ ತಂದಿರುತ್ತಾರೆ.
ಇವರು ಬಣಕಲ್ ಹೋಬಳಿ ಪಲ್ಗುಣಿ ಗ್ರಾಮದ ಪ್ರಕಾಶ್ ಮತ್ತು ಸುಪ್ರಿತಾ ದಂಪತಿಯ ಪುತ್ರನಾಗಿರುತ್ತಾರೆ, ರಾಜ್ಯ ಮಟ್ಟದಲ್ಲಿ ವಿಜೇತರಾದ ಶಕ್ತಿ ದೇವರತ್ ಪ್ರಕಾಶ್ ರವರಿಗೆ ನಳಂದ ಶಾಲಾ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.


