September 11, 2026
;
kaadane

 

 

ರಾಜ್ಯದಲ್ಲಿ ಕಾಡಾನೆಗಳ ಅಸಹಜ ಸರಣಿ ಸಾವು ಮುಂದುವರಿದಿದೆ, ಜಮೀನಿನಲ್ಲಿ ವಿದ್ಯುತ್ ತಂತಿ ತಗಲಿ ಕಾಡಾನೆಯೊಂದು ದಾರುಣವಾಗಿ ಸಾವು ಕಂಡಿದೆ. ಜಮೀನಿನಲ್ಲಿ ಕೆಳಭಾಗಕ್ಕೆ ಜೋತು ಬಿದ್ದಿದ್ದ ವಿದ್ಯುತ್ ತಂತಿಯಿಂದ ಈ ಅವಘಡ ನಡೆದಿದೆ.

ಈ ಘಟನೆ ತರೀಕೆರೆ ತಾಲ್ಲೂಕಿನ ಲಿಂಗದಳ್ಳಿಯ ಉಡವಾ ಗ್ರಾಮದಲ್ಲಿ ನಡೆದಿದೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿ ಎರಡು ಕಾಡಾನೆಗಳು ಮೃತಪಟ್ಟಂತಾಗಿದೆ.

ಆಹಾರ ಆರಿಸಿ ಬಂದ ಕಾಡಾನೆಗೆ ವಿದ್ಯುತ್ ತಂತಿ ತಗಲಿ ಸ್ಥಳದಲ್ಲೇ ಸಾವನ್ನಪ್ಪಿದೆ, ವಿದ್ಯುತ್ ತಂತಿ ತಗಲಿ ಕಂದಕಕ್ಕೆ ಉರುಳಿ ಬಿದ್ದಿರುವ ಒಂಟಿ ಸಲಗ ಅಸುನೀಗಿದೆ, ಕಳೆದ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದರೂ ಕೂಡ ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವೇ ಇರಲಿಲ್ಲ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾನವ ಕಾಡಾನೆಗಳ ಸಂಘರ್ಷ ತೀವ್ರಗೊಂಡಿದೆ, ಒಂದೆಡೆ ಕಾಡಾನೆ ದಾಳಿಯಿಂದ ಮನುಷ್ಯರು ಮೃತಪಟ್ಟರೆ ಮತ್ತೊಂದೆಡೆ ವಿದ್ಯುತ್ ಅವಘಡಗಳಿಂದ ಕಾಡಾನೆಗಳು ನಾವು ಕಾಣುತ್ತಿವೆ.

ಜಮೀನಿನ ಕೆಲಸಕ್ಕೆ ತೆರಳಿದ ಶಿವಬಸಪ್ಪ ಆನೆ ಸಾವನ್ನಪ್ಪಿರುವುದನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.  ಇತ್ತೀಚೆಗೆ ಆಲ್ದೂರು ಸಮೀಪ ಕಾಡಾನೆಯೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಕಾಡಾನೆ ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;