bharath photo

 

 

ಚಿಕ್ಕಮಗಳೂರು ಜಿಲ್ಲೆಯ ಅತೀ ಎತ್ತರದ ಸ್ಥಳವಾಗಿರುವ ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್ ಗಿರಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಕಾಫಿ ತೋಟ ಮತ್ತು ಕೃಷಿ ಭೂಮಿಗಳನ್ನು ಹೊಂದಿದ್ದು ಆದರೆ ಈ ಭೂಮಿಗಳನ್ನು ಕೊಳ್ಳುವವರು ಬಂದರೂ ಕೂಡ ಮಾರಾಟ ಮಾಡಲು ಸಾಧ್ಯವಾಗದಂತೆ ಮತ್ತು ಬ್ಯಾಂಕ್ ಸೊಸೈಟಿ ಸಾಲ ಪಡೆಯಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಕಾಂಗ್ರೇಸ್ ಮುಖಂಡ ಮತ್ತು  ಕೆ.ಪಿ.ಟಿ.ಸಿ.ಎಲ್ ಹೊರಗುತ್ತಿಗೆ ನೌಕರರ ಒಕ್ಕೂಟ ಉಪ್ಪಳ್ಳಿ ಕೆ.ಭರತ್ ರವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ಶೃಂಗೇರಿಗೆ ಆಗಮಿಸಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಪತ್ರ ನೀಡಿದ್ದಾರೆ.

ಕಳೆದ 13-14 ವರ್ಷಗಳಿಂದ ಇಲ್ಲಿನ ಕಾಫಿತೋಟದ ಮಾಲಿಕರು ಮತ್ತು ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರುಗಳ ಗೋಳು ಕೇಳುವವರು ಇಲ್ಲ ಬಗೆಹರಿಸುವವರು ಮುಂದೆ ಬರುತ್ತಿಲ್ಲ. ಏಕೆಂದರೆ 2009ರಲ್ಲಿ ಅಂದಿನ ಸ್ಥಳಿಯ ಶಾಸಕ ಸಿ ಟಿ ರವಿಯವರು ಈ ವ್ಯಾಪ್ತಿಯಲ್ಲಿ ಜಮೀನು ಮತ್ತು ಕಾಫಿತೋಟ ಗಳೆಲ್ಲ ಇನಾಂ ಭೂಮಿಯೆಂದು ಅಂದಿನ ಅವರ ಸರ್ಕಾರದಲ್ಲಿ ಯಾವುದೇ ರೀತಿಯಾದ ವ್ಯಾಪಾರ ವಹಿವಾಟು ಮಾಡಿದರೂ ಕೂಡ ನೋಂದಾವಣೆ ಆಗದಂತೆ ತಡೆ ಹಿಡಿದಿರುತ್ತಾರೆ. ಬಿ ಜೆ ಪಿ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಎರಡು ಬಾರಿ ಅಧಿಕಾರಕ್ಕೆ ಬಂದಿದ್ದರೂ ಕೂಡ ಈ ವ್ಯಾಪ್ತಿಯಲ್ಲಿ ಇನಾಂ ಭೂಮಿ ಇದೆಯೇ, ಇನಾಂ ಕೊಟ್ಟವರು ಯಾರು ಅಥವಾ ಅವರ ಹಿನ್ನಲೆ ಏನು ಅಥವಾ ಇನಾಂ ಭೂಮಿಯನ್ನು ಪತ್ತೆ ಹಚ್ಚಲು ಯಾವುದಾದರು ಸಮಿತಿಯನ್ನು ರಚಿಸಿದ್ದಾರೆಯೇ ಇದಾವುದನ್ನು ಇಲ್ಲಿಯವರೆಗೆ ಮಾಡಿರುವುದಿಲ್ಲ.

ಭೂಮಿಯನ್ನು ಸಾವಿರಾರು ಜನಗಳು ತಮ್ಮ ಮಕ್ಕಳ ವಿಧ್ಯಾಭ್ಯಾಸ ಮದುವೆ ಅಥವಾ ಮನೆ ಕಟ್ಟುವುದು ಇನ್ಯಾವುದೇ ರೀತಿಯಾದ ವ್ಯವಹಾರ ವಹಿವಾಟುಗಳನ್ನು ನಡೆಸಲು ಆಗದೇ ತಮ್ಮ ಅಳಲನ್ನು ಯಾರಲ್ಲಿ ತೋಡಿಕೊರ್ಳಳುವುದು ಎಂಬುವುದು ತಿಳಿಯದೇ ದಿಕ್ಕು ತೋಚದಂತೆ ತ್ರಿಶಂಕು ಸ್ಥಿತಿಯಲ್ಲಿ ಇಲ್ಲಿನ ನಿವಾಸಿಗಳು ಜೀವನ ನಡೆಸುತ್ತಿದ್ದಾರೆ. ಆದ ಕಾರಣ ಈ ಕೂಡಲೆ ಐ.ಡಿ ಪಿಠ ವ್ಯಾಪ್ತಿಗೆ ಇರುವ ಅಡಚಣೆಗಳನ್ನು ಅದು ಸರ್ಕಾರ ಅಥವಾ ನ್ಯಾಯಾಲಯದಲ್ಲಿ ಇದ್ದರೂ ಕೂಡ ಅದನ್ನು ಸರ್ಕಾರ ಸೂಕ್ಷತೆಯಿಂದ ಪರಿಗಣನೆಗೆ ತೆಗೆದುಕೊಂಡು ಬಗೆಹರಿಸಲು ಮುಂದಾಗಬೇಕು ಎಂದು ಭರತ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ