ಕಳಸ ಪೊಲೀಸ್ ಠಾಣೆಯ ಪಿಎಸ್ಐ ನಿತ್ಯಾನಂದ ಗೌಡ ವಿರುದ್ಧ ಅವರ ಪತ್ನಿಯೇ ದೂರು ದಾಖಲಿಸಿರುವ ಘಟನೆ ನಡೆದಿದೆ.
ಕಳಸ ಠಾಣೆಯ ಠಾಣಾಧಿಕಾರಿ ನಿತ್ಯಾನಂದ ಅವರ ಪತ್ನಿ ಅಮಿತಾ ಅವರು ಕಳಸ ಠಾಣೆಯಲ್ಲಿ ಶುಕ್ರವಾರ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.
ತನಗೆ ತನ್ನ ಪತಿ ನಿತ್ಯಾನಂದ ತೀವ್ರ ಹಲ್ಲೆ ನಡೆಸಿದ್ದು ದೌರ್ಜನ್ಯ ನಡೆಸಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದೂರಧಾರೆ ಅಮಿತಾ ಅವರು ಶುಕ್ರವಾರ ಸಂಜೆಯಿಂದ ಕಳಸ ಠಾಣೆಯಲ್ಲಿ ಕುಳಿತಿದ್ದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಂದು ತನ್ನ ನೋವನ್ನು ಕೇಳುವ ವರೆಗೆ ಠಾಣೆಯಿಂದ ಕದಲುವುದಿಲ್ಲ ಎಂದು ಹಠ ಹಿಡಿದು ಅಲ್ಲಿಯೇ ಕುಳಿತ್ತಿದ್ದಾರೆ.
ಅಮಿತಾ ಅವರು ತನ್ನ ಪತಿ ನಿತ್ಯಾನಂದ ಗೌಡ ವಿರುದ್ಧ ನೀಡಿರುವ ದೂರು ಈ ಕೆಳಗಿನಂತಿದೆ.
ನಿತ್ಯಾನಂದ ಗೌಡ ಅವರು ನನ್ನನ್ನು ಪೊಲೀಸ್ ಕ್ವಾಟ್ರಸಿಗೆ ಕರೆಸಿಕೊಂಡು ನನ್ನ ಮೇಲೆ ಹಲ್ಲೇ ನಡೆಸಿರುತ್ತಾರೆ. ನನಗೆ ಕಾಲಿನಿಂದ ಒದ್ದು, ತಲೆಕೂದಲನ್ನು ಎಳೆದಾಡಿ ಕೈ ಹಿಡಿದು ನನ್ನ ಬ್ಯಾಗನ್ನು ಮತ್ತೆ ನನ್ನನ್ನು ಕಾಲಿನಿಂದ ಒದ್ದು ರೂಮಿನಿಂದ ಹೊರಗೆ ಹಾಕಿದ್ದಾನೆ, ಈತ ನನಗೆ ಕೊಲೆ ಮಾಡುವುದಾಗಿ ಕೂಡ ಬೆದರಿಕೆ ಹಾಕಿದಾನೆ, ಈತ ನನಗೆ 50 ಲಕ್ಷ ಹಣ ವರದಕ್ಷಿಣೆ ಆಗ ನೀಡಬೇಕು ಇಲ್ಲವಾದಲ್ಲಿ, ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದಾನೆ.
ಈತ ಮಾತ್ರ ಹಲ್ಲೇ ಮಾಡಿದ್ದು ಅಲ್ಲದೇ ಈತನ ತಂಗಿ ಮೇನಕ, ಅವಳ ಗಂಡ ಚಂದ್ರಕಾಂತ್ ನನಗೆ ಏರು ಧ್ವನಿಯಲ್ಲಿ ಮಾತಾಡಿ ನನಗೆ ಹಲ್ಲೆ ಮಾಡಲು ಬಂದಿದ್ದಾರೆ, ನಿತ್ಯಾನಂದ ಗೌಡ ನನಗೆ ಹಲವು ಬಾರಿ ಹಲ್ಲೆಯನ್ನು ಮಾಡಿರುತ್ತಾರೆ, ಹೊಟ್ಟೆಯ ಭಾಗಕ್ಕೆ ನನಗೆ ಕಾಲಿನಿಂದ ಒದ್ದಿದ್ದರಿಂದ ತೀವ್ರ ನೋವಾಗಿದೆ.
ನವೆಂಬರ್ 30ರಂದು ಸುಮಾರು 13ನಿಮಿಷಗಳ ಕಾಲ್ ಫೋನಿನಲ್ಲಿ ನನಗೆ ಬೆದರಿಕೆ ಹಾಕಿದ್ದಾರೆ. ನಾನು ಆಗ ಉಡುಪಿಯ ಎಸ್.ಪಿ ಡಾ|| ಅರುಣ್ ಕುಮಾರ್ ಸರ್ ರವರಿಗೆ ಫೋನಿನ ಮೂಲಕ ಕರೆ ಮಾಡಿ ತಿಳಿಸಿರುತ್ತೇನೆ, ಆಗ ಅವರು ಉಡುಪಿ ಮಹಿಳಾ ಠಾಣೆಯಲಿ ದೂರು ದಾಖಲು ಮಾಡಲು ತಿಳಿಸಿರುತ್ತಾರೆ, ಆಗಲು ನಾನು ನನ್ನ ಮಗುವಿನ ಮುಖ ನೋಡಿ ಈತ ಸರಿ ಹೋಗಬಹುದು ಅಂತಾ ಅವತ್ತು ಕಂಪ್ಲೆಂಟ್ ಮಾಡಿರುವುದಿಲ್ಲ. ಈತ ಇವತ್ತು ನನ್ನನ್ನು ಕರೆಸಿಕೊಂಡು ಹಲೆ ಮಾಡುತ್ತಾನೆ ಅಂತ ನಾನು ಭಾವಿಸಿರಲಿಲ್ಲ, ಗಂಡ ಎನ್ನುವ ವಿಶ್ವಾಸದ ಮೇಲೆ ಬಂದಿದ್ದೇನೆ, ಆತ ನನಗೆ ಕರೆಸಿಕೊಂಡು ಮೋಸದಿಂದ ನನ್ನ ಮೇಲೆ ಹಲ್ಲೆ ಮಾಡಿರುತ್ತಾನೆ, ನಾನು ಈತನಿಂದ ತುಂಬಾನೆ ಮೋಸ ಹೋಗಿದ್ದೆನೆ. ದಯವಿಟ್ಟು ಸರ್ ನನಗೆ ತಾವು ನ್ಯಾಯವನ್ನು ಒದಗಿಸಿಕೊಡಬೇಕೆಂದು ನಿಮ್ಮಲಿ ಕೇಳಿಕೊಳ್ಳುತ್ತೇನೆ,
ಈತನ ತಂಗಿ ಮತ್ತು ತಂಗಿ ಗಂಡ ಕೂಡ ಅವಾಚ್ಯ ಶಬ್ಬಗಳಿಂದ ನನ್ನನ್ನು ನಿಂದಿಸಿರುತ್ತಾನೆ, ನಿತ್ಯಾನಂದ ಗೌಡನ ಮೇಲೆ ಆತ ಕಾರ್ಯನಿರ್ವಹಿಸಿದ ಎಲ್ಲಾ ಠಾಣೆಗಳಲ್ಲೂ ಆತನ ವೈಯಕ್ತಿಕ ಜೀವನದ ಬಗ್ಗೆ ಕೆಟ್ಟ ಅಭಿಪ್ರಾಯಗಳಿವೆ. ಆತ ಠಾಣೆಗೆ ದೂರು ಕೊಡಲು ಬರುವ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾನೆ, ಪಾಸ್ಪೋರ್ಟ್ ಮಾಡಲು ಬರುವ ಮಹಿಳೆಯರನ್ನು ಕೂಡ ಮಂಚಕ್ಕೆ ಕರೆಯುತ್ತಾನೆ, ಈತ ಕಾಪು ಠಾಣೆಯಲ್ಲಿ ಇರುವಾಗ ಓರ್ವ ಮುಸ್ಲಿಂ ಮಹಿಳೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾನೆ, ನಾನು ಈತನ ರೂಂ ಗೆ ಎರಡು ಬಾರಿ ಹೋದಾಗ ಕಾಂಡೋಮ್ ಕೂಡ ಸಿಕ್ಕಿದೆ. ಇದೇ ವಿಚಾರದಲಿ, ಕಾಪು ಠಾಣೆಯಲ್ಲಿ ಮುಸ್ಲಿಂ ರು ಈತನಿಗೆ ಹೊಡೆಯಲು ಹೋಗಿರುತ್ತಾರೆ, ಅವತ್ತು ಎಸ್.ಪಿ ಈತನನ್ನು ಬಚಾವ್ ಮಾಡಿರುತ್ತಾರೆ. ಆನಂತರ ಕೋಟ ಠಾಣೆಯಲ್ಲಿ ಇರಬೇಕಾದರೆ ಪೆಸ್ಟುಕ್ ನಲ್ಲಿ ಬ್ರಹ್ಮಾವರದ ವಿವಾಹಿತ ಮಹಿಳೆಯನ್ನು ಕಾಂಟಾಕ್ಟ್ ಮಾಡಿ ಜಾಗದ ವಿಷಯದಲಿ ನ್ಯಾಯ ಕೊಡಿಸುವುದಾಗಿ ಹಲವು ಬಾರಿ ಮಂಗಳೂರಿಗೆ ಈತನು ರೂಂ ಗೆ ಕರೆಸಿಕೊಂಡು ದೈಹಿಕವಾಗಿ ಬಳಸಿಕೊಂಡಿರುತ್ತಾನೆ, ಕೊನೆಗೆ ಆಕೆಯ ಪೋಟೊಗಳನ್ನು ಹಿಡಿದುಕೊಂಡು ಆಕೆಗೆ ಬ್ಲಾಕ್ ಮೆಲ್ ಕೂಡ ಮಾಡಿರುತ್ತಾನೆ, ಆಕೆ ಉಡುಪಿಯ ಡಿಎಆರ್ ಪೊಲೀಸರ ಹತ್ತಿರ ಹೇಳಿಕೊಂಡು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.
ಸರ್ ಈತ ಬೆಂಗಳೂರಿನಲ್ಲಿ ಓರ್ವ ಮಹಿಳೆಯನ್ನು ಮಂಚಕ್ಕೆ ಕರೆದು ಸಿಕ್ಕಿಹಾಕಿಕೊಂಡು ಆವತ್ತೆ ಕೆಲಸವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಹೋಗಿರುತ್ತಾನೆ. ಅವತ್ತು ಆತನನ್ನು ನಾನೆ ಬಚಾವ್ ಮಾಡಿ ಆಕೆಗೆ ನಿತ್ಯಾನಂದ ಗೌಡ 4 ಲಕ್ಷ ಹಣವನ್ನು ನೀಡಿ ಇತ್ಯರ್ಥ ಮಾಡಿಕೊಂಡು ಬಂದಿರುತ್ತಾನೆ. ಇದು ಕಬ್ಬನ್ ಪಾರ್ಕ್ ಠಾಣೆಯಲ್ಲಿ ನಡೆದಿರುತ್ತದೆ, ಸರ್ ಈತನ ಕೈಯಲಿ 3 ಪರ್ಸನಲ್ ನಂಬರ್ ಗಳಿವೆ ಒಂದು ನಂಬರ್ ನನಗೆ ನೀಡಿರುವುದಿಲ್ಲ. ಕೇವಲ ಹೆಂಗಸರನ್ನು ಮಂಚಕ್ಕೆ ಕರೆಯಲು ಇಟ್ಟುಕೊಂಡಿರುತ್ತಾನೆ, ದಯವಿಟ್ಟು ಆತನ ಕಾಲ್ ಡೀಟಲ್ಸ್ ಅನ್ನು ತೆಗೆದು ತನಿಖೆ ನಡೆಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗಿ ನಿಮ್ಮಲಿ, ಕೇಳಿಕೊಳ್ಳುತ್ತೇನೆ.
ಆತ ನನಗೆ ಇಲಿಯವರೆಗೂ ಸುಳ್ಳು ಹೇಳಿಕೊಂಡು ನನ್ನನ್ನು ನಂಬಿಸಿಕೊಂಡು ಬಂದಿರುತ್ತಾನೆ, ಇವತ್ತು ಕೂಡ ನನ್ನ ಮಗ ಕರೆ ಮಾಡಿದಾಗ ನನ್ನನ್ನು ಬರಲು ಹೇಳಿ ನನ್ನ ಮೇಲೆ ಹಲ್ಲೆ ಮಾಡಿರುತ್ತಾನೆ. ಇದರ ಜೊತೆಗೆ ಈತನ ತಂಗಿ ಮತ್ತು ತಂಗಿ ಗಂಡನನ್ನು ಕರೆಸಿ ಅವರ ಹತ್ತಿರ ಹಲ್ಲೆ ಮಾಡಲು ಕುಮ್ಮಕ್ಕು ನೀಡಿರುತ್ತಾನೆ. ತಂಗಿಯ ಗಂಡ ಚಂದ್ರಕಾಂತ್ ಕೋಠಾರಿ ಕೂಡ ನನಗೆ ಹಲ್ಲೆ ಮಾಡಲು ಮುಂದೆ ಬರುತ್ತಾನೆ, ಆಗ ಆತನ ಹೆಂಡತಿ ಮೇನಕಾ ತಡೆಯುತ್ತಾಳೆ.
ಒಟ್ಟಾರೆಯಾಗಿ ಅವರು ನನ್ನನ್ನು ಕೊಲೆ ಮಾಡಲು ನಿತ್ಯಾನಂದ ಗೌಡ ತನ್ನ ರೂಮಿಗೆ ನನ್ನು ಕರೆಸಿರುತ್ತಾನೆ. ಈತನ ಅನೈತಿಕ ಸಂಬಂಧದಿಂದ ನನ್ನ ಹಾಗೂ ನನ್ನ ಮಗನ ಜೀವನವನ್ನು ಬೀದಿಗೆ ತಂದಿದ್ದಾನೆ, ಸರಿಯಾದ ರೀತಿಯಲಿ ಈತನ ಮೇಲೆ ಕಾನೂನಿನಲ್ಲಿ ಕಠಿಣ ಕ್ರಮವನ್ನು ತೆಗೆದುಕೊಂಡು ಮುಂದೆ ಯಾವುದೇ ಹೆಣ್ಣಿನ ಜೀವನವನ್ನು ಹಾಳು ಮಾಡದ ಹಾಗೆ ಕ್ರಮವನ್ನು ತೆಗೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ನನಗೆ ನಿತ್ಯಾನಂದ ಗೌಡನಿಂದ ಕೊಲೆ ಬೆದರಿಕೆ ಇರುವುದರಿಂದ ನನ್ನ ಹಾಗೂ ನನ್ನ ಮಗನ ಜೀವಕ್ಕೆ ಏನೇ ಆದರೂ ನಿತ್ಯಾನಂದ ಗೌಡ, ಹಾಗೂ ಆತನ ತಂಗಿ ಮೇನಕಾ, ಅವಳ ಗಂಡ ಚಂದ್ರಕಾಂತ್ ಕೊಠಾರಿ ತಾಯಿ ಪ್ರೇಮಾ ಕುಮಾರ್ ಗೌಡ ತಮ್ಮ ಸೂರ್ಯಾನಂದ ಇವರೇ ಕಾರಣರಾಗುತ್ತಾರೆ.
ನಿತ್ಯಾನಂದಗೌಡ ಕೊಷ್ಚನ್ ಪೇಪ್ ಸಿಕ್ಕಿ ಸಬ್ ಇನ್ಸಪೆಕ್ಟರ್ ಆಗಿದ್ದಾನೆ, ಈ ಮೊದಲು ಏಜಿ ಆಪೀಸ್ ನಲಿ, ದೂರು ನೀಡಿದ್ದಾಗ ಈತ ದೂರನ್ನು ವಾಪಸ್ ಪಡೆಯಲು ಹೇಳಿರುತ್ತಾನೆ. ಈತನ ನಂಬಿ ನಾನು ಕೇಸ್ ಅನ್ನು ವಾಪಸ್ ವಡೆದಿರುತ್ತೆನೆ, ಈತ ಒಬ್ಬ ಮಹಾ ಸುಳ್ಳುಗಾರ, ಈತ ಏನೇ ಇದ್ದರೂ ಸುಳ್ಳು ಕೇಸ್ ದಾಖಲಿಸುವುದು ಇದೇ ಇವರ ಚಾಳಿ ಆಗಿದೆ.
ಈತ ಲಂಚ ತೆಗೆದುಕೊಂಡು ಈತನ ಮನೆಗೆ ಹೋಗಲು ರಿಸರ್ವ್ ಅರಣ್ಯ ಇಲಾಖೆಯಲ್ಲಿ ಬಂಡೆಕಲ್ಲು ಒಡೆದು ರಸ್ತೆಯನ್ನು ಕೂಡ ಮಾಡಿರುತ್ತಾನೆ. ಈ ವಿಚಾರದಲಿ ನಾನು ಕಂಪೆಟ್ ಕೊಡುತ್ತೇನೆ ಎಂದು ಈತ ಮಾದಲೇ ಆತನ ತಾಯಿಯನ್ನು ಕುದುರೆಮುಖ ಠಾಣೆಗೆ ಕಳುಹಿಸಿ ನನ್ನ ಮೇಲೆ ಸುಳ್ಳು ಕಂಪ್ಲೈಟ್ ಕೊಡಿಸಿರುತ್ತಾನೆ.
ಹೆಂಗಸರ ಕಾಮುಕ ನಿತ್ಯಾನಂದ ಮೇಲೆ ಸರಿಯಾದ ತನಿಖೆ ನಡೆಸಿ ಆತನ ಹಿನ್ನಲೆಯನ್ನು ಕೆಲಸ ನಿರ್ವಹಿಸಿದ ಠಾಣೆಯಲ್ಲಿ ತಿಳಿದುಕೊಂಡು ಈತನ ಮೇಲೆ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕಾಗಿ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
ನಿತ್ಯಾನಂದ ಕಳಸ ಮೂಲತಃ ಕಳಸ ತಾಲ್ಲೂಕಿನ ಸಂಸೆ ಸಮೀಪದವರಾಗಿದ್ದು, ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸಿ ಇದೀಗ ಕಳಸ ಠಾಣೆಯಲ್ಲಿ ಠಾಣಾಧಿಕಾರಿಯಾಗಿದ್ದಾರೆ. ಸ್ವತಃ ಪತ್ನಿಯೇ ಅವರ ಮೇಲೆ ದೂರು ನೀಡಿದ್ದು ಮಾತ್ರವಲ್ಲ ಅವರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಇಲಾಖೆಯಲ್ಲಿ ಸೂಕ್ತ ತನಿಖೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇತ್ತ ನಿತ್ಯಾನಂದ ಕೂಡ ತನ್ನ ಪತ್ನಿಯ ವಿರುದ್ಧ ಕಳಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಕಳಸ ಠಾಣೆಯಲ್ಲಿ ಠಾಣಾಧಿಕಾರಿಗೇ ಸಂಬಂಧಿಸಿದಂತೆ ಹೈಡ್ರಾಮಾ ನಡೆಯುತ್ತಿದೆ.



