kuruk 2

 

 

ಮೂಡಿಗೆರೆ ಪಟ್ಟಣದ ಶ್ರೀ ವೇಣುಗೋಪಾಲ ದೇವಾಲಯದ ಹಿಂಬದಿಯ ಕುರುಕುಮಕ್ಕಿ ಬಡಾವಣೆಯ ರಸ್ತೆಯನ್ನು ಕಳೆದ ವರ್ಷ ಪ.ಪಂ.ನಗರೋತ್ಥಾನ ಯೋಜನೆಯಲ್ಲಿ ಕಾಂಕ್ರೀಟೀಕರಣಗೊಳಿಸಲಾಗಿದೆ. ದೇವಸ್ಥಾನದ ಹಿಂಭಾಗದಲ್ಲಿ ಸ್ವಲ್ಪ ದೂರ ಮಾತ್ರ ಕಾಂಕ್ರಿಟೀಕರಣಗೊಳಿಸದೆ ಉಳಿಸಲಾಗಿದೆ. ಅಲ್ಲಿ ಹರಸಾ ಸಪಟ್ಟು ವಾಹನ ಚಾಲನೆ ಮಾಡಬೇಕಾದ ದುಸ್ತಿತಿ ಒದಗಿದೆ. ಗುಂಡಿಯಾದ ಕಡೆ ಮಣ್ಣನ್ನು ಹಾಕಲಾಗಿದೆ. ಅಲ್ಲಿನ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದ್ದು ರಸ್ತೆಯ ಮೇಲೆ ನಿರಂತರವಾಗಿ ನೀರು ಹರಿಯುವ ಕಾರಣ ನೀರು ಮಣ್ಣಿಗೆ ಸೇರಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಹಾಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ನಡೆದಾಡಲೂ ಕಷ್ಟವಾಗಿದೆ.

ಈ ಬಗ್ಗೆ ಅಲ್ಲಿನ ನಿವಾಸಿಗಳು ಹಲವಾರು ಬಾರಿ ಶಾಸಕಿ ನಯನಾ ಮೋಟಮ್ಮ ಮತ್ತು ಪ.ಪಂ.ಅಧಿಕಾರಿ ಗಳಿಗೆ ಮನವಿ ಸಲ್ಲಿಸಿ ರಸ್ತೆಯನ್ನು ಕಾಂಕ್ರೀಟೀಕರಣ ಗೊಳಿಸುವಂತೆ ಒತ್ತಾಯಿಸಿದರೂ ಪ್ರಯೋಜನ ಕಂಡುಬಂದಿಲ್ಲ.  ವೇಣುಗೋಪಾಲಸ್ವಾಮಿ ದೇವಾಲಯದ ಹಿಂಭಾಗದ ಕುರುಕ್ಕುಮ್ಮಿ ಬಡಾವಣೆಯ ರಸ್ತೆಯ ಸ್ವಲ್ಪ ಭಾಗವನ್ನು ಅಭಿವೃದ್ಧಿಪಡಿಸದೆ ಉಳಿಸಿದ್ದಾರೆ. ಇದರಿಂದ ರಸ್ತೆ ಗುಂಡಿಬಿದ್ದು ತಿರುಗಾಡಲು ಆಗುತ್ತಿಲ್ಲ. ಇಲ್ಲಿನ ಕುಡಿಯುವ ನೀರಿನ ಪೈಪ್‌ ಒಡೆದು ನೀರು ಸೋರಿಹೋಗುತ್ತಿದ್ದು ಅದು ಮಣ್ಣಿಗೆ ಸೇರಿ ರಸ್ತೆ ಸಂಪೂರ್ಣ ಕೆಸರಾಗಿದೆ.

ಈ ರಸ್ತೆಯಲ್ಲಿ ವಿದ್ಯುತ್ ಲೈನ್ ಹಾದುಹೋಗಿದೆ. ರಸ್ತೆಯಲ್ಲಿನ ನೀರು ಸೋರಿಕೆಯಿಂದ ವಿದ್ಯುತ್ ಕಂಬದ ಬುಡದ ಮಣ್ಣು ಕುಸಿದಿದ್ದು ಕಂಬ ಉರುಳಿ ಬೀಳುವ ಸಾಧ್ಯತೆಯಿದೆ. ಹಾಗೇನಾದರೂ ಸಂಭವಿಸಿದಲ್ಲಿ ದೊಡ್ಡ ಅನಾಹುತವೇ ಸಂಭವಿಸಲಿದೆ. ಈ ಕಂಬವನ್ನು ತೆರವುಗೊಳಿಸಿ ಬೇರೆ ಕಂಬ ಹಾಕಲು ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಕುರುಕುಮಕ್ಕಿ ರಸ್ತೆಯಲ್ಲಿ ಹಾದುಹೋಗಿರುವ ಹೈಪವರ್ ವಿದ್ಯುತ್‌ ಲೈನಿನ ಕಂಬ ಕುಸಿದು ಬೀಳುವ ಹಂತದಲ್ಲಿದೆ. ಆ ಕಂಬವನ್ನು ತೆಗೆದು ಬೇರೆ ಕಂಬ ಹಾಕಬೇಕು. ಉಳಿದಿರುವ ರಸ್ತೆಗೆ ಕಾಂಕ್ರೀಟ್ ಹಾಕಿ ಸರಿಪಡಿಸಬೇಕು.

-ನೀಲಮ್ ಬೊಹ್ರ, ಸ್ಥಳೀಯ ಕಾಳುಮೆಣಸು ವ್ಯಾಪಾರಿ.

ಕುರುಕ್ಕುಮಕ್ಕಿ ಬಡಾವಣೆ ಮೂಲಕ ಹಾದು ಹೋಗಿರುವ ವಿದ್ಯುತ್ ಲೈನಿನಲ್ಲಿ 2 ಕಂಬದ ಬಗ್ಗೆ ಸ್ಥಳಿಯರಿಂದ ದೂರು ಬಂದಿದೆ. ಶೀಘ್ರದಲ್ಲೇ ಪರಿಶೀಲಿಸಿ ಸರಿಪಡಿ ಸಲಾ ಗುವುದು ಎಂದು ಎಇಇ, ಮೆಸ್ಕಾಂ, ಮೂಡಿಗೆರೆ  ಜೀತೇಂದ್ರ ಹೇಳಿದ್ದಾರೆ.

ದೇವಸ್ಥಾನದ ಹಿಂಭಾಗದ ಕುರುಕ್ಕುಮಕ್ಕಿ ಬಡಾವಣೆಗೆ ಸಾಗುವ ರಸ್ತೆಯ ಆರಂಬದಲ್ಲಿ ರಸ್ತೆ ಗುಂಡಿ ಯಾಗಿ ಸಂಚರಿಸಲು ಕಷ್ಟವಾಗಿದೆ. ರಸ್ತೆ ಅಭಿವೃದ್ಧಿಪಡಿಸುವಂತೆ ಸ್ಥಳೀಯ ನಿವಾಸಿಗಳು ಮನವಿ ನೀಡಿದ್ದಾರೆ. ಮುಂದಿನ ಕ್ರಿಯಾ ಯೋಜನೆಯಲ್ಲಿ ಆ ರಸ್ತೆಯನ್ನು ಸೇರ್ಪಡೆಗೊಳಿಸಿ ಕಾಂಕ್ರೀಟೀಕ ರಣಗೊಳಿಸಲಾಗುವುದು.

-ನಯನಾ ಮೋಟಮ್ಮ, ಮೂಡಿಗೆರೆ ಶಾಸಕಿ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ