ಬೆಂಗಳೂರಿನಲ್ಲಿ ನಡೆದ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ ಲೈಟ್ ಫೌಂಡೇಶನ್ (ರಿ)ಸಂಸ್ಥಾಪಕಿ ಡಾ. ಅಂಬಿಕಾ ಸಿ.ಇವರು ಆಯೋಜಿಸಿದ್ದ ನೃತ್ಯ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಮಗಳೂರು ಜಿಲ್ಲೆಯ ನೃತ್ಯಪಟುಗಳು ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ʼಗೆ ಸೇರ್ಪಡೆಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದ ಚಂದ್ರನ್ ಮತ್ತು ಸುಮತಿ ಅವರ ಪುತ್ರ ನಿಶಾಂತ್. ಮೂಡಿಗೆರೆ ತಾಲೂಕಿನ ಚಿನ್ನಿಗ ಜನ್ನಾಪುರ ಎಂಬ ಗ್ರಾಮದ ಶ್ರೀಮತಿ ಅನ್ನಪೂರ್ಣ ಮುರ್ಗೇಶ್ ಹಾಗೂ ಅವರ ಮಗ ಮಧು ಜೆ ಎಂ ಮತ್ತು ಮಗಳು ಮಾನ್ಯ ಜೆ.ಎಂ. ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ʼಗೆ ಸೇರ್ಪಡೆಯಾಗಿದ್ದಾರೆ.
ಒಂದೇ ಕುಟುಂಬದ ಮೂವರು ಸೇರಿ ಜಿಲ್ಲೆಯ ನಾಲ್ಕು ಮಂದಿ ಈ ವಿಶಿಷ್ಟ ಸಾಧನೆ ಮಾಡಿದ್ದಾರೆ. ಇವರೆಲ್ಲರೂ ಮೂಡಿಗೆರೆ, ಜನ್ನಾಪುರ ನಾಟ್ಯಕಲಾ ನೃತ್ಯ ಶಾಲೆಯಲ್ಲಿ ತರಬೇತಿ ಪಡೆದಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮದೇ ಆದ ಪ್ರೊಫೆಷನಲ್ ಡ್ಯಾನ್ಸ್ ಇನ್ಸಿಟ್ಯೂಟ್ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಾ ಇತರರಿಗೂ ತರಬೇತಿ ನೀಡುತ್ತಿದ್ದಾರೆ.
76ನೇ ಗಣರಾಜ್ಯೋತ್ಸವ ಆಚರಣೆ ಅಂಗವಾಗಿ ಬೆಂಗಳೂರಿನ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಡಾ|| ಅಂಬಿಕಾ ಸಿ ಮತ್ತು ಸಂಸ್ಥೆಯವರು ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ “ಹೈರೆಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್” ವಿಶ್ವ ದಾಖಲೆ ಪ್ರತಿಭಾ ಪ್ರದರ್ಶನದಲ್ಲಿ ಯಶಸ್ವಿಯಾಗಿ ಪಾಲ್ಗೊಂಡವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿ ಎಸ್ ಶ್ವೇತಾ ವಿಶ್ವನಾಥ್ – ಚೈತನ್ಯ ಶಾಲೆಯ ಪ್ರಾಂಶುಪಾಲರು, ಡಾ|| ಆರ್ ಸದಾಶಿವಯ್ಯ- ಖ್ಯಾತ ಜ್ಯೋತಿಷಿ, ಜಿ. ಅಪ್ಪಯಣ್ಣ- ಬಿ ಎಂ ಎಸ್ ಕಾನೂನು ಮಹಾ ವಿದ್ಯಾಲಯದ ಆಡಳಿತ ಅಧಿಕಾರಿ, ಸಮಾಜ ಸೇವಕರುಗಳಾದ ಬದ್ರಿನಾಥ್ ಕೆ, ರಾಜಶೇಖರ್ ಜೆ, ಭೂಪಾಲಂ ಸುನಿಲ್, ಶಿವರುದ್ರಪ್ಪ ಮತ್ತು ಯೋಗ ಗುರು ಕಲಂದರ್ ಭಾಷಾ ರವರುಗಳು ಉಪಸ್ಥಿತರಿದ್ದರು.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ವರ್ಡ್ ಕಲ್ಚರ್ ಆಡಿಟೋರಿಯಂ ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.



