1Mudigere1A (1)

 

 

ಸಾಂವಿಧಾನಿಕವಾಗಿ ದೊರಕಿದ ಅರಣ್ಯ ಹಕ್ಕು ಕಾಯಿದೆ ಯಥಾ ಸ್ಥಿತಿ ಕಾಪಾಡುವ ಜತೆಗೆ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾ ಸಂಯೋಜಕಿ ಜ್ಯೋತಿ ವಿಠಲ್ ಒತ್ತಾಯಿಸಿದರು.

ಅವರು ಮಂಗಳವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಲತಲಾಂತರದಿಂದ ಆದಿವಾಸಿಗಳು ಹಾಗೂ ಇತರೇ ಅರಣ್ಯ ವಾಸಿಗಳು ಅರಣ್ಯದಲ್ಲಿ ಕೃಷಿ ಮಾಡಿಕೊಂಡು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇವರ ಸಂರಕ್ಷಣೆಗಾಗಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೇ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ 2006 ರ ಕಾಯಿದೆಯನ್ನು ಸಾಂವಿಧಾನಿಕವಾಗಿ ಜಾರಿ ಮಾಡಲಾಗಿತ್ತು. ಇದರಿಂದ ಆಡಳಿತ ವ್ಯವಸ್ಥೆಗಳ ಅಡಿಯಲ್ಲಿ ವ್ಯವಸ್ಥಿತ ಶೋಷಣೆಗೆ ಒಳಗಾಗಿ ತಮ್ಮದೇ ಸ್ವಂತ ಭೂಮಿಯಿಂದ ಹೊರ ಹಾಕಲ್ಪಟ್ಟು, ನೀತಿ, ರಚನೆ ಪ್ರಕ್ರಿಯೆಯಿಂದ ದೂರವಿರಿಸಲಾದ ಅರಣ್ಯ ವಾಸಿಗಳಿಗೆ ಈ ಕಾಯಿದೆ ಬಲ ದೊರಕಿಸಿದೆ. ಆದರೆ ಅರಣ್ಯ ಅಧಿಕಾರಿಗಳು ಈ ಕಾಯಿದೆಯನ್ನು ಗಾಳಿಗೆ ತೂರುವ ಮೂಲಕ ರಾಜ್ಯದಲ್ಲಿ 16 ಲಕ್ಷ ಆದಿವಾಸಿ ಹಾಗೂ ಅರಣ್ಯ ವಾಸಿಗಳ ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿರುವುದನ್ನು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ ತೀರ್ವವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಇಂದು ಅರಣ್ಯ, ಅರಣ್ಯವಾಗಿಯೇ ಉಳಿದುಕೊಳ್ಳಲು ಆದಿವಾಸಿಗಳು ಹಾಗೂ ಇತರೇ ಅರಣ್ಯ ವಾಸಿಗಳಿಂದ ಸಾಧ್ಯವಾಗಿದೆಯೇ ಹೊರತು, ಇನ್ನಾವುದೂ ಮಲ್ಟಿ ನ್ಯಾಷಿನಲ್ ಕಂಪನಿಗಳು ಹಾಗೂ ಭೂಮಾಲೀಕರಿಂದಾಗಿಲ್ಲ. ಹಾಗಾಗಿ ಕಾನೂನು ಪ್ರಕಾರ ಕೃಷಿ ಮಾಡಿದ ಅರಣ್ಯ ನಿವಾಸಿಗಳು 10 ಎಕರೆ ಭೂಮಿ ಪಡೆಯುವುದು ಅವರ ಹಕ್ಕಾಗಿದ್ದು, ಅದಕ್ಕಾಗಿ ಎಲ್ಲಾ ಅರಣ್ಯವಾಸಿಗಳು ಭೂಮಿಗಾಗಿ ಅರ್ಜಿ ಸಲ್ಲಿಸಲು ಮುಂದಾಗಬೇಕು. ಈ ಕಾಯಿದೆ ಜಾರಿಯಾದ ಬಳಿಕ ಅರಣ್ಯ ಇಲಾಖೆ, ಪರಿಸರ ಪ್ರೇಮಿ, ವೈಲ್ಡ್‍ಲೈಫ್‍ಫಸ್ಟ್, ನೇಚರ್ ಕನ್ಸರ್ವೇಶನ್ ಸೋಸೈಟಿ, ಟೈಗರ್ ರಿಸರ್ಚ್ ಅಂಡ್ ಕನ್ಸರ್ವೇಶನ್ ಟ್ರಸ್ಟ್ ವತಿಯಿಂದ ಈ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ರಿಟ್ ಅರ್ಜಿ ಹಾಕಲಾಗಿದೆ. ಇದು ಏ.2ರಂದು ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ನ್ಯಾಯಾಲಯ ಅರಣ್ಯ ವಾಸಿಗಳ ಪರವಾಗಿ ನಿಲ್ಲುತ್ತದೆ ಎಂಬ ಭರವಸೆಯಿದೆ. ಒಂದು ವೇಳೆ ನಮಗೆ ನ್ಯಾಯ ಸಿಗದಿದ್ದರೆ ತಾವು ಕೂಡ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಬುಡಕಟ್ಟು ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್, ಮುಖಂಡ ಶೇಖರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ