ವಿದ್ಯುತ್ ಶಾಕ್ ನಿಂದ ಬೃಹತ್ ಕಾಡಾನೆಯೊಂದು ಸಾವನ್ನಪ್ಪಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಲಾಲ್ಬಾಗ್ ರಸ್ತೆಯಲ್ಲಿ ಘಟನೆ ನಡೆದಿದೆ.
ಹಲಸಿನಕಾಯಿ ತಿನ್ನಲು ಹೋಗಿ ಬೃಹತ್ ಕಾಡಾನೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆ. ಅಂದಾಜು 35 ವರ್ಷದ ಆನೆ ವಿದ್ಯುತ್ ಶಾಕ್ ಗೆ ಬಲಿಯಾಗಿದೆ.
ತಣಿಗೇಬೈಲು ಅರಣ್ಯ ವ್ಯಾಪ್ತಿಯ ಲಾಲ್ ಬಾಗ್ ರಸ್ತೆಯಲ್ಲಿ ಕಾಡಾನೆ ಸಾವನ್ನಪ್ಪಿದೆ.
ಕಾಫಿನಾಡಲ್ಲಿ ಆಗಾಗ್ಗೆ ಕಾಡಾನೆ ದಾಳಿಗೆ ಜನರ ಸಾವನ್ನಪ್ಪುತ್ತಿದ್ದರೆ ಇತ್ತ ವಿವಿಧ ಕಾರಣಗಳಿಂದ ಕಾಡಾನೆಗಳು ಸಹ ಅಸಹಜ ಸಾವನ್ನಪ್ಪುತ್ತಿವೆ.
ಮೊನ್ನೆ ಯುಗಾದಿಯಂದೇ ಈ ಭಾಗದಲ್ಲಿ ಆನೆ ದಾಳಿಗೆ ರೈತ ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ಕಾಡಾನೆಯೊಂದು ಅಸಹಜ ರೀತಿಯಲ್ಲಿ ಸಾವನ್ನಪ್ಪಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.



