balehonnuru hathye2

 

 

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಘನಘೋರ ಹೇಯ ಕೃತ್ಯವೊಂದು ನಡೆದುಹೋಗಿದೆ.

ಹೆಂಡತಿ ಬಿಟ್ಟು ಹೋಗಿದ್ದ ಕೋಪಕ್ಕೆ ವ್ಯಕ್ತಿಯೊಬ್ಬ ಘೋರ ಕೃತ್ಯ ನಡೆಸಿದ್ದಾರೆ. ಸರಣಿ ಸಾವಿಗೆ ಕಾರಣನಾಗಿದ್ದಾರೆ.  ತನ್ನ ಅತ್ತೆ, ನಾದಿನಿ ಹಾಗೂ 7ವರ್ಷದ ಮಗುವನ್ನು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೌಟುಂಬಿಕ ಕಲಹದ ಕಾರಣಕ್ಕೆ ನಾಡ ಬಂದೂಕಿನಿಂದ ಮೂವರ ಹತ್ಯೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿಯ ಕಡಬಗೆರೆ ಸಮೀಪದ ಮಾಗಲು ಗ್ರಾಮದಲ್ಲಿ ನಡೆದಿದೆ. ರತ್ನಾಕರ್ ಗೌಡ ಎಂಬುವವನಿಂದ ಈ ಕೃತ್ಯ ನಡೆದಿದೆ. ಸ್ಥಳೀಯ ಪೂರ್ಣಚಂದ್ರ ಶಾಲೆಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರತ್ನಾಕರ್ ನನ್ನು ಆತನ ಹೆಂಡತಿ ಬಿಟ್ಟು ಎರಡು ವರ್ಷಗಳಾಗಿದ್ದು ಪತ್ನಿಯಿಂದ ದೂರವಿದ್ದನು.

ಮಾಗಲು ಗ್ರಾಮದ ಸ್ವಾತಿ ಎಂಬುವವರನ್ನು 8 ವರ್ಷದ ಹಿಂದೆ ಕಳಸ ತಾಲ್ಲೂಕಿನ ಹಿರೇಬೈಲ್ ಸಮೀಪದ ಹೆಮ್ಮಕ್ಕಿ ಕಿತ್ಲಿಕೊಂಡ ಗ್ರಾಮದ ರತ್ನಾಕರ್ ಗೌಡ ವಿವಾಹವಾಗಿದ್ದ. ಗಂಡ ಹೆಂಡತಿ ನಡುವೆ ವೈಮನಸ್ಸು ಉಂಟಾಗಿ ಎರಡು ವರ್ಷಗಳಿಂದ ಹೆಂಡತಿ ಸ್ವಾತಿ ಗಂಡನನ್ನು ಬಿಟ್ಟು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ನೆಲೆಸಿದ್ದರು ಎನ್ನಲಾಗಿದೆ.

ಹೆಂಡತಿಯ ಮೇಲಿನ ದ್ವೇಷವನ್ನು ಅತ್ತೆ (ಹೆಂಡತಿಯ ತಾಯಿ) ಜ್ಯೋತಿ (55 ವರ್ಷ)  ಮತ್ತು ನಾದಿನಿ (ಸಿಂಧು-24 ವರ್ಷ) ಮೇಲೆ ತೋರಿಸಿದ್ದು ಇಬ್ಬರನ್ನೂ ಹತ್ಯೆಗೈಯುವ ಜೊತೆಗೆ ತನ್ನ ಮಗಳನ್ನು(ಮೌಲ್ಯ-7 ವರ್ಷ) ಸಹ ಗುಂಡಿಕ್ಕಿ ಕೊಲೆಗೈದಿದ್ದಾನೆ.  ನಾದಿನಿಯ ಗಂಡ ಅವಿನಾಶನ ಮೇಲೂ ಗುಂಡು ಹಾರಿಸಿದ್ದು, ಅವರ ಕಾಲಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಸಂಗಮೇಶ್ವರ ಪೇಟೆ ಪೂರ್ಣಪ್ರಜ್ಞಾ ಶಾಲೆಯಲ್ಲಿ ಬಸ್ ಡ್ರೈವರ್ ಆಗಿದ್ದ ರತ್ನಾಕರ ಶಾಲೆಯ ಕ್ವಾಟ್ರಸ್ ನಲ್ಲಿಯೇ ವಾಸವಾಗಿದ್ದ. ಮಗಳು ಮೌಲ್ಯ ಕೂಡ ಅಪ್ಪನೊಂದಿಗೆ ಇದ್ದುಕೊಂಡು ಪೂರ್ಣಪ್ರಜ್ಞಾ ಶಾಲೆಯಲ್ಲಿ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.

ಮಂಗಳವಾರ ರಾತ್ರಿ ಮಗಳನ್ನು ತನ್ನ ಅತ್ತೆಯ ಮನೆ ಮಾಗಲಿಗೆ ಕರೆತಂದು ಮನೆಯ ಬಾಗಿಲು ತೆರೆಸಿ ಒಳಗೆ ಕಳುಹಿಸಿ ನಂತರ ಬಂದೂಕಿನಿಂದ ಅತ್ತೆ, ನಾದಿನಿ ಮತ್ತು ಮಗಳಿಗೆ ಗುಂಡಿಕ್ಕಿ ಕೊಂದಿದ್ದಾನೆ.

ಕೃತ್ಯದ ನಂತರ ಆರೋಪಿ ಮನೆಯ ಹಿಂಬಾಗದಲ್ಲಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೆ ಶರಣಾಗುವ ಮುಂಚೆ  ವಿಡಿಯೋ ಮಾಡಿದ್ದು, ತನ್ನ ಪತ್ನಿ ದೂರವಾದ ಬಳಿಕ ಎಲ್ಲರೂ ಮಗುವಿನ ಬಳಿ ತಾಯಿಯ ಬಗ್ಗೆ ಕೇಳುತ್ತಿದ್ದಾರೆ. ಆದ್ರೆ ಆಕೆ ಬಿಟ್ಟು ಹೋಗಿ 2 ವರ್ಷ ಆಗಿದೆ. ನನ್ನ ಮಗಳ ಖುಷಿ, ಪ್ರೀತಿ, ಸಂತೋಷದ ಮುಂದೆ ಏನೂ ಇಲ್ಲ ಎಂದಿದ್ದಾನೆ. ಮಗಳಿಗೆ ಶಾಲೆಯಲ್ಲಿ ಮಕ್ಕಳು ನಿಮ್ಮ ಅಮ್ಮ ಎಲ್ಲಿ ಕೇಳ್ತಾರೆ, ಮಗಳು ನನಗೆ ಕೇಳುತ್ತಾಳೆ. ನನಗೆ ಗೊತ್ತಿಲ್ಲದೆ ಮಗಳು ಆಲ್ಬಂನಿಂದ ಫೋಟೋ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ತೋರಿಸಿದ್ದಾಳೆ ಎಂದು 47 ಸೆಕೆಂಡ್ ಗಳ ವಿಡಿಯೋದಲ್ಲಿ ಹೇಳಿದ್ದಾನೆ.

ಇನ್ನು ಘಟನೆ ನಡೆದ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ, ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಾರಿವನು ರತ್ನಾಕರ ಗೌಡ ?

ರತ್ನಾಕರ ಗೌಡ ಮೂಲತಃ ಕಳಸ ತಾಲ್ಲೂಕಿನ ಹಿರೇಬೈಲ್ ಸಮೀಪದ ಕೋಟೆಮಕ್ಕಿ ಗ್ರಾಮದವನು. ಇವನು ಗ್ರಾಮವನ್ನು ತೊರೆದು ಸುಮಾರು 15 ವರ್ಷಗಳಾಗಿದ್ದು, ಆತನ ಅಪ್ಪ ಅಮ್ಮ ತೀರಿಕೊಂಡಿದ್ದು, ಓರ್ವ ಸಹೋದರಿಯನ್ನು ವಿವಾಹ ಮಾಡಿಕೊಟ್ಟಿದ್ದಾರೆ.

ರತ್ನಾಕರ ಗೌಡ ಊರು ತೊರೆದು ಬಾಳೆಹೊನ್ನೂರಿನಲ್ಲಿ ಕೆಲ ಸಮಯ ಕೆಕೆಬಿ ಬಸ್ ಡ್ರೈವರ್ ಆಗಿದ್ದ,     ಚಿಕ್ಕಮಗಳೂರು ಬಿಜಿಎಸ್ ಕಾಲೇಜು ಬಸ್ ನಲ್ಲಿ ಡ್ರೈವರ್ ಆಗಿದ್ದ ಎನ್ನಲಾಗಿದೆ. ಮೂರು ವರ್ಷಗಳಿಂದ ಸಂಗಮೇಶ್ವರಪೇಟೆ ಪೂರ್ಣಪ್ರಜ್ಞ ಶಾಲೆಯ ಬಸ್ ಡ್ರೈವರ್ ಆಗಿದ್ದ. ಸಮೀಪದ ಮಾಗಲು ಗ್ರಾಮದ ಸ್ವಾತಿ ಎಂಬುವವರನ್ನು ವಿವಾಹವಾಗಿದ್ದ.

ಪತಿ ಪತ್ನಿ ನಡುವೆ ವೈಮನಸ್ಸು ಬಂದು ಹೆಂಡತಿ ಸ್ವಾತಿ ಗಂಡನನ್ನು ತೊರೆದು ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ನೆಲೆಸಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ