ಮೂಡಿಗೆರೆ ತಾಲೂಕಿನ ಅಗ್ರಹಾರ ಶ್ರೀ ಆದಿಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರ ಅಶ್ವತ್ಥಾಕಟ್ಟೆ ಮತ್ತು ನಾಗದೇವರ ಮೂರ್ತಿಯನ್ನು ಗೌರಿಗದ್ದೆಯ ದತ್ತಾವಧೂತ ಶ್ರೀ ವಿನಯ್ ಗುರೂಜಿ ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಿದರು.

ಬೆಂಗಳೂರಿನ ಉದ್ಯಮಿ ಶಿವಕುಮಾರ್ ಮತ್ತು ಅವರ ಧರ್ಮಪತ್ನಿ ವಿದಾತ್ರಿ ಅವರು ನಾಗಮೂರ್ತಿಯನ್ನು ಕೊಡುಗೆಯಾಗಿ ನೀಡಿದ್ದು, ಬೆಳ್ತಂಗಡಿಯ ತಂತ್ರಿ ನಂದಕುಮಾರ್, ಶ್ರೀ ಆದಿಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್, ನವನೀತ್ ಭಟ್ ಮಾರ್ಗದರ್ಶನದಲ್ಲಿ ಪ್ರತಿಷ್ಠಾಪನಾ ಕಾರ್ಯ ನೆರವೇರಿತು.
ಈ ಸಂದರ್ಭದಲ್ಲಿ ಮಾಜಿ ಸಚಿವೆ ಮೋಟಮ್ಮ, ಗ್ರಹ ಮಂಡಳಿ ಮಾಜಿ ಅಧ್ಯಕ್ಷ ಜಿ.ಎಚ್.ಹಾಲಪ್ಪಗೌಡ, ವಾಸಂತಿ ಗಂಗಯ್ಯ ಹೆಗ್ಡೆ, ಮೊಯಿದ್ದಿನ್ ಶೇಠ್, ಎಂ.ಸಿ.ನಾಗೇಶ್ ಹಾಗೂ ದೇವಸ್ಥಾನದ ಟ್ರಸ್ಟಿಗಳು ಉಪಸ್ಥಿತರಿದ್ದರು.



