ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕಿನಲ್ಲಿ ಈ ದುರ್ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕನ ಶವ ಹರಿಹರಪುರದ ಬಳಿ ತುಂಗಾ ನಗದಿಯಲ್ಲಿ ಪತ್ತೆಯಾಗಿದೆ.
ಭಾನುವಾರ ತುಂಗಾ ನದಿಯಲ್ಲಿ ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವೇಳೆ ಮನೋಜ್ ಎಂಬ ಯುವಕ ನಾಪತ್ತೆಯಾಗಿದ್ದ.
2 ದಿನಗಳಿಂದ ನಾಪತ್ತೆಯಾಗಿದ್ದು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಮಂಗಳವಾರ ಮನೋಜ್ ಮೃತದೇಹ ಪತ್ತೆಯಾಗಿದೆ.
ಕೊಪ್ಪ ತಾಲೂಕಿನ ನುಗ್ಗೆಮಕ್ಕಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, 6 ಜನ ಸ್ನೇಹಿತರೊಂದಿಗೆ ಮನೋಜ್ ಈಜಲು ತೆರಳಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೋಜ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಸ್ನೇಹಿತರು ಗಾಬರಿಗೊಂಡು ಹಿಂತಿರುಗಿ ಗ್ರಾಮದಲ್ಲಿ ವಿಷಯ ಮುಟ್ಟಿಸಿದ್ದರು.
ಹರಿಹರಪುರದ ಗುರುಕುಲ ಬಳಿ ಮಂಗಳವಾರ ಮನೋಜ್ ಮೃತದೇಹ ಪತ್ತೆಯಾಗಿದ್ದು, ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



