ಚಿಕ್ಕಮಗಳೂರಿನಲ್ಲಿ ಗುರುವಾರ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಲು ಮಂಗಳೂರಿನಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಕೊಟ್ಟಿಗೆಹಾರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜಾ, ಧನಂಜಯ ಸರ್ಜಿ, ಮುಖಂಡರಾದ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಪುಣ್ಯಪಾಲ್, ವಿಜಯಕುಮಾರ್, ದೀಪಕ್ ದೊಡ್ಡಯ್ಯ, ಸಂತೋಷ್ ಕೋಟ್ಯಾನ್, ಬಿ.ಬಿ. ಮಂಜುನಾಥ್, ಶಶಿ ಆಲ್ದೂರು, ಪರೀಕ್ಷಿತ್ ಜಾವಳಿ, ಪಲ್ಗುಣಿ ಶರತ್, ಸಂಜಯ್ ಗೌಡ ಅವಿನಾಶ್ ಜನ್ನಾಪುರ ಚಿರಾಗ್ ಮಧು ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು.


