September 13, 2026
;
prasanna

 

 

ಪ್ರತಿಯೊಂದು ಮಗುವಿನಲ್ಲಿಯೂ ವಿಶೇಷವಾದ ಪ್ರತಿಭೆಯಿರುತ್ತದೆ. ತಮ್ಮ ಮಕ್ಕಳ ಆಸಕ್ತಿಗೆ ಪೂರಕವಾಗಿ ಪೋಷಕರು ಅವರಿಗೆ ಸೂಕ್ತವಾದ ಪ್ರೋತ್ಸಾಹ ನೀಡಿದರೆ ಅವರ ಗುರಿ ಸಾಧನೆ ಸಾಧ್ಯ ಎಂದು ಮೂಡಿಗೆರೆ ಜೇಸಿಐ ಪೂರ್ವಾಧ್ಯಕ್ಷ, ಪತ್ರಕರ್ತ ಪ್ರಸನ್ನ ಗೌಡಹಳ್ಳಿ ಅಭಿಪ್ರಾಯಿಸಿದರು.

ಅವರು ಗುರುವಾರ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಜೇಸಿ ಸಂಸ್ಥೆ ವತಿಯಿಂದ  ಏರ್ಪಡಿಸಿದ್ದ ಹತ್ತು ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬ ಹಿನ್ನಲೆಯಿಂದ ಬಂದು ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆ ಸೇರಿದಂತೆ ಅನೇಕ ರಂಗದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಸಾಧಕರು ನಮಗೆ ಕಾಣಸಿಗುತ್ತಾರೆ. ಅಂತಹ ಪ್ರತಿಭೆಗಳು ಎಷ್ಟೋ ಮಕ್ಕಳಲ್ಲಿ ಅಡಕವಾಗಿರುತ್ತದೆ. ಅದನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಬೇಕು. ಕೇವಲ ಪಾಠ ಹಾಗೂ ಅಧಿಕ ಅಂಕ ಗಳಿಸುವ ಬಗ್ಗೆ ಮಕ್ಕಳಿಗೆ ಒತ್ತಡ ಹಾಕಬಾರದು. ಬದಲಾಗಿ, ಶಿಕ್ಷಣದ ಜತೆಗೆ ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಮುಖ್ಯವಾಹಿನಿಗೆ ತರುವ ಕಾರ್ಯ ಪೋಷಕರು ಮಾಡಬೇಕು. ಅಲ್ಲದೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡಬೇಕೆಂದು ಹೇಳಿದರು.

ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಶಾಲೆಯ ಶಿಕ್ಷಣಕ್ಕಿಂತ ವಿಭಿನ್ನವಾದ ವಿಷಯಗಳನ್ನು ಕಲಿಯಲು, ವಿವಿಧ ಶಾಲೆಗಳ ಮಕ್ಕಳೊಂದಿಗೆ ಬೆರೆಯಲು ವೇದಿಕೆ ಸಿಗುತ್ತದೆ. ಬೇಸಿಗೆ ಶಿಬಿರದಲ್ಲಿ ಕಲಿತ ತರಬೇತಿಗಳನ್ನು ಮಕ್ಕಳು ಮುಂದುವರಿಸಿಕೊಂಡು ನಿತ್ಯ ಅಭ್ಯಾಸ ಮಾಡಬೇಕು ಎಂದರು.

ಬಳಿಕ 10 ದಿನ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು  ನೃತ್ಯ, ನಾಟಕ ಪ್ರದರ್ಶಿಸುವ ಮೂಲಕ ನೆರೆದಿದ್ದವರನ್ನು ಮನೋರಂಜಿಸಿದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ರಾಷ್ಟ್ರಮಟ್ಟದ ನೃತ್ಯಪಟು ಜೀ ಟಿವಿ ಸೂಪರ್ ಮಾಮ್ ಪ್ರಶಸ್ತಿ ವಿಜೇತ ಸೌಮ್ಯಶ್ರೀ ಅವರು ಶಿಬಿರದ ಮುಖ್ಯ ಸಂಯೋಜಕಿಯಾಗಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಪ್ರದೀಪ್ ಕುನ್ನಳ್ಳಿ ವಹಿಸಿದ್ದರು. ಕಾರ್ಯದರ್ಶಿ ಹಮೀದ್ ಸಬ್ಬೇನಹಳ್ಳಿ, ಕಾರ್ಯಕ್ರಮದ ನಿರ್ದೇಶಕಿ ಪ್ರೇಮಾ ಪುಣ್ಯಮೂರ್ತಿ,  ಜೇಸಿರೇಟ್ ಅಧ್ಯಕ್ಷೆ ರೇಖಾ ನಾಗರಾಜ್, ಕಾರ್ಯದರ್ಶಿ ಮೇಘಾ ವಿಕಾಸ್, ಸಾಂಸ್ಕøತಿಕ ಕಾರ್ಯಕ್ರಮವನ್ನು ಸಾಧ್ವಿ ತಂಡ ಪ್ರಾರ್ಥಿಸಿ, ವಿಭಾ ಸ್ವಾಗತಿಸಿ, ಶೌರ್ಯ ಮತ್ತು ಪ್ರಗಲ್ಬ ನಿರೂಪಿಸಿದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;