police2

 

 

ಕಾಳುಮೆಣಸು ಕಳ್ಳತನ ಪ್ರಕರಣವನ್ನು ಭೇದಿಸಿರುವ ಮೂಡಿಗೆರೆ ಪೊಲೀಸರು ಐವರನ್ನು ಬಂಧಿಸಿ 1 ಲಕ್ಷಕ್ಕೂ ಅಧಿಕ ಮೌಲ್ಯದ 145 ಕೆ.ಜಿ ಕಾಳುಮೆಣಸು ವಶಪಡಿಸಿಕೊಂಡಿದ್ದಾರೆ.

ಮೂಡಿಗೆರೆ ತಾಲ್ಲೂಕು ಮಾಕೋನಹಳ್ಳಿ ಗ್ರಾಮದ ಕೆ ಎಂ ರಾಮಚಂದ್ರ ರವರ ಮನೆಯ ಮುಂದಿನ ಜಗುಲಿಯ ಮೇಲೆ ಸುಮಾರು 145 ಕೆಜಿ, ಕಾಳು ಮೆಣಸನ್ನು ಒಣಗಿಸಿ (25 ಕೆಜಿಯ 5 ಮೂಟೆ, ಮತ್ತು 20 ಕೆಜಿಯ 1 ಮೂಟೆ) ದಾಸ್ತಾನು ಇಟ್ಟಿದ್ದರು. ಮನೆಯಿಂದ ಮೂಡಿಗೆರೆ ಪಟ್ಟಣಕ್ಕೆ ಹೋಗಿ ರಾತ್ರಿ ಮನೆಗೆ ಬಂದು ನೋಡಿದಾಗ ಮೂಟೆ ಮಾಡಿ ಇಟ್ಟಿದ್ದ ಒಟ್ಟು 145 ಕೆಜಿ, ಕಾಳು ಮೆಣಸು ಕಳ್ಳತನವಾಗಿತ್ತು. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೆಣಸು ಕಳುವಾಗಿದ್ದ ರಾಮಚಂದ್ರ ಅವರ ಹೊಂಸ್ಟೇಯಲ್ಲಿ ರೂಂ ಬಾಯ್ ಕೆಲಸ  ಮಾಡಿಕೊಂಡಿದ್ದ ಹಾಸನದ ಬೈಲಹಳ್ಳಿ ಗ್ರಾಮದ ದರ್ಶನ್, ಕುಂದೂರು ಭಟ್ರಗದ್ದೆಯ ರಮೇಶ, ಅಕ್ಷಯ್ ಮತ್ತು  ಗಿರೀಶ್, ಬಣಕಲ್ ಸಮೀಪದ ದಾಸರಹಳ್ಳಿ ಮತ್ತಿಕಟ್ಟೆ ವಾಸಿ ಪ್ರಶಾಂತ್ ಬಂಧಿತ ಆರೋಪಿಗಳು.

ಆರೋಪಿಗಳಿಂದ ಕಳವು ಮಾಡಿದ್ದ 1,03,000/- ಮೌಲ್ಯದ 145 ಕೆಜಿ ಕಾಳುಮೆಣಸನ್ನು ಮತ್ತು ಕೃತ್ಯಕ್ಕೆ ಬಳಕೆಯಾಗಿದ್ದ ಎರಡು ಬೈಕ್ ಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ರಾಮಚಂದ್ರ ಅವರ ಹೋಂ ಸ್ಟೇ ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ ಇತರ ತನ್ನ ಸಹಚರರಿಗೆ ಮಾಹಿತಿ ನೀಡಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಾಳುಮೆಣಸು ಕಳ್ಳತನಕ್ಕೆ ಸ್ಕೆಚ್ ರೂಪಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಸಂಶಯದ ಮೇಲೆ ದರ್ಶನ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಈ ತಂಡ ಇನ್ನೂ ಹಲವು ಕಡೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಪೊಲೀಸ್ ತಂಡದಲ್ಲಿ ಸಿಪಿಐ  ರಾಜಶೇಖರ್ ಕೆ ವಿ, ಪಿಎಸ್ಐ  ಶ್ರೀನಾಥ್ ರೆಡ್ಡಿ, ಪಿಎಸ್ಐ  ಶಶಿ ಟಿ ಕೆ ಹಾಗೂ ಪೊಲೀಸ್ ಸಿಬ್ಬಂದಿಗಳಾದ  ವೈಭವ್ ಟಿ ಎನ್,  ಸಚ್ಚಿನ್ ವಿ ಎಸ್,  ವಿನಯ್ ಕುಮಾರ್ ಮತ್ತು  ಮೆಹಬೂಬ್ ಸದನಿ ರವರು ಕಾರ್ಯನಿರ್ವಹಿಸಿರುತ್ತಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ