auto 2

 

 

ಚಲಿಸುತ್ತಿದ್ದ ಆಟೋ ಮೇಲೆ ಮರ ಮುರಿದುಬಿದ್ದು ಚಾಲಕ ಮೃತಪಟ್ಟ ಘಟನೆ ಕೊಪ್ಪ ತಾಲೂಕಿನ  ಬಾಳೇಹೊನ್ನೂರು ಜಯಪುರ ಬಳಿ ಸಂಭವಿಸಿದೆ.  ಜಯಪುರ ಸಮೀಪದ ಕೊಗ್ರೆಯ ಜಾಳ್ಮಾರ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

ಮೇಗೂರು ಸಿಡ್ಲೆಮನೆ ನಿವಾಸಿ ರತ್ನಾಕರ್(46 ವರ್ಷ) ಮೃತ ಆಟೋ ಚಾಲಕ.ಗಡಿಕಲ್ ಆಟೋ ನಿಲ್ದಾಣದಲ್ಲಿ ಆಟೋ ನಿಲ್ಲಿಸುತ್ತಿದ್ದ ರತ್ನಾಕರ್ ಭಾನುವಾರ ಮಧ್ಯಾಹ್ನ ಬಾಡಿಗೆಗೆಂದು ಕೊಗ್ರೆಗೆ ಹೋಗಿ ವಾಪಾಸ್ಸು ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಭಾರೀ ಗಾಳಿ ಮಳೆಗೆ ಮರ ಆಟೋ ಮೇಲೆ ಬಿದ್ದಿದೆ, ಪರಿಣಾಮ ಆಟೋ ಜಖಂ ಆಗಿದೆ. ಅದರಲ್ಲಿ ಸಿಲುಕಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.

ಜಯಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರತ್ನಾಕರ್ ಅವಿವಾಹಿತರಾಗಿದ್ದು, ಘಟನೆ ಬಗ್ಗೆ ಅವರ ಸಹೋದರ ಸುಧಾಕರ್ ಜಯಪುರ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ