madya

 

 

ಜನಜಾಗ್ರತಿ ವೇದಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 1932ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವು ಚಿಕ್ಕಮಗಳೂರು ತಾಲೂಕು ಜೋಳದಾಳ್ ಗ್ರಾಮದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತನ ಟ್ರಸ್ಟಿನ, ಟ್ರಸ್ಟಿಯಾದ ಪ್ರಶಾಂತ್ ಚಿಪ್ರಗುತ್ತಿ ರವರು ಮಾತನಾಡಿ, ಶಾಲೆಯಲ್ಲಿ ಕೊಟ್ಟ ಪರೀಕ್ಷೆಯಲ್ಲಿ ಅನುತ್ತಿರ್ಣ ಆದರೆ ಮತ್ತೆ ಪರೀಕ್ಷೆ ಕಟ್ಟಿ ಉತ್ತಿರ್ಣ ಆಗಬಹುದು ಆದರೆ ಜೀವನದ ಪರೀಕ್ಷೆಯಲ್ಲಿ ಅನುತ್ತಿರ್ಣ ಆದರೆ ಮತ್ತೆ ಪರೀಕ್ಷೆ ಕಟ್ಟಲು ಅವಕಾಶ ಕಡಿಮೆ. ಮಾದಕ ವಸ್ತುಗಳ ದಾಸರಾಗಿ ಜೀವನದ ಪರೀಕ್ಷೆಯಲ್ಲಿ ಅನುರ್ತಿಣ ಆದಂತವರಿಗೆ ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಧ್ಯವರ್ಜನಾ ಶಿಬಿರಗಳನ್ನು ಮಾಡಿ ನಿಮ್ಮ ಜೀವನದ ಪರೀಕ್ಷೆಯಲ್ಲಿ ಉತ್ತಿರ್ಣ ಆಗಲು ಅವಕಾಶ ಮಾಡಿಕೊಟ್ಟಿರುತ್ತಾರೆ. ನಿಮ್ಮ ಜೀವನದ ಪಯಣ ಸುಖಮಯವಾಗಿ ಇರಬೇಕಾದರೆ ಮಾದಕ ವಸ್ತುಗಳು ಹಾಗೂ ಮಾದಕ ವಿಷಯಗಳಿಂದ ದೂರ ಇರಬೇಕೆಂದು ಕರೆ ನೀಡಿದರು.

ಶ್ರೀಮತಿ ಪಲ್ಲವಿ ಸಿ.ಟಿ. ರವಿ ಮಾತನಾಡಿ ಮಧ್ಯಪಾನದಿಂದ ಎಷ್ಟೋ ಸಂಸಾರಗಳು ನಾಶವಾಗುತ್ತಿದ್ದು ಇದರಿಂದ ಮಹಿಳೆಯರು ಸಂಸಾರದಲ್ಲಿ ಸಮಾಜದಲ್ಲಿ ತುಂಬಾ ತೊಂದರೆ ಪಡುವಂತೆ ಆಗಿದೆ ಎಂದರು. ಪ್ರಖ್ಯಾತ ವೈದ್ಯರಾದ.ಡಾ ಜೆ.ಪಿ.ಕೃಷ್ಣೇಗೌಡ ರವರು ಮಾತನಾಡಿ ಮಾದಕ ವಸ್ತುಗಳನ್ನು ದೂರ ಮಾಡಿ ಆರೋಗ್ಯವನ್ನು ಉಳಿಸಿಕೊಳ್ಳಬೇಕೆಂಬ ಮನವಿ ಮಾಡಿಕೊಂಡರು.

ಪ್ರಾದೇಶಿಕ ನಿರ್ದೇಶಕಿ ಗೀತಾ ರವರು ಮಾತನಾಡುತ್ತಾ ಮದ್ಯಪಾನ ಪಿಡಿಗನ್ನು ಸಮಾಜದಿಂದ ದೂರ ಮಾಡಿ ಪೂಜ್ಯರು ಕಂಡ ಸಾತ್ವಿಕ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಕರೆಕೊಟ್ಟರು. ದೀಪಕ್ ದೊಡ್ಡಯ್ಯ ರವರು ಸಮಾರಂಭಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಾಗೇಶ್ ಬೈಗೂರು ರವರು ಮಾತನಾಡುತ್ತಾ ಮಾದಕ ವಸ್ತುಗಳಿಂದ ಆಗುವ ದುರಂತವನ್ನು ತಪ್ಪಿಸಲು ಅದನ್ನು ಸರಕಾರ ನಿಷೇಧ ಮಾಡಬೇಕೆಂದು ಕರೆ ನೀಡಿದರು.

ನಿರ್ದೇಶಕರಾದ ಸದಾನಂದ, ಬಂಗೇರಾ ಯೋಜನಾಧಿಕಾರಿ ರೂಪ ಜೈನ್, ಮಹಿಂದ್ರಾ ಕೆರಮಕ್ಕಿ, ಅರುಣ ರಾಜೇಗೌಡರು ಹಾಗೂ ಇತರರು ಕಾರ್ಯಕ್ರಮದಲ್ಲಿ ಇದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ