ವುಮೆನ್ ಕಾಫಿ ಪ್ರಮೋಷನ್ ಕೌನ್ಸಿಲ್( wcpc) 2024 – 2025 ಸಾಲಿನ ವಾರ್ಷಿಕ ಮಹಾಸಭೆಯನ್ನು ದಿನಾಂಕ : 12-7-2025 ರಂದು ಹಾಸನ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಶ್ರೀಮತಿ ಸಾಗರಿಕ ಲಕ್ಷಣ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಮುಂದಿನ ಅವಧಿಯ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶ್ರೀಮತಿ ಜಯಶ್ರೀ ವಿಶ್ವೇಶರ್ ರವರು ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುತ್ತಾರೆ. ಉಪಾಧ್ಯಕ್ಷರು – ಶ್ರೀಮತಿ ನಂದಿತಾ ಧರ್ಮರಾಜ್, ಗೌರವ ಕಾರ್ಯದರ್ಶಿಯಾಗಿ – ಶ್ರೀಮತಿ ನಂದ ರಾಜ್ ಶೇಖರ್, ಖಜಾಂಚಿ – ಶ್ರೀಮತಿ ಶೃತಿ ರಂಜನ್, ಸಾರ್ವಜನಿಕ ಸಂಪರ್ಕ ಪ್ರತಿನಿಧಿ – ಶ್ರೀಮತಿ ಕಾವ್ಯ ಸೂರಜ್, ಸಹ ಕಾರ್ಯದರ್ಶಿಯಾಗಿ – ಶ್ರೀಮತಿ ಕೃತಿ ಪ್ರಜ್ವಲ್, ಸಹ ಖಜಾಂಚಿ – ಶ್ರೀಮತಿ ಸುಪ್ರಿಯಾ ರತನ್ ಆಯ್ಕೆಯಾಗಿರುತ್ತಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ : ಶ್ರೀಮತಿ ದಿವ್ಯ ಉದಯ್, ಶ್ರೀಮತಿ ಹೇಮಾ ಗುರಪ್ಪ, ಶ್ರೀಮತಿ ಪೂರ್ಣಿಮಾ ಹಿತೇಂದ್ರ, ಶ್ರೀಮತಿ ಸುಷ್ಮಾ ಅನಿಲ್
ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಶ್ರೀಮತಿ ಆಶಾ ಶಶಿಧರ್ ಮಾತನಾಡಿ — ಸಂಸ್ಥೆಗೆ ಯುವ ಮಹಿಳೆಯರು ಅತಿ ಉತ್ಸುಕತೆಯಿಂದ ಕೆಲಸ ಮಾಡಲು ಮುಂದೆ ಬರುತ್ತಿರುವುದು ಸಂತಸದ ತಂದಿದೆ. ಸಂಸ್ಥೆಯ ಯಶಸ್ಸಿಗೆ ಬೆನ್ನುಲಬಾಗಿ ಪ್ರತಿ ಸದಸ್ಯರು ಪ್ರತಿ ಹಂತದಲ್ಲೂ ತೋರುತ್ತಿರುವ ಸಹಕಾರ ನಿಜಕ್ಕೂ ಅವಿಸ್ಮರಣೀಯ ಎಂದು ಹೇಳಿದರು.
ಮಾಜಿ ಅಧ್ಯಕ್ಷರು ಶ್ರೀಮತಿ ಚಂದ್ರಕಲಾ ಕಾಂತರಾಜ್ ಮಾತನಾಡಿ — ಸಂಸ್ಥೆ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂಭ್ರಮದಲ್ಲಿದೆ. ಅದಕ್ಕೆ ತಕ್ಕ ರೂಪುರೇಷೆಗಳು, ಮಾಡಬೇಕಾಗಿರುವ ಕೆಲಸಗಳನ್ನು ಮುಂದಾಲೋಚನೆಯಿಂದ ತಿಳಿಸಿರುತ್ತಾರೆ. ಸಭೆಗೆ ಮಾಜಿ ಅಧ್ಯಕ್ಷರುಗಳು, ಹಿರಿಯ ಸದಸ್ಯರು ಹಾಗು ಹಲವಾರು ಸದಸ್ಯರು ಭಾಗವಹಿಸಿದ್ದರು.
ವುಮೆನ್ ಕಾಫಿ ಪ್ರಮೋಷನ್ ಕೌನ್ಸಿಲ್( wcpc) ಅನೇಕ ಆಸಕ್ತ ಹಾಗೂ ಸಮಾನ ಮನಸ್ಕ ಮಹಿಳಾ ಬೆಳೆಗಾರರಿಂದ ಜನ್ಮತಾಳಿದ ಸಂಸ್ಥೆ. ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವುದರ ಬಗ್ಗೆ ತನ್ನದೇ ಆದ ರೀತಿಯಲ್ಲಿ ಆಸಕ್ತಿಯಿಂದ ಕೆಲಸ ಮಾಡುತ್ತಿದೆ.



