theft

 

 

ದಿನಾಂಕ 30.06.2025 ರಂದು ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ಲೂರು ಗೇಟ್ ಹಾಗೂ ಕಡೂರು ವೃತ್ತ ವ್ಯಾಪ್ತಿಯ ತಂಗಲಿ ಮತ್ತು ಚಟ್ನಳ್ಳಿ ಗ್ರಾಮಗಳಲ್ಲಿ ಒಂಟಿ ಮಹಿಳೆಯರಿಗೆ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನದ ಸರಗಳನ್ನು ಕಿತ್ತುಕೊಂಡು ಹೋಗಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸ್ ತಂಡಗಳು 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.
ಬೆಳಗಾವಿ ಜಿಲ್ಲೆಯ ಯವಕನಮರಡಿ ಗ್ರಾಮದ ಕಲ್ಲೇಶ್, ರಾಜು ಮತ್ತು ಬಸವರಾಜ್​​ ಎಂಬುವವರನ್ನು ಬಂಧಿಸಲಾಗಿದೆ. ಮಹಿಳೆಯರನ್ನು ಟಾರ್ಗೆಟ್ ಮಾಡಿದ ಗ್ಯಾಂಗ್​​, ಕಣ್ಣಿಗೆ ಕಾರದಪುಡಿ ಎರಚಿ ಮಾಂಗಲ್ಯ ಸರ ಕಸಿದು ಪಲ್ಸರ್​​ ಬೈಕ್​ನಲ್ಲಿ ಪರಾರಿ ಆಗಿದ್ದಾರೆ. ಕಡೂರು, ಬೀರೂರು ಮತ್ತು ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ‌ದಿನ‌, ಒಂದು‌ ಗಂಟೆಯಲ್ಲಿ ಮೂರು ಕಡೆ, ಮೂರು ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಮಾಡಿದ್ದಾರೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕನ್ನು ರಾಣಿಬೆನ್ನೂರಿನಲ್ಲಿ ಕಳವು ಮಾಡಿರುತ್ತಾರೆ. ಕೃತ್ಯವನ್ನು ಮರೆಮಾಚುವ ಸಲುವಾಗಿ ಕೃತ್ಯಕ್ಕೆ ಬಳಸಿದ್ದ ಬೈಕನ್ನು ಶಿರಾ ಸಮೀಪ ಬಾವಿಯಲ್ಲಿ ಹಾಕಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ಮತ್ತು   62 ಗ್ರಾಂ ತೂಕದ ಮೂರು ಚಿನ್ನದ ಸರಗಳನ್ನು ಪೊಲೀಸ್ ತಂಡಗಳು ವಶಪಡಿಸಿಕೊಂಡಿರುತ್ತಾರೆ. ಇವುಗಳ ಒಟ್ಟು ಮೌಲ್ಯ ರೂ. 6.40 ಲಕ್ಷ ಆಗಿರುತ್ತದೆ.
ಡಿ.ವೈ.ಎಸ್.ಪಿ. ತರೀಕೆರೆ ಉಪವಿಭಾಗ ಹಾಲಮೂರ್ತಿ ರಾವ್ ವಿ ಎಸ್ ರವರ ನೇತೃತ್ವದ ಪೊಲೀಸ್ ತಂಡಗಳಲ್ಲಿ ಸಿಪಿಐ ಬೀರೂರು  ಶ್ರೀಕಾಂತ್ ಎಸ್ ಎನ್, ಸಿಪಿಐ ಕಡೂರು  ರಫೀಕ್ ಎಂ, ಪಿಎಸ್ಐ ಗಳಾದ  ಸಜೀತ್ ಕುಮಾರ್,  ಧನಂಜಯ್, ಶ್ರೀಮತಿ ಲೀಲಾವತಿ,  ತಿಪ್ಪೇಶ್,  ರಂಗನಾಥ್,  ಶಾಹಿದ್ ಆಫ್ರಿದಿ,  ಗಣಪತಿ ಆರ್ ಎಸ್, ಎಎಸ್ಐ  ವೇದಮೂರ್ತಿ ಹಾಗೂ ಪೊಲೀಸ್ ಸಿಬ್ಬಂದಿಗಳು  ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ