ಬಡವರ ಕಣ್ಮಣಿ, ಸಾವಿರಾರು ಜನರಿಗೆ ಅನ್ನದಾತರಾಗಿದ್ದ ಸ್ವಾತಂತ್ರ್ಯ ಸೇನಾನಿಯ ಮಗನಾಗಿ ಜನಿಸಿದ್ದ ವಿ.ಜಿ.ಸಿದ್ದಾರ್ಥ ಹೆಗ್ಡೆ ಇಂದು ಒಂದು ನೆನಪು ಮಾತ್ರ. ಅವರು ಉದ್ಯಮಿಯಾಗಿ ಲಕ್ಷಾಂತರ ಜನರ ಪಾಲಿಗೆ ನಂದಾದೀಪವಾಗಿದ್ದರು. ಕಾಫಿ ಆಗಸದ ದೃವತಾರೆ ಅಂತಹವರನ್ನು ರಾಜ್ಯ ಸರ್ಕಾರ ಗುರ್ತಿಸದೆ ಇರುವುದು ಬಹಳ ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ವಿ.ಜಿ.ಸಿದ್ದಾರ್ಥ್ ಹೆಗ್ಡೆ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.
ಹೆಸಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡಿಗೆರೆ ಚಿಕ್ಕಮಗಳೂರು ರಸ್ತೆಯಲ್ಲಿರುವ ಸಿದ್ದಾರ್ಥ ವನದಲ್ಲಿ ವಿ.ಜಿ. ಸಿದ್ದಾರ್ಥ ಹೆಗ್ಡೆಯವರ ಆರನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು. ಅಜಾತ ಶತ್ರು ಸಮಾಹದ ಪ್ರತಿಯೊಬ್ಬರಿಗೂ ಸದಾ ಒಳ್ಳೆಯದನ್ನು ಬಯಸಿದ ದೇವತಾ ಮನುಷ್ಯ ಕಾಯಕಯೋಗಿ ಸಿದ್ದಾರ್ಥ ಹೆಗ್ಡೆ ಎಂದರು.
ವಿ.ಜಿ.ಸಿದ್ದಾರ್ಥ ಹೆಗ್ಡೆ ಅಭಿಮಾನಿ ಬಳಗದ ಅಧ್ಯಕ್ಷ ಜಿ.ಹೆಚ್.ಹಾಲಪ್ಪಗೌಡ ಮಾತನಾಡಿ. ಸಿದ್ದಾಥ್ ಅವರು ಒಂದು ಶಕ್ತಿ ಮತ್ತು ಸರಳ ವ್ಯಕ್ತಿ ಯಾಗಿದ್ದು. ಇಂದು ಅವರಿಲ್ಲಾ ಆದರೆ ಅವರು ತೋರಿಸಿಕೊಟ್ಟ ಹಾದಿ ಮತ್ತು ಅವರ ನೆನಪು ಅಜರಾಮರ, ಕಾಫಿ ಪ್ಲಾಂಟರ್ ಗಳು 1990 ರಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯೋಚಿಸುತ್ತಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಒಂದು ಬೆಲೆಯ ಸ್ಥಿರತೆ ಇರಲಿಲ್ಲ, ಬೆಳೆ ಇದ್ದಾಗ ಬೆಲೆ ಇಲ್ಲ ಎಂಬಂತಹ ಸ್ಥಿತಿಯಲ್ಲಿದ್ದಾಗ ಪ್ಲಾಂಟರ್ ಗಳು ಬೆಳೆದ ಕಾಫಿಯನ್ನು ಕಾಫಿಬೋರ್ಡ್‍ಗೆ ಮಾರಾಟ ಮಾಡಬೇಕೆಂಬ ಕಟ್ಟಳೆ ಸಡಿಲಗೊಂಡವು . ಅದೇ ವರ್ಷ ಅಮಲ್ಗಮೇಟೆಡ್ ಬೀನ್ ಕಾಫಿ ಟ್ರೆಡಿಂಗ್ ಕಂಪೆನಿ ಲಿಮಿಟೆಡ್ ಸ್ಥಾಪಿಸಿ ಬೆಳೆಗಾರರನ್ನು ಸಂಕಷ್ಟದಿಂದ ಪಾರುಮಾಡಿದ ಮಹಾನ್ ವ್ಯಕ್ತಿ ಎಂದರು.
ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡುತ್ತಾ. ಯುವಕರಿಗೆ ಐಕಾನ್ ಆಗಿ ಕಾಫಿಬೆಳೆಗಾರರ ಹರಿಕಾರನಾಗಿ ಕಾಫಿ ಉದ್ಯಮವನ್ನು ಮೇಲ್ಮಟ್ಟಕ್ಕೆ ತರುವಲ್ಲಿ ಸಿದ್ದಾರ್ಥ ಹೆಗ್ಡೆ ಅವರ ಪಾತ್ರ ಬಹಳ ದೊಡ್ಡದು. ಉತ್ತರ ಭಾಗದಲ್ಲಿ ಕಾಫಿ ಎನ್ನುವುದೇ ಇರಲಿಲ್ಲ ಆ ಭಾಗದ ಜನರಿಗೆ ಕಾಫಿಯನ್ನು ಪರಿಚಯ ಮಾಡುವ ಸಲುವಾಗಿ ಕಾಫಿಯನ್ನೆ ಒಂದು ಉದ್ಯಮವಾಗಿ ತೆಗೆದುಕೊಂಡು ಕಾಫಿ ಡೇ ಎಂಬ ಸಂಸ್ಥೆಯನ್ನು ಕಟ್ಟುವುದರ ಮೂಲಕ 50 ಸಾವಿರಕ್ಕೂ ಅಧಿಕ ಯುವಕರಿಗೆ ಉದ್ಯೋಗ ಕೊಡುವುದರೊಂದಿಗೆ ಉತ್ತರ ಭಾಗ ಸೇರಿದಂತೆ ದೇಶಾದಾದ್ಯಂತ ಮತ್ತು ಹೊರ ದೇಶಗಳಲ್ಲಿ ಮಲೆನಾಡಿನ ಕಾಫಿಯನ್ನು ಪರಿಸಚರಯಿಸಿದವರು ಸಿದ್ದಾರ್ಥ ಹೆಗ್ಡೆ ಅವರು. ಸಿದ್ದಾರ್ಥ ಹೆಗ್ಡೆ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಕಾಫಿ ಬೆಳೆಗಾರರಾದರೂ ಕಾಫಿ ಉದ್ಯಮದ ಚಿಂತಕರು. ಕೆಜಿಎಫ್ ಎಂಬ ಸಂಸ್ಥೆ ಕಟ್ಟಲು ಗಂಗಯ್ಯ ಹೆಗ್ಡೆ ಅವರ ಪಾತ್ರ ಬಹಳ ದೊಡ್ಡದು, ಮೂಡಿಗೆರೆ ಬೆಳೆಗಾರರ ಸಂಘದ ಸ್ಥಾಪಕ ಅಧ್ಯಕ್ಷರು ಗಂಗಯ್ಯ ಹೆಗ್ಡೆ ಅವರು ಎಂದರು. ಸಿದ್ದಾರ್ಥ್ ಹೆಗ್ಡೆ ಅವರು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ ಏಕೈಕ ವ್ಯಕ್ತಿ ಎಂದರೆ ತಪ್ಪಾಗಲಾರದು ಎಂದರು.
ಈ ಸಂದರ್ಭದಲ್ಲಿ ಹವಳ್ಳಿ ಕೃಷ್ಣೆಗೌಡ, ಹೆಸಗಲ್ ಗ್ರಾ.ಪಂ.ಉಪಾಧ್ಯಕ್ಷ ಆದರ್ಶ್‍ಗೌಡ, ಮೊಯಿದ್ದಿನ್ ಸೇಠ್, ಎಂ.ಸಿ. ಹೂವಪ್ಪ, ನಿವೃತ್ತ ಅಭಿಯಂತರ ಶಿವಪ್ರಕಾಶ್ ಹ್ಯಾರಗುಡ್ಡೆ, ಪೂರ್ಣೆಶ್ ಮೂರ್ತಿ, ಬಿ.ಕೆ.ಲಕ್ಷ್ಮಣಕುಮಾರ್, ರಾಮಚಂಧ್ರ ಒಡೆಯರ್, ವಿಶ್ವನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಶೃದ್ದಾಂಜಲಿ ಅರ್ಪಿಸಿದರು,



