2Mudigere1A

 

 

ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ಶ್ರೀ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ವತಿಯಿಂದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕಿ ನಯನಾ ಮೊಟಮ್ಮ ಅವರು ಭಾಗವಹಿಸಿ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲವೆಂದು ಗೋಣಿಬೀಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎ.ಜೆ.ಸುಬ್ರಾಯಗೌಡ ಹೇಳಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ ಬಿಂಬಿಸಲಾಗುತ್ತದೆಯೆ ಹೊರತು ಶಾಸಕರಾದ ಬಳಿಕ ಅವರು ಕ್ಷೇತ್ರದ ಎಲ್ಲಾ ಜನರ ಶಾಸಕರಾಗಿ ಕಾರ್ಯ ನಿರ್ವಹಿಸುವುದು ಕರ್ತವ್ಯವಾಗಿದೆ. ಹಾಗೆಯೇ ನಮ್ಮ ಶಾಸಕಿ ನಯನಾ ಮೋಟಮ್ಮ ಅವರು ಕೂಡ ಪಕ್ಷ ಬೇಧ ಮರೆತು, ಎಲ್ಲರೊಂದಿಗೆ ಬರೆಯುವ ಮೂಲಕ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ.

ಶಾಸಕಿ ನಯನಾ ಮೋಟಮ್ಮ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಪಕ್ಷಾಂತರ ಕುರಿತು ಮಾತನಾಡಿಯೇ ಇಲ್ಲ. ತನ್ನ ಉಪಸ್ಥಿತಿಯಿಂದ ಜನರಲ್ಲಿ ಪಕ್ಷಾಂತರದ ಭಾವನೆ ಉಂಟಾಗಬಾರದೆಂಬ ದೃಷ್ಟಿಯಿಂದ ನದಿ ಅಂದರೆ ಕಾಂಗ್ರೆಸ್ಸಾ, ದಡ ಅಂದರೆ ಬಿಜೆಪಿನಾ ಎಂದು ಜನರಿಗೆ ಅರ್ಥ ಮಾಡಿಸಲು ಆ ಪದ ಬಳಕೆ ಮಾಡಿದ್ದಾರೆ. ನಾನು ಗಣಪತಿಗೋಸ್ಕರ. ಧರ್ಮಕೋಸ್ಕರ ಜೊತೆಗೆ ಸಮಿತಿಯಲ್ಲಿ ಕಾರ್ಯಾಧ್ಯಕ್ಷೆಯಾಗಿದ್ದರಿಂದ ಇಲ್ಲಿಗೆ ಬಂದಿದ್ದೇನೆಂದು ಅವರೇ ಸ್ಪಷ್ಟಪಡಿಸಿದ್ದಾರೆಂದು ಹೇಳಿದರು.

ಮತ್ತೊಂದು ಕಡೆ ಭಾಷಣದಲ್ಲಿ ನಾಳೆ ನಾನು ಬಿಜೆಪಿಗೆ ಬರುತ್ತೇನೋ, ಕಾಂಗ್ರೆಸ್‍ನಲ್ಲಿ ಉಳಿತೇನೋ ಅಥವಾ ಎಸ್‍ಡಿಪಿಐ, ಬಿಎಸ್‍ಪಿಗೆ ಹೋಗುತ್ತೇನೋ? ಆ ಪ್ರಶ್ನೆಗೆ ಉತ್ತರ 3 ವರ್ಷದ ಮೇಲೆ ನೋಡೋಣ ಎಂದು ಹೇಳಿದ್ದಾರೆ. ಈ ಮಾತನ್ನು ಹೇಳುವ ಪ್ರಾರಂಭದಲ್ಲಿಯೇ ಪಕ್ಷಾಂತರದ ಈ ಪ್ರಶ್ನೆ ಯಾರಿಗೂ, ಯಾವ ಪಕ್ಷದವರಿಗೂ ಮೂಡಿ ಬರಬಾರದೆಂದು ಒತ್ತಿ ಒತ್ತಿ ಹೇಳುವ ಮೂಲಕ ಜನರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದ್ದಾರೆ. ಅವರ ಭಾಷಣದಲ್ಲಿ ಹೆಚ್ಚಾಗಿ ತಾನು ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಇದ್ದೇನೆಂದು ಸ್ಪಷ್ಟಪಡಿಸುತ್ತಲೇ ಇದ್ದರು. ಆದರೆ ಶಾಸಕರ ಮಾತನ್ನು ಅರ್ಥ ಮಾಡಿಕೊಳ್ಳದೇ ವೀಡಿಯೋ ತುಳುಕನ್ನು ಅರ್ಧಕ್ಕೆ ಕಟ್ ಮಾಡಿ, ಅವರ ಹೇಳಿಕೆಯನ್ನು ತಿರುಚಿ ತಮಗಿಷ್ಟ ಬಂದ ಹಾಗೆ ವೈಭವಿಕರಿಸಲಾಗಿದೆ ಎಂದು ಹೇಳಿದರು.

ಕೇಸರಿ ಬಣ್ಣ ಯಾವ ಪಕ್ಷ ಹಾಗೂ ಸಂಘಟನೆಯ ಸ್ವತ್ತಲ್ಲ. ಆದರೂ ಶಾಸಕಿ ನಯನಾ ಮೋಟಮ್ಮ ಅವರು ಕೇಸರಿ ಶಾಲು ಧರಿಸಿದ್ದನ್ನೂ ವೈಭವೀಕರಿಸಲಾಗಿದೆ. ರೈತರೆಂದರೆ ಹಸಿರು, ಕನ್ನಡ ಎಂದರೆ ಕೆಂಪು, ಹಣದಿ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ಆಯಾ ಬಣ್ಣದ ಶಾಲು ಹಾಕಿಕೊಂಡಾಗ ಬಾರದ ಕೋಮು ಭಾವನೆ, ಕೇಸರಿ ತೊಟ್ಟಾಗ ಮಾತ್ರ ತೋರುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ