kaadu 1

 

 

ಮೂಡಿಗೆರೆ  ತಾಲೂಕಿನ ಕುನ್ನಳ್ಳಿ, ಹಳಸೆ, ದುಂಡುಗ ಗ್ರಾಮಗಳ ಸುತ್ತಮುತ್ತಾ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಕಾಫಿತೋಟದಲ್ಲಿ ಕಾಡಾನೆಗಳ ಓಡಾಡಿ ಧ್ವಂಸ ಮಾಡುತ್ತಿವೆ. ಸುಮಾರು 30 ಕಾಡಾನೆಗಳ ಗುಂಪು ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಸುತ್ತಾಡುತ್ತಾ ಇಡೀ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.

ಕಾಡಾನೆಗಳು ಕುನ್ನಹಳ್ಳಿ ಗ್ರಾಮದ ಧರ್ಮಪಾಲ್, ರವೀಂದ್ರ, ಶ್ರೀಕಾಂತ್ ಹಾಗೂ ರವಿ, ಚಂದ್ರೇಶೇಖರ್ ಮುಂತಾದವರ ತೋಟ ಮತ್ತು ಶುಂಠಿಬೆಳೆಯನ್ನು  ಧ್ವಂಸಗೊಳಿಸಿವೆ. ಊರೋಳಗೆ ರಸ್ತೆಗಳಲ್ಲಿಯೇ ಸಂಚರಿಸುವ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಮೂರು ದಿನದ ಹಿಂದೆ ಮುತ್ತಿಗೆಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಕಾಡಾನೆ ಗಾಯಗೊಳಿಸಿದ್ದ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಬೆರಳೆಣಿಕೆಯಷ್ಟು ಸಿಬ್ಬಂದಿ ಆನೆಗಳ ಇರುವಿಕೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆಯೇ ಹೊರತು ಅವುಗಳನ್ನು ಇಲ್ಲಿಂದ ಅಟ್ಟುವ ಕೆಲಸ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಕಾಫಿ, ಅಡಿಕೆ, ಕಾಳುಮೆಣಸು, ಬಾಳೆ, ಶುಂಠಿ ಮುಂತಾದ ಬೆಳೆಗಳನ್ನು ನಾಶಮಾಡುತ್ತಿವೆ. ತೋಟದ ಬೇಲಿ, ಗೇಟುಗಳನ್ನು ಪುಡಿಗೈಯುತ್ತಿವೆ. ತೋಟದಲ್ಲಿ ಅಳವಡಿಸಿರುವ ಪೈಪುಗಳು, ಮನೆಯ ನೀರಿನ ಸರಬರಾಜು ಪೈಪುಗಳನ್ನು ಪುಡಿಗೈಯುತ್ತಿವೆ. ಇದರಿಂದ ಜನರು ತೀವ್ರ ಕಂಗಾಲಾಗಿದ್ದಾರೆ. ರಾತ್ರಿ ಹಗಲೆನ್ನದೇ ಆನೆಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.

ತೋಟ-ಗ್ರಾಮಗಳಲ್ಲಿ ಕಾಡಾನೆ ಓಡಾಟದಿಂದ ಸ್ಥಳೀಯರು ಅತಂಕಕೊಳಗಾಗಿದ್ದಾರೆ. ಇದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ. ಕಾಡಾನೆ ಸ್ಥಳಾಂತರಿಸಲು ಹಾಗೂ ಓಡಿಸಲು ಅನುಮತಿ ಇಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ