ದಿನಾಂಕ 9 ಮತ್ತು 10 ಆಗಸ್ಟ್ 2025 ರಂದು ಶಿವಮೊಗ್ಗದ ನೆಹರೂ ಒಳ ಕ್ರೀಡಾಂಗಣದಲ್ಲಿ ಶೋಟೋಕಾನ್ ಕರಾಟೆ ಶಿಕ್ಷಕ ರೆಂಶಿ ವಿನೋದ್ ನಡೆಸಿದ ಶಿವಮೊಗ್ಗ ಓಪನ್ 6ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಶ್ರೀಲಂಕ, ಮಲೇಷ್ಯಾ, ಅಮೇರಿಕಾ, ನೇಪಾಳ ಹಾಗೂ ಭಾರತದ ಸುಮಾರು 1800 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಈ ಪಂದ್ಯಾವಳಿಗೆ ಮೂಡಿಗೆರೆ ಯ SKJF ಶೋಟೋಕಾನ್ ಕರಾಟೆ ಜಪಾನ್ ಡೂ ಫೆಡರೇಷನ್ ನ ಮುಖ್ಯ ಶಿಕ್ಷಕರಾದ ಶಿಹಾನ್ ರಾಜೇಂದ್ರನ್, ಶಿಹಾನ್ ಬೇಬಿಲತಾ, ಸೆನ್ಸಾಯ್ ಪೂಜಿತ್ ಎನ್ ರಾಜೇಂದ್ರನ್ ಹಾಗೂ ಸೆನ್ಸಾಯ್ ಅಶ್ವಿನಿ ಚಂದ್ರ ಇವರಲ್ಲಿ ತರಬೇತಿ ಪಡೆದ 118 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮೂಡಿಗೆರೆ ಯ SKJF ಶೋಟೋಕಾನ್ ಕರಾಟೆ ಜಪಾನ್ ಡೂ ಫೆಡರೇಷನ್ ನ ವಿದ್ಯಾರ್ಥಿಗಳು ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ 45 ಚಿನ್ನ, 40 ಬೆಳ್ಳಿ ಹಾಗೂ 33 ಕಂಚಿನ ಪದಕವನ್ನು ಪಡೆದು ಸಾಧನೆ ಮಾಡಿ ಜಿಲ್ಲೆಗೆ ತಾಲ್ಲೂಕಿಗೆ ಹೆಮ್ಮೆ ತಂದಿದ್ದಾರೆ.
ಈ ಪಂದ್ಯಾವಳಿಯಲ್ಲಿ ಸಕಲೇಶಪುರದ JSS ಶಾಲೆ, ಹಾನುಬಾಳ್ ನ ವಿದ್ಯಾನಿಧಿ ಶಾಲೆ, ಮೂಡಿಗೆರೆಯ MES ಶಾಲೆ ಹಾಗೂ ಬೆಥನಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಅವರನ್ನು ತರಬೇತಿಗೊಳಿಸಿದ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಶಿಹಾನ್ ರಾಜೇಂದ್ರನ್ ಮತ್ತು ಶಿಹಾನ್ ಬೇಬಿಲತಾ, ಸೆನ್ಸಾಯ್ ಪೂಜಿತ್ ಎನ್ ರಾಜೇಂದ್ರನ್ ಹಾಗೂ ಸೆನ್ಸಾಯ್ ಅಶ್ವಿನಿ ಚಂದ್ರ ಅವರು ಕಳೆದ ಅನೇಕ ವರ್ಷಗಳಿಂದ ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕರಾಟೆ ತರಬೇತಿ ಶಾಲೆಗಳನ್ನು ನಡೆಸುತ್ತಿದ್ದು, ಇವರ ಗರಡಿಯಲ್ಲಿ ಬೆಳೆದ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಉನ್ನತ ಸಾಧನೆ ಮಾಡುತ್ತಿದ್ದಾರೆ. ಹತ್ತಾರು ಪಂದ್ಯಾವಳಿಗಳಿಗೆ ಪದಕಗಳನ್ನು ಗೆದ್ದು ಸಾಧನೆ ಮಾಡುತ್ತಿದ್ದಾರೆ.



