ದಿನಾಂಕ: 19-08-2025 ರ ಮಂಗಳವಾರ ಮೂಡಿಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 66/33/11 ಕೆವಿ
ಫೀಡರ್ಗಳಿಗೆ ಒಳಪಡುವ ಪ್ರದೇಶಗಳಿಗೆ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
****************
ದಿನಾಂಕ:19-08-2025 ರ ಮಂಗಳವಾರದಂದು ಮೂಡಿಗೆರೆ ವಿ.ವಿ ಕೇಂದ್ರದಲ್ಲಿ 2025-26ನೇ ಸಾಲಿನ 2ನೇ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ, ದಿನಾಂಕ: 19-08-2025 ರ ಮಂಗಳವಾರದಂದು ಮೂಡಿಗೆರೆ 66/33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 33 ಕೆವಿ ಮತ್ತು 11 ಕೆವಿ ಮಾರ್ಗಗಳಾದ ಬಣಕಲ್, ಬಾಳೂರು, ದೇವರುಂದ, ಗೋಣಿಬೀಡು, ಗೌಡಳ್ಳಿ, ದಾರದಹಳ್ಳಿ, ಮಾಕೋನಹಳ್ಳಿ, ಮೂಡಿಗೆರೆ ಪಟ್ಟಣ, ಹ್ಯಾಂಡ್ಪೋಸ್ಟ್, ಎಂ.ಜಿ.ಎಮ್ ಮತ್ತು ವಾಟರ್ ಸಪ್ಲೈ ಫೀಡರ್ಗಳಿಗೆ ಒಳಪಡುವ ಪ್ರದೇಶಗಳಲ್ಲಿ ಬೆಳಗ್ಗೆ 10:00 ರಿಂದ ಸಂಜೆ 6:00 ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗುತ್ತದೆ ಮತ್ತು ಗ್ರಾಹಕರಿಗೆ ಸಹಕರಿಸುವಂತೆ ಕೋರಲಾಗಿದೆ.



