jvs krishna

 

 

ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಆಲೋಚನೆ, ನೂತನ ಆವಿಷ್ಕಾರದೊಂದಿಗೆ ಜೆವಿಎಸ್ ಕಿಡ್ಸ್ ಎಲ್.ಕೆ.ಜಿ, ಯು.ಕೆ.ಜಿ ಮತ್ತು ನರ್ಸರಿ ಮಕ್ಕಳಿಗೆ ಹೊಸ ವಿಭಾಗ ತೆರೆಯಲು ಗುರಿ ಹೊಂದಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ತಿಳಿಸಿದರು.

ಅವರು ಚಿಕ್ಕಮಗಳೂರು  ನಗರದ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆಯ ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ  ನರ್ಸರಿ, ಪೈಮರಿ ಮತ್ತು ಜೆವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೇಷಭೂಷಣ ರಾಧಾಕೃಷ್ಣ ಸ್ಪರ್ಧೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜೆವಿಎಸ್ ಶಾಲಾ ಸಿಬ್ಬಂದಿ ಶಿಕ್ಷಣದ ಜೊತೆಗೆ ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕೃಷ್ಣ ಜನ್ಮಾಷ್ಠಮಿ ಪವಿತ್ರವಾದ ಹಬ್ಬದ ದಿನದಂದು ನಮ್ಮ ಎಲ್ಲಾ ಪುಟಾಣಿ ಮಕ್ಕಳು ಕೃಷ್ಣ, ರಾಧೆಯರಾಗಿ ವೇಷ ಧರಿಸಿ ಬಂದಿರುವುದು ಅವರ ಜೀವನದಲ್ಲಿ ಕೃಷ್ಣನ ರೀತಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.

ಕೃಷ್ಣನ ಚಾಣುಕ್ಯತನ, ವೀರ ಬುದ್ಧಿ ಎಲ್ಲಾ ವಿದ್ಯಾರ್ಥಿಗಳಲ್ಲಿ ಅಳವಡಿಸಿಕೊಳ್ಳಲಿ ಎಂದು ಹೇಳಿದ ಅವರು, ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ನ್ಯಾಯ ನಿರ್ಣಾಯಕರು ಪಾರದರ್ಶಕ ನಿರ್ಧಾರ ನೀಡಲಿ ಎಂದು ಹೇಳಿದರು. ಹೆಣ್ಣು ಮಕ್ಕಳಿಗೆ ರಾಧೆ ವೇಷ ಹಾಕಿ ಬಂದಿರುವುದು ಸಂಸ್ಕೃತಿಯ ಪ್ರತೀಕ ಒಂದು ವಾರದಿದಲೇ ತಯಾರಿ ನಡೆಸಿರುವ ಪೋಷಕರು ಸಹಕರಿಸಿದ್ದಾರೆ ಎಂದು ಧನ್ಯವಾದಗಳನ್ನು ಅರ್ಪಿಸಿದರು.

ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ವೇಷಭೂಷಣ ಸ್ಪರ್ಧೆ ಏರ್ಪಡಿಸಿದ್ದು, ಕೃಷ್ಣನ ಇರುವಿಕೆಯನ್ನು ಮಹಾ ಭಾರತದ ಪುಸ್ತಕದಲ್ಲಿ ನೋಡುತ್ತೇವೆ, ವೇಷಭೂಷಣ ಸ್ಪರ್ಧೆಯ ಮೂಲಕ ಮಕ್ಕಳಲ್ಲಿ ಸಂಸ್ಕೃತಿ ಬಿಂಬಿಸಲು ಪೂರಕವಾಗಿದೆ ಎಂದರು.

ಪಾಂಡವರು ಯುದ್ಧವನ್ನು ಗೆಲ್ಲುವುದಕ್ಕೆ ಶ್ರೀಕೃಷ್ಣನ ಪಾತ್ರ ಮುಖ್ಯಾವಾಗಿದ್ದು, ಕೃಷ್ಣನ ಜೀವನ ಚರಿತ್ರೆ ಚಿಕ್ಕವರಿಂದ ದೊಡ್ಡವರ ವರೆಗೆ ಪಾಠವಾಗಬೇಕು, ಯಶಸ್ಸಿನ ಗುಟ್ಟು, ಕೃಷ್ಣ ವಹಿಸಿದ ಪಾತ್ರ, ಮಹಾ ಭಾರತ ಯುದ್ಧದಲ್ಲಿ ಉಪಯೋಗಿಸಿದ ಬುದ್ಧಿವಂತಿಕೆಯಿಂದ ಪಾಂಡವರು ಗೆಲ್ಲಲು ಕಾರಣವಾಯಿತು ಎಂದು ವಿವರಿಸಿದರು.

ಕೃಷ್ಣ ಗೋವುಗಳನ್ನು ಮೇಯಿಸುವ ಜೊತೆಗೆ ತರಲೆ ಬುದ್ಧಿ, ಅಮ್ಮನೊಂದಿಗೆ ತುಂಟಾಟದ ಬಗ್ಗೆ ಪುಸ್ತಕದಲ್ಲಿ ಅಧ್ಯಾಯನ ಮಾಡಿದ್ದು, ಕೃಷ್ಣ, ರಾಧೆ ಜೋಡಿ ಇಂದು ಎಲ್ಲರ ಮನಸ್ಸಿನಲ್ಲಿ ಉಳಿದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಸಹ ಕಾರ್ಯದರ್ಶಿ ರತೀಶ್ ಕುಮಾರ್, ಪಿ. ರಾಜು, ಅಶೋಕ್, ಮುಖ್ಯ ಶಿಕ್ಷಕ ವಿಜಿತ್ ವ್ಯವಸ್ಥಾಪಕರಾದ ತೇಜಸ್ ಮೂರ್ತಿ, ಅಭಿಷೇಕ್, ತೀರ್ಪುಗಾರರಾದ ಗೀತಾ ಪ್ರಕಾಶ್, ರೂಪ ರವಿ, ವೀಣಾ ವಿಕ್ರಮ್, ಶಿಕ್ಷಕರಾದ ಪ್ರಮೀಳಾ, ಲೀಲಾವತಿ, ಜ್ಯೋತಿ, ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ