ಬಿಜೆಪಿ ಯುವ ನಾಯಕಿ, ರಾಜ್ಯ ಬಿಜೆಪಿ ಟ್ರಾನ್ಸ್ ಪೋರ್ಟ್ ಸೆಲ್ ನ ಅಧ್ಯಕ್ಷೆ ಕುಮಾರಿ ವಿಭಾ ಸುಷ್ಮಾ ಅವರು ಮೂಡಿಗೆರೆ ಕ್ಷೇತ್ರದಾದ್ಯಂತ ಅನೇಕ ಗ್ರಾಮಗಳಿಗೆ ಪರಿಸರ ಸ್ನೇಹಿ ಗಣಪತಿಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಗಂಗಾತಟದ ಮಣ್ಣಿನಿಂದ ಸ್ವಾಭಾವಿಕವಾಗಿ ತಯಾರಿಸಿದ ಪರಿಸರ ಸ್ನೇಹಿ ಗಣಪತಿ ಮತ್ತು ಗೌರಿ ಮೂರ್ತಿಗಳನ್ನು ಕೊಡುಗೆಯಾಗಿ ನೀಡಲಾಗಿದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಾದ್ಯಂತ ವಿವಿಧ ಹೋಬಳಿಗಳ ಅನೇಕ ಗ್ರಾಮಗಳ ಗಣಪತಿ ಸೇವಾ ಸಮಿತಿಗಳಿಗೆ ಸ್ವಾಭಾವಿಕ ಮಣ್ಣಿನ ಗಣಪತಿ ಮತ್ತು ಗೌರಿ ವಿಗ್ರಹಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಮೂಡಿಗೆರೆ ಬಿಜೆಪಿ ಕಛೇರಿ ಪಂಚವಟಿಯಲ್ಲಿ ಗಣಪತಿ, ಗೌರಿ ಮೂರ್ತಿಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮೂಡಿಗೆರೆ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ಸಮಿತಿಯ ಪದಾಧಿಕಾರಿಗಳು, ಬಿಜೆಪಿ ಪಕ್ಷದ ಮುಖಂಡರು, ವಿವಿಧ ಗ್ರಾಮಗಳ ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಾಗೆಯೇ ಕ್ಷೇತ್ರದ ವಿವಿಧ ಹೋಬಳಿ ಕೇಂದ್ರಗಳಲ್ಲಿಯೂ ಸ್ವಾಭಾವಿಕ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಮೂರ್ತಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ವಿಭಾ ಸುಷ್ಮಾ ಅವರು ಮಾತನಾಡಿ ; ಗೌರಿ ಗಣೇಶ ಹಬ್ಬವು ನಮ್ಮ ಹಿಂದೂ ಧರ್ಮದಲ್ಲಿ ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಆಚರಿಸುವ ಗಣಪತಿ ಉತ್ಸವ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಗಣಪತಿ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿ ಪೂಜಿಸಿ ಸಂಭ್ರಮಿಸುತ್ತಾರೆ. ಗಣಪತಿ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜನೆ ಮಾಡಿದಾಗ ಅನೇಕ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಪರಿಸರ ಸ್ನೇಹಿ ಸ್ವಾಭಾವಿಕ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವುದು ಬಹುಮುಖ್ಯವಾಗಿದೆ. ಆ ನಿಟ್ಟಿನಲ್ಲಿ ನನ್ನದೊಂದು ಪುಟ್ಟ ಕೊಡುಗೆಯಾಗಿ ಸ್ವಾಭಾವಿಕ ಮಣ್ಣಿನಿಂದ ನಿರ್ಮಿಸಿದ ಗಣಪತಿ ಮತ್ತು ಗೌರಿ ವಿಗ್ರಹಗಳನ್ನು ವಿತರಣೆ ಮಾಡುತ್ತಿದ್ದೇನೆ ಎಂದಿದ್ದಾರೆ.
ವಿಭಾ ಸುಷ್ಮಾ ಅವರು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.



