IMG-20250830-WA0017

 

 

ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ 2024-25ನೆಯ ಸಾಲಿಗೆ 1.6ಕೋಟಿರೂ. ಲಾಭಗಳಿಸಿದೆ. ಶೇ.12ಲಾಭಾಂಶವನ್ನು ವಿತರಿಸಲಾಗುವುದೆಂದು ಅಧ್ಯಕ್ಷ ಎಚ್.ಎನ್.ನಂಜೇಗೌಡ ಪ್ರಕಟಿಸಿದರು.

ನಗರದ ಗಾಯತ್ರಿದೇವಿ ಕಲ್ಯಾಣಮಂಟಪದಲ್ಲಿ ಪಟ್ಟಣ ಸಹಕಾರ ಬ್ಯಾಂಕ್‍ನ 29ನೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

1997ರಲ್ಲಿ ಸ್ವಾತಂತ್ರ್ಯಯೋಧ ಸಿ.ಎಂ.ಶಾಸ್ತ್ರಿಗಳವರ ನೇತೃತ್ವದ ಸಹಕಾರಿಗಳ ಪರಿಶ್ರಮದಿಂದ ಪ್ರಾರಂಭಗೊಂಡ ಬ್ಯಾಂಕ್ 1800 ಸದಸ್ಯರಿಂದ 8.7ಲಕ್ಷರೂ. ಷೇರು ಬಂಡವಾಳದೊಂದಿಗೆ ಕಾರ್ಯಾರಂಭಿಸಿತ್ತು. ಹಿರಿಯರ ತ್ಯಾಗ, ಸದಸ್ಯರು-ಆಡಳಿತಮಂಡಳಿ-ಸಿಬ್ಬಂದಿವರ್ಗದ ಪರಿಶ್ರಮದಿಂದಾಗಿ ಜಿಲ್ಲೆಯ ಪ್ರಥಮ ಅರ್ಬನ್‍ಬ್ಯಾಂಕ್ ವಿಸ್ತಾರಗೊಂಡಿದೆ. ಪ್ರಸ್ತುತ 4,290 ಸದಸ್ಯರಿಂದ 336.98 ಲಕ್ಷರೂ .ಷೇರು ಮೊಬಲಗನ್ನು ಸಂಗ್ರಹಿಸಿದೆ. 99ಕೋಟಿ.ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಹರ್ಷಿಸಿದರು.

ಆರಂಭದಿಂದಲೂ ಲಾಭದಾಯಕವಾಗಿಯೆ ಮುನ್ನಡೆದಿರುವ ಪಟ್ಟಣಸಹಕಾರ ಬ್ಯಾಂಕ್ ನಗರದ ಪ್ರಮುಖ ಪ್ರದೇಶದಲ್ಲಿ ಸ್ವಂತಕಟ್ಟಡ ಹೊಂದಿದೆ. ಸದಾ ಎ-ಶ್ರೇಣಿಯನ್ನೆ ಗಳಿಸುತ್ತಿದ್ದು, ಸಂಪೂರ್ಣ ಗಣಕೀಕೃತ ವ್ಯವಹಾರ ನಡೆಸುತ್ತಿದೆ ಎಂದರು.

ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಪೈಪೋಟಿಯ ನಡುವೆ ಪ್ರಗತಿಯ ಪಥದಲ್ಲಿ ಮುನ್ನಡೆದಿದ್ದು ನಗರದ ಹೊರವಲಯ ಕಲ್ಯಾಣ ನಗರದಲ್ಲಿ ಶಾಖೆಯೊಂದನ್ನು ತೆರೆದಿದೆ. ಶಾಖೆಗೆ ಕಟ್ಟಡ ನಿರ್ಮಿಸಲು ಸ್ವಂತ ನಿವೇಶನ ಖರೀದಿಸಲು ತೀರ್ಮಾನಿಸಲಾಗಿದೆ ಎಂದ ನಂಜೇಗೌಡ, ಬ್ಯಾಂಕ್‍ನ ಪ್ರತಿ ಷೇರಿನ ಮುಖಬೆಲೆ 2,000ರೂ. ಇದ್ದು ಅದಕ್ಕಿಂತ ಕಡಿಮೆ ಇರುವ ಸದಸ್ಯರು ಬಾಕಿಹಣ ಪಾವತಿಸಿ ಸರಿದೂಗಿಸಿಕೊಳ್ಳುವ ಮೂಲಕ ಬ್ಯಾಂಕಿನ ಬೆಳವಣಿಗೆಗೆ ಕಾರಣೀಭೂತರಾಗಿರಬೇಕೆಂದು ಮನವಿ ಮಾಡಿದರು.

ಪಟ್ಟಣ ಸಹಕಾರ ಬ್ಯಾಂಕ್ ಸದ್ಯದಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿರುತ್ತದೆ. ಶಾಖೆಗಳ ವಿಸ್ತರಣೆ ಕುರಿತಂತೆ ಜನರ ಬೇಡಿಕೆಗೆ ಅನುಗುಣವಾಗಿ ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಲಿದೆ ಎಂದ ಅಧ್ಯಕ್ಷ ನಂಜೇಗೌಡ, ಷೇರುಬಂಡವಾಳ ಸಂಗ್ರಹಣೆಯಲ್ಲಿ 2022ಕ್ಕೆ 290ಲಕ್ಷ, ಇದ್ದದ್ದು ಈಗ 336ಲಕ್ಷರೂ.ಕ್ಕೆ ಏರಿದೆ. ಠೇವಣಿ ಸಂಗ್ರಹದಲ್ಲೂ ಗಣನೀಯ ಪ್ರಗತಿ ಸಾಧಿಸಲಾಗಿದೆ. 2022-23ರಲ್ಲಿ 6,868ಲಕ್ಷ ರೂ. ಇದ್ದ ಠೇವಣಿ ಈಗ 8,473ಲಕ್ಷ ರೂ.ಗಳಿಗೆ ಏರಿದೆ ಎಂದು ವಿವರಿಸಿದರು.

2022-23ನೆಯ ಸಾಲಿನಲ್ಲಿ ಒಟ್ಟಾರೆ 4,876ಲಕ್ಷರೂ.ಗಳ ಸಾಲ ಮತ್ತು ಮುಂಗಡ ನೀಡಲಾಗಿತ್ತು. 2023-24ರಲ್ಲಿ 5,406ಲಕ್ಷ ರೂ. ಪ್ರಸ್ತುತ 5,898 ಲಕ್ಷರೂ. ನೀಡಲಾಗಿದೆ. ದುಡಿಯುವ ಬಂಡವಾಳವು ಮೂರು ವರ್ಷದಲ್ಲಿ ಏರಿಕೆ ಕಂಡಿದೆ. ಆರ್‍ಬಿಐ ನಿರ್ದೇಶನದ ಅನುಸಾರ 3,794ಲಕ್ಷರೂ.ಗಳ ಹೂಡಿಕೆ ಮಾಡಲಾಗಿದೆ.

2022-23ರಲ್ಲಿ 133.52ಲಕ್ಷರೂ. 2023-24ರಲ್ಲಿ 145.22ಲಕ್ಷರೂ. 2024-25ರಲ್ಲಿ 160.02ಲಕ್ಷರೂ.ಗಳ ಲಾಭ ಸಂಪಾದಿಸಿದೆ ಎಂದ ನಂಜೇಗೌಡ, ಆಡಳಿತ ಮಂಡಳಿಯ ತೀರ್ಮಾನದಂತೆ ಇಂದು ಮಹಾಸಭೆಯಲ್ಲಿ ಷೇರುದಾರರಿಗೆ ಶೇ.12ರ ಲಾಭಾಂಶ ವಿತರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಿಸಿದರು.

ಬ್ಯಾಂಕಿನ ಷೇರುದಾರರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಹಿರಿಯ ನಿರ್ದೇಶಕರುಗಳಾದ ಪಿ.ಮಂಜುನಾಥಜೋಷಿ ಸ್ವಾಗತಿಸಿ, ಎಂ.ವಿ.ಷಡಕ್ಷರಿ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ವಿ.ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಭಗವತಿಹರೀಶ್, ನಿರ್ದೇಶಕರುಗಳಾದ ಬಿ.ಎಚ್.ಶ್ರೀಕಾಂತಪೈ, ಎಂ.ಎಸ್.ಉಮೇಶ್, ಎಚ್.ಸಿ.ಶಶಿಪ್ರಸಾದ್, ಶೈಲಜಾಮಂಜುನಾಥ್, ಸಿ.ಆರ್.ಮಂಜು, ಎಚ್.ಎಂ.ಚಂದ್ರಶೇಖರ್, ಕೆ.ಡಿ.ಪುಟ್ಟಣ್ಣ, ಸಿ.ವಿ.ಹರ್ಷ ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ