ಜೇಸಿ ಸಪ್ತಾಹದ ನಾಲ್ಕನೇ ದಿನವಾದ ಶುಕ್ರವಾರ ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಬಿಸಿನೆಸ್ ಮೀಟ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ದಭದಲ್ಲಿ ಮೂಡಿಗೆರೆ ರೈತ ಉತ್ಪಾದಕ ಸಂಸ್ಥೆಯ ಕುಮಾರಿ ಸೃಷ್ಟಿ ಅವರು ಜೆ ಸಿ ಸದಸ್ಯರು ಮತ್ತು ರೈತ ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಮತ್ತು ವ್ಯವಹಾರ ಮಾಡುವ ಎಲ್ಲಾ ವ್ಯಾಪಾರಿಗಳ ಜೋತೆ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಜೆ ಸಿ ಅಧ್ಯಕ್ಷ ಜೆ ಸಿ ಜಗತ್ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಮೂಡಿಗೆರೆ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಪೂರ್ಣೇಶ್ ಜಿ. ಹೊಸಳ್ಳಿ ಹಾಗೂ ಜೇಸಿಐ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ದಿನ ಜೇಸಿಐ ಸಂಸ್ಥೆಯ ವತಿಯಿಂದ ಎಲೆಮರೆ ಕಾಯಿಯಂತೆ ಬಿಸಿನೆಸ್ ಕ್ಷೇತ್ರದಲ್ಲಿ ತನ್ನದೇ ಸಾಧನೆ ಮಾಡಿದ ಗಿರೀಶ್ ಮಣ್ಣಿಕೆರೆ ಅವರನ್ನು ಗೌರವಿಸಲಾಯಿತು.
ಆಟೋ ಚಾಲಕನಿಂದ ತಮ್ಮ ವೃತ್ತಿ ಜೀವನ ಪ್ರಾರಂಭಿಸಿ ಇಂದು ಪ್ರೇರಣ್ ಟ್ರೇಡರ್ಸ್, ಪ್ರೇರಿತ್ ಟ್ರೇಡರ್ಸ್, ಪ್ರೇರಣ್ ಫಾರ್ಟಿಲೈಸರ್, ಪ್ರೇರಣ್ ಪ್ರೇರಿತ್ ಪ್ಯೂಯಲ್ ಪಾಯಿಂಟ್ ವರಿಗೆ ತನ್ನ ಉದ್ಯಮದಲ್ಲಿ ಬೆಳೆದು ಬಂದ ಹಾದಿಯನ್ನು ಗಿರೀಶ್ ಅವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೇಸಿ ಅಧ್ಯಕ್ಷ ಜಗತ್ ಬಿ ಎಂ ಮತ್ತು ಸದಸ್ಯರು, ಪೂರ್ವ ಅಧ್ಯಕ್ಷ ಜೇಸಿ ಯೋಗೀಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಿರೀಶ್ ಅವರು ತಮ್ಮ ಬೆಳವಣಿಗೆ ಸಹಕಾರ ನೀಡದ ಎಲ್ಲಾ ಸಿಬ್ಬಂದಿಗಳು ಹಾಗೂ ಸ್ನೇಹಿತರನ್ನು ನೆನಪು ಮಾಡಿಕೊಂಡರು. ಜೋತೆಗೆ ಗೋಣಿಬಿಡು ಹೊಯ್ಸಳ ಜೇಸಿಐ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಕುರಿತು ಹರ್ಷ ವ್ಯಕ್ತಪಡಿಸಿದರು



